ನಿಮ್ಮ ಕಷ್ಟ ನಿವಾರಣೆ ಆಗಲು ಉಡುಪಿಯ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬೇಟಿ ನೀಡಲೇಬೇಕು.

0
1644

Kannada News | Karnataka Temple History

ಇದೇ ಆನೆಗುಡ್ಡೆ ವಿನಾಯಕ ದೇವಸ್ಥಾನ ಇದು ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದೆ. ಕಾಲಕ್ರಮೇಣ, ಈ ದೇವಸ್ಥಾನವಿರುವ ಸ್ಥಳವು ಬೇರೆ ಬೇರೆ ಹೆಸರುಗಳನ್ನು ಪಡೆದುಕೊಂಡಿತು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.
ಈ ದೇವಸ್ಥಾನದಲ್ಲಿ ವಿನಾಯಕ ರ್ಮೂತಿಯು ನಿಂತಿರುವ ಭಂಗಿಯಲ್ಲಿ ಭಕ್ತಾದಿಗಳಿಗೆ ದರ್ಶನವನ್ನು ಕೊಟ್ಟಿರುತ್ತಾನೆ. ರ್ಮೂತಿಯ ನಾಲ್ಕು ಹಸ್ತದಲ್ಲಿ ಎರಡು “ವರದ ಹಸ್ತ”ವು ಭಕ್ತರು ಬೇಡಿದ ವರಗಳನ್ನು ಕೊಡಲೂ, ಇನ್ನೆರೆಡು ಹಸ್ತವು ಶರಣಾಗತಿಯಾಗಿರ ಬೇಕೆಂಬುದನ್ನು ತೋರಿಸುತ್ತದೆ.

 

ಇತಿಹಾಸ

ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲವು ಬಂದಾಗ ಅಗಸ್ತ್ಯಮುನಿಗಳು ವರುಣನ ಮನವೂಲಿಸಲು ಯಜ್ನ್ಯವೂಂದನ್ನು ಇಲ್ಲಿ ನೆರವೇರಿಸಿದರು. ಈ ಯಜ್ನ್ಯವನ್ನು ಭಂಗಗೊಳಿಸಲು “ಕುಂಭಾಸುರ”ನೆಂಬ ರಾಕ್ಷಸನು ಋಷಿ ಮುನಿಗಳಿಗೆ ಉಪಟಳ ನೀಡಲಾರಂಭಿಸಿದನು. ಋಷಿಗಳನ್ನು ಕಾಪಾಡಲು ಭೀಮನು ಗಣೇಶನಿಂದ ವರವಾಗಿ ಪಡೆದ ಗದೆಯಿಂದ ಕುಂಭಾಸುರನನ್ನು ಕೊಂದಿರುವನು.

ಇಲ್ಲಿಗೆ ತಲುಪುವುದು ಹೇಗೆ?

ರಸ್ತೆ ಮಾರ್ಗ: ಉಡುಪಿ ಮತ್ತು ಕುಂದಾಪುರದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ಇದೆ. ಉಡುಪಿಯಿಂದ ೩೨ ಕಿ.ಮೀ ಹಾಗೂ ಕುಂದಾಪುರದಿಂದ ೯ ಕಿ.ಮೀ ದೂರ.
ಹತ್ತಿರದ ರೈಲ್ವೆ ನಿಲ್ದಾಣ: ಬಾರಕೂರು (ಕೊಂಕಣ ರೈಲ್ವೆ ) ಅಥವಾ ಕುಂದಾಪುರ (ಕೊಂಕಣ ರೈಲ್ವೆ ).
ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

 

ಆಹಾರ ಮತ್ತು ವಸತಿ ಸೌಕರ್ಯಗಳು

ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ “ಆಮೋದ” ಮತ್ತು “ಪ್ರಮೋದ” ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು.

ಸಂರ್ಪಕ ವಿಳಾಸ
ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಶಿ, ಕುಂದಾಪುರ ತಾ. ಉಡುಪಿ ಜಿಲ್ಲೆ.

ಇತರೇ ದೇವಸ್ಥಾನಗಳು
ಆನೆಗುಡ್ಡೆಯಲ್ಲಿ ಇರುವ ಇತರೇ ದೇವಸ್ಥಾನಗಳು:
“ಶ್ರೀ ಹರಿಹರ ದೇವಸ್ಥಾನ”, “ಶ್ರೀ ಸೂರ್ಯ ನಾರಾಯಣ ದೇವಸ್ಥಾನ” ಮತ್ತು “ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ”. ಎಲ್ಲಾ ದೇವಸ್ಥಾನಗಳು ಆನೆಗುಡ್ಡೆ ವಿನಾಯಕ ದೇವಸ್ಥಾನದ ಹತ್ತಿರದಲ್ಲಿಯೇ ಇದೆ.

ಕರ್ನಾಟಕದ ಸುಪ್ರಸಿದ್ಧ ಶಕ್ತಿಶಾಲಿ ದೇವಸ್ಥಾನ ಒಮ್ಮೆ ಭೇಟಿ ಕೊಡಿ..
ಶುಭವಾಗಲಿ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಇನ್ನೇನಿದೆ??

Also Read: ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡ “ಶಿವ ಲಿಂಗ”ದ ಹಿಂದಿನ ಪುರಾಣ, ಮಹತ್ವ ತಿಳಿದುಕೊಂಡು ಶಿವನ ಕೃಪೆಗೆ ಪಾತ್ರಾರಾಗಿ..!!