ಇನ್ಮೇಲೆ ಅನಿಲ್ ಕುಂಬ್ಳೆ ನಿಮ್ ಪ್ರೆಶ್ನೆಗೆ answer ಮಾಡ್ತಾರೆ…

0
619

ಹೌದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿಕೊಂಡು ಇಂಥದ್ದೊಂದು ಅವಕಾಶವನ್ನು ನೀಡುತ್ತಿದೆ, ಟೀಂ ಇಂಡಿಯಾದ ನೂತನ ಕೋಚ್ ಅನಿಲ್ ಕುಂಬ್ಳೆ ಅವರಿಗೆ ಸಾರ್ವಜನಿಕರು ಕೂಡಾ #askthecoach ಹ್ಯಾಶ್ ಟ್ಯಾಗ್ ಹಾಕಿ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ಟ್ವಿಟ್ಟರ್ ಒದಗಿಸುತ್ತಿದೆ.

ಕಳೆದ ಜೂನ್ ಜೂನ್ 23 ರಂದು ಭಾರತ ತಂಡದ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ಮಾಜಿ ಆಟಗಾರ 43 ವರ್ಷ ವಯಸ್ಸಿನ ಅನಿಲ್ ಕುಂಬ್ಳೆ ಇಂದು(5th) ಸಂಜೆ ನಾಲ್ಕು ಗಂಟೆಗೆ ಲೈವ್ ಇರಲಿದ್ದು ಸಾರ್ವಜನಿಕರು ತಮ್ಮ ಪ್ರೆಶ್ನೆಗಳನ್ನು ಕೋಚ್ ಅವರಿಗೆ ಕೇಳಬಹುದು ಎಂದು BCCI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ(ಜುಲೈ 21ರಿಂದ 49 ದಿನ)ಕ್ಕೆ ತಂಡವನ್ನು ಅನಿಲ್ ಕುಂಬ್ಳೆ ಅವರು ಅಣಿಗೊಳಿಸುತ್ತಿದ್ದು, ಭಾರತಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ಇರಲಿದೆ.