ಹೊಲಿಗೆ ಹಾಕದೆ ವಿಶೇಷ ತ್ರಿವರ್ಣ ಧ್ವಜ ಸಿದ್ದಪಡಿಸಿದ ನೇಕಾರ; ಧ್ವಜ ತಯಾರಿಸಲು ತಗಲುವ ವೆಚ್ಚಕ್ಕಾಗಿ ಏನು ಮಾಡಿದ ನೋಡಿ..

0
317

ಭಾರತ ದೇಶದ ಹೆಮ್ಮೆಯ ತ್ರಿವರ್ಣ ಧ್ವಜದ ಬಗ್ಗೆ ಇಡಿ ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನರಲ್ಲೂ ಎಷ್ಟೊಂದು ದೇಶ ಪ್ರೇಮ, ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿಯೇ ಯೋಧರು ತಮ್ಮ ಪ್ರಾಣವನ್ನು ಬಲಿ ಕೊಟ್ಟು ದೇಶದ ಬಾವುಟವನ್ನು ಮತ್ತು ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಕನ್ನಡಿಯಾಗಿ ತೋರುವ ದೇಶ ಭಕ್ತಿಯಾದರೆ ಹೆಮ್ಮೆಯಿಂದ ತೆಲೆಯತ್ತಿ ಹಾರಾಡುವ ದ್ವಜವನ್ನು ತಯಾರಿಸುವ ನೇಕಾರರು ಎಷ್ಟೊಂದು ಪ್ರೀತಿ, ಭಕ್ತಿಯಿಂದ ಬಾವುಟಕ್ಕೆ ಶಕ್ತಿಯನ್ನು ತುಂಬುತ್ತಾರೆ ಅನ್ನೋದಕ್ಕೆ ಇಲ್ಲೊಬ್ಬ ನೇಕಾರ ಸಾಕ್ಷಿಯಾಗಿದ್ದು, ಈ ವಿಶೇಷ ಧ್ವಜವನ್ನು ತಯಾರಿಸಲು ಮನೆಯನ್ನೇ ಮಾರಿದ್ದಾನೆ.

ಹೌದು ವಿಶೇಷವಾದ ಮತ್ತು ದೇಶದಲ್ಲಿ ಯಾರು ತಯಾರಿಸದ ಧ್ವಜವನ್ನು ತಯಾರಿಸಲು ಪಣತೊಟ್ಟ ಆಂಧ್ರಪ್ರದೇಶದ ನೆಕಾರನೊಬ್ಬ ಒಂದು ಹೊಲಿಗೆ ಹಾಕದೆ ತ್ರಿವರ್ಣ ಧ್ವಜ ತಯಾರಿಸಿದ್ದಾನೆ. ಹಾಗೆಯೇ ಇದನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕನಸು ಕಟ್ಟಿದ್ದೇನೆಂದು ಹೇಳಿಕೊಂಡಿದ್ದಾರೆ. ಆರ್. ಸತ್ಯನಾರಾಯಣ ಎಂಬುವ ನೇಕಾರ ವೃತ್ತಿಯನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ಇವರು ಯಾವುದೇ ಹೊಲಿಗೆ ಇಲ್ಲದ ಅಖಂಡ ತ್ರಿವರ್ಣ ಧ್ವಜ ನೇಯುವ ಭವ್ಯ ಕನಸು ಹೊಂದಿದ್ದರು. ಇದಕ್ಕಾಗಿ ಅವರಿಗೆ 6.5 ಲಕ್ಷ
ರೂಪಾಯಿ ಅಗತ್ಯವಿತ್ತು. ಹೀಗಾಗಿ ತಮ್ಮ ಸ್ವಂತ ಮನೆಯನ್ನೆ ಮಾರಾಟ ಮಾಡಿ ತಮ್ಮ ಕನಸು ನನಸಾಗಿಸಿಕೊಳ್ಳುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.

ನೇಕಾರ ಸತ್ಯನಾರಾಯಣ ಅವರಿಗೆ ಇಂಥಹ ಅಪರೂಪದ ಧ್ವಜ ನೇಯಲು ಅಗತ್ಯವಾಗಿದ್ದ 6.5 ಲಕ್ಷ ರು.ಗಾಗಿ ಹಣವನ್ನು ಕೂಡಿಸಲು ಆಗದಿದ್ದಾಗ ತಮ್ಮ ಸ್ವಂತ ಮನೆಯನ್ನೇ ಮಾರಿ ಬಾಡಿಗೆ ಮನೆಗೆ ತೆರಳಿದ್ದಾರೆ. ಇವರು ಮೂಲತ ಗೋದಾವರಿ ಜಿಲ್ಲೆಯ ವೇಮವರಂ ಗ್ರಾಮದ ಕೈಮಗ್ಗ ನೇಕಾರರಾಗಿರುವ ಸತ್ಯನಾರಾಯಣ 12 ಅಡಿ ಅಗಲ ಹಾಗೂ 8 ಅಡಿ ಎತ್ತರದ ಈ ಧ್ವಜವನ್ನು ಯಾವುದೇ ಹೊಲಿಗೆ ಹಾಕದೆ ಸಿದ್ದಪಡಿಸಿದ್ದು, ಇದನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕನಸು ಕಟ್ಟಿದ್ದೇನೆಂದು ಹೇಳಿಕೊಂಡಿದ್ದಾರೆ ಆರ್. ಅಷ್ಟೇಅಲ್ಲದೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ, ಧ್ವಜ ಸಿದ್ದಪಡಿಸಿದ್ದಾರೆ.

ಈ ದ್ವಜವನ್ನು ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶಾಖಪಟ್ಟಣಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಸತ್ಯನಾರಾಯಣ ಅವರು ತ್ರಿವರ್ಣ ಧ್ವಜವನ್ನು ಪ್ರಧಾನಿಗೆ ಹಸ್ತಾಂತರಿಸಿದ್ದಾರೆ. ಆದರೆ ಈ ವಿಶಿಷ್ಟಬಾವುಟವನ್ನು ಮೋದಿ ಅವರು ವೀಕ್ಷಣೆ ಮಾಡಿದ್ದಾರೆಯೇ ಎಂಬುದು ಗೊತ್ತಿಲ್ಲ ದ್ವಜವನ್ನು ನೀಡುವಾಗ ಸತ್ಯನಾರಾಯಣ. ಅವರಿಗೆ ಧ್ವಜದ ವಿಶಿಷ್ಟತೆ ಬಗ್ಗೆ ವಿವರಿಸಲು ಅವಕಾಶ ಸಿಕ್ಕಿರಲಿಲ್ಲ. ಈಗ ದ್ವಜದ ಬಗ್ಗೆ ಹೇಳಿಕೊಂಡಿರುವ ಅವರು.

ಈ ವಿಶೇಷ ಧ್ವಜವನ್ನು ತಯಾರಿಸುವುದು ನನ್ನ ಹಠ ಅನ್ನೋದಕ್ಕಿಂತ ದೇಶದ ಮೇಲಿರುವ ಭಕ್ತಿಯಿಂದ ಇಂತಹ ಧ್ವಜವನ್ನು ತಯಾರಿಸಬೇಕು ಎನ್ನುವ ಆಸೆ ಇತ್ತು. ಅದಕ್ಕಾಗಿ ಬಹಳಷ್ಟು ಶ್ರಮ ಪಟ್ಟಿದ್ದೇನೆ ಈ ಧ್ವಜ ಸಿದ್ದಪಡಿಸಲು ಸತತ ನಾಲ್ಕು ವರ್ಷ ಶ್ರಮಪಟ್ಟಿದ್ದೇನೆ. ಇದನ್ನು ತಯಾರಿಸಲು ಸಾಕಾಗುವಷ್ಟು ಹಣ ನನ್ನಲ್ಲಿ ಇರಲಿಲ್ಲ ಅದಕ್ಕಾಗಿ ಪೂರ್ವಜರಿಂದ ಬಳುವಳಿಯಾಗಿ ಬಂದ ಮನೆಯನ್ನು ಮಾರಾಟ ಮಾಡಿ ಧ್ವಜವನ್ನು ಸಿದ್ದಪಡಿಸಿದ್ದೇನೆ. ಇದರಲ್ಲಿ ಎಲ್ಲಿವೂ ಒಂದು ಹೊಲಿಗೆ ಹಾಕಿಲ್ಲ, ಪ್ರತ್ಯೇಕವಾಗಿ ಮೂರು ಬಣ್ಣದ ದಾರವನ್ನು ಬಳಸಿ ತಯಾರಿಸಿದ್ದೇನೆ ಇದನ್ನು ದೆಹಲಿಯ ಕೆಂಪುಕೋಟೆಯ ಮೇಲೆ ಹಾರಿಸಬೇಕು ಎನ್ನುವ ಮಹದಾಸೆ ಇಟ್ಟುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.