ಆಂಧ್ರಾ ಸ್ಪೆಶಲ್ ಮಟನ್ ಪೆಪ್ಪರ್ ಮಾಡುವ ವಿಧಾನ..!!

0
644

ನಾನ್ವೆಜ್ ಪ್ರಿಯರಿಗೆ ಮಟನ್ ಖಾದ್ಯಅಂದ್ರೆ ತುಂಬಾನೇ ಇಷ್ಟ ಏಕೆಂದರೆ ಅತಿಯಾದ ರುಚಿಯ ಜತೆಗೆ ಆರೋಗ್ಯಕೆ ಬೇಕಾದ ಕಬ್ಬಿಣಾಂಶದಂತಹ ಹಲವಾರು ಶಕ್ತಿಯನ್ನು ಹೊಂದಿದೆ. ಹಾಗೆಯೇ ಮಟನ್ ಖಾದ್ಯಗಳಿಗೆ ಖಾರವೆ ಮುಖ್ಯವಾಗಿರುತ್ತೆ, ಮತ್ತು ಖಾರ ಹಾಕಿ ಮಟನ್ ನಲ್ಲಿ ನೂರಾರು ತರಹದ ಐಟಂಗಳನ್ನು ಮಾಡಬಹುದು. ಇಂತಹ ಮಟನ್ ಖಾದ್ಯ ಮಾಡುವಲ್ಲಿ ಆಂಧ್ರಾ ಹೆಸರುವಾಸಿಯಾಗಿದೆ ಹೀಗೆ ,ಆಂಧ್ರಾ ಕರಿ, ಸುಕ್ಕಾ ಮಸಾಲ, ಗ್ರೇವಿ, ಮಟನ್ ಬಿರಿಯಾನಿ ಇತರೆ ವಿವಿಧ ಮಟನ್ ಖಾದ್ಯಗಳ ರುಚಿಯನ್ನು ನೋಡಿದಿರಾ.

ಇವೆಲ್ಲವೂಕಿಂತ ಆಂಧ್ರಾ ಸ್ಪೆಶಲ್ ರೆಸಿಪಿಯಾದ `ಮಟನ್ ಪೆಪ್ಪರ್’ ರುಚಿ ನೋಡಿ, ಇದು ಎಲ್ಲಾ ಸೀಸನ್ ನಲ್ಲಿ ಇಷ್ಟವಾಗುವ ಖಾದ್ಯವಾಗಿದೆ. ಇದನ್ನು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ.
ಬೇಕಾದ ಪದಾರ್ಥಗಳು:
* ಅರ್ಧಕೆಜಿ ಮಟನ್
* ಒಂದು ಸ್ಪೂನ್ ಅರಶಿನ
* ಕತ್ತರಿಸಿದ ಮೂರು ಈರುಳ್ಳಿ
* ಎರಡು ಟೊಮೇಟೊ
* ಎರಡು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಒಂದು ಸ್ಪೂನ್ ಖಾರದ ಪುಡಿ
* ಎರಡು ಸ್ಪೂನ್ ಕರಿಮೆಣಸಿನ ಪುಡಿ
* 6-7 ಎಸಳು ಕರಿಬೇವು

* ಕೊತ್ತಂಬರಿ ಸೊಪ್ಪು
* 1/2 ಸ್ಪೂನ್ ಫೆನಲ್ ಬೀಜಗಳು
* ಒಂದು ಸ್ಪೂನ್ ಪೆಪ್ಪರ್ ಕೋರ್ನ್ಸ್
* 1/2 ಸ್ಪೂನ್ ಪೂಪ್ಪಿ ಸೀಡ್ಸ್
* ಒಂದು ಸ್ಪೂನ್ ಜೀರಿಗೆ
* ಸ್ವಲ್ಪ ದಾಲ್ಚೀನಿ
*ನಾಲ್ಕು ಲವಂಗ
*ಎರಡು ಏಲಕ್ಕಿ
*ರುಚಿಗೆ ತಕಷ್ಟು ಉಪ್ಪು
* 3 ಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:

1. ಮಟನ್ ಅನ್ನು ಅರಶಿನ ಉಪ್ಪು ಹಾಗೂ 3 ಕಪ್‌ನಷ್ಟು ನೀರು ಸೇರಿಸಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಿ.
2. ನಂತರ ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದೊಡನೆ ಫೆನ್ನಲ್ ಬೀಜ, ಜೀರಿಗೆ, ಪೂಪ್ಪಿ ಸೀಡ್ಸ್, ಪೆಪ್ಪರ್ ಕೋರ್ನ್ಸ್, ಲವಂಗ ಮತ್ತು ಏಲಕ್ಕಿಯನ್ನು ಫ್ರೈ ಮಾಡಿ.
3. ನಂತರ ಅವುಗಳನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
4. ಬಾಣಲಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕರಿಬೇವಿನೆಸಳಿನಿಂದ ಒಗ್ಗರಣೆ ನೀಡಿ.
5. ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿದುಕೊಳ್ಳಿ.
6. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಬೇಯಿಸಿ.
7. ಬೇಯಿಸಿದ ಮಟನ್ ತುಂಡುಗಳನ್ನು ಸೇರಿಸಿ ಮತ್ತು ಅದರ ರಸ ಬರುವವರೆಗೆ ಹುರಿಯಿರಿ.
8. ಈಗ ಟೊಮೇಟೊ, ಮೆಣಸಿನ ಪುಡಿ ಪೌಡರ್ ಮಾಡಿದ ಮಸಾಲೆಯನ್ನು ಸೇರಿಸಿ.
9. ಮಸಾಲಾ ಚೆನ್ನಾಗಿ ಮಟನ್‌ನೊಂದಿಗೆ ಕವರ್ ಆಗಿರುವಂತೆ ನೋಡಿಕೊಳ್ಳಿ
10. ಕಾಳುಮೆಣಸಿನ ಪುಡಿಯನ್ನು ಮೇಲ್ಭಾಗಕ್ಕೆ ಚಿಮುಕಿಸಿ 2 ರಿಂದ 3 ನಿಮಿಷಗಳ ಕಾಲ ಬೇಯಿಸಿ.
11. ಕೊನೆಗೆ ನೀವು ಮಟನ್ ಪೆಪ್ಪರ್ ಫ್ರೈ ಅನ್ನು ಆನಿಯನ್ ರಿಂಗ್, ಹಸಿಮೆಣಸು ಮತ್ತು ಕೊತ್ತಂಬರಿ ಎಲೆಯೊಂದಿಗೆ ಅಲಂಕರಿಸಿ ಈಗ ಮಟನ್ ಪೆಪ್ಪರ್ ರೆಡಿಯಾಗಿದೆ. ಸವಿದು ನೋಡಿ.