‘ಕಿರಿಕ್ ಪಾರ್ಟಿ’ಯ ಮಾಂತ್ರಿಕ ಸಂಗೀತ ನಿರ್ದೇಶಕ – ಅಜನೀಶ್ ಲೋಕನಾಥ್

0
952

ಕನ್ನಡ ಚಿತ್ರರಂಗವನ್ನು ಮೊತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋದ ಚಿತ್ರ ರಂಗಿ-ತರಂಗ. ಈ ಚಿತ್ರದ ಸಂಗೀತ ನಿರ್ದೇಶಕರು ಅನೂಪ್ ಭಂಡಾರಿ , ಆದರೆ ಆ ಲೆವೆಲ್ ಗೆ ನಡುಕ ಹುಟ್ಟಿಸುವಂತಹ ಹಿನ್ನೆಲೆ ಸಂಗೀತ ಕೂಡ ಕಾರ ಎನ್ನುವುದನ್ನು ನಾವು ಮರೆಯಬಾರದು. ಕನ್ನಡ ಚಿತ್ರರಂಗದಲ್ಲಿ ನೆನಪಿನಲ್ಲಿ ಉಳಿಯುವಂತಹ ಹಿನ್ನೆಲೆ ಸಂಗೀತ ಬಳಸೋದು ಬಹಳ ಕಡಿಮೆಯಾಗಿಬಿಟ್ಟಿದೆ ಎನ್ನುವವರಿಗೆ ಈ ಚಿತ್ರ ತೋರಿಸಿದರೆ ಆಡಿಕೊಳ್ಳುವವರು ತೆಪ್ಪಗಾಗಿಬಿಡುತ್ತಾರೆ.

ಹೌದು, ನಾವು ಇವತ್ತು ಹೇಳ ಹೊರಟಿರುವುದು ಅರ್ಜುನ್ ಜನ್ಯ ನಂತರ ಇತ್ತೀಚೆಗೆ ಕನ್ನಡದ ಚಿತ್ರರಂಗದ ಸಂಗೀತ ಲೋಕದಲ್ಲಿ ಮತ್ತೊಂದು ಮಿಂಚು ಹರಿಸಲು ಹೊರಟಿರುವ ಅಜನೀಶ್ ಲೋಕನಾಥ್ ಬಗ್ಗೆ. ಲೋಕನಾಥ್ ಅವರು ಭದ್ರಾವತಿ ಮೂಲದ ಯುವ ಪ್ರತಿಭೆ . ‘ರಂಗಿತರಂಗ’ , ‘ಉಳಿದವರು ಕಂಡಂತೆ’ , ‘ಅಕಿರಾ’ , ‘ಇಷ್ಟಕಾಮ್ಯ’ ಅವರ ಯಶಸ್ಸಿನ ಬುಟ್ಟಿಯಲ್ಲಿರುವ ಚಿತ್ರಗಳು. ಈಗಾಗಲೇ ಇವರ ‘ಕಿರಿಕ್ ಪಾರ್ಟಿ’ ಮತ್ತು ‘ಸಿಪಾಯಿ’ ಸಿನಿಮಾದ ಹಾಡುಗಳು ಸದ್ದು ಮಾಡುತ್ತಿವೆ.

ನಿಮಗೆಲ್ಲರಿಗೂ ಗೊತ್ತಿರಲಿ, ಯಾವಾಗ ಉಳಿದವರು ಕಂಡಂತೆ ಸಿನಿಮಾದ ಟ್ರೈಲರ್ ಬಿಡುಗಡೆ ಆಯ್ತೋ ಆವಾಗ್ಲೇ ಕನ್ನಡಕ್ಕೆ ಒಂದು ಅಪರೂಪವಾದ ಪ್ರತಿಭೆ ಸಿಕ್ಕಿದೆ ಎಂದು ಹಲವಾರು ಸಿನಿಪ್ರೀಯರಿಗೆ ಗೊತ್ತಾಗಿಬಿಡ್ತು, ಅಬ್ಬಾ ಸಿನಿಮಾ ಸಂಗೀತ ಹಾಡುಗಳು ಒಂದು ರೀತಿಯ ಟ್ರೆಂಡ್ ಕ್ರಿಯೇಟ್ ಮಾಡಿದವು ಕೂಡ. ಉಳಿದವರು ಕಂಡಂತೆ ಸಿನಿಮಾದಲ್ಲಿ ಬಳಸಿದ ಕರಾವಳಿ ಭಾಗದ ವಾದ್ಯಗಳನ್ನು ಬಳಸಿ ಸಂಯೋಜಿಸಿದ ಹಿನ್ನೆಲೆ ಸಂಗೀತಕ್ಕೆ ಮಾರು ಹೋಗದವರೇ ಇಲ್ಲ ಎನ್ನಬಹುದು.

ಇತ್ತೀಚಿಗೆ ಕನ್ನಡ ಚಿತ್ರರಂಗದ most expected ಚಿತ್ರ ಕಿರಿಕ್ ಪಾರ್ಟಿಗೂ ಸಹ ಇವರದೇ ಸಂಗೀತ ನಿರ್ದೇಶನವಿದೆ . ಚಿತ್ರತಂಡ ಇತ್ತೀಚಿಗೆ ೩ ಹಾಡುಗಳನ್ನು ಬಿಡುಗಡೆ ಮಾಡಿದ್ದು ಎಲ್ಲವೂ ಒಂದಕ್ಕಿಂತ ಒಂದು ಬಹಳ ಸೊಗಸಾಗಿದೆ . ಫ್ರೆಶ್ ಟ್ಯೂನ್ಸ್ !!!.. ಇಂತಹ ಮಹಾನ್ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಸದುಪಯೋಗ ಪಡಿಸಿಕೊಂಡಿದ್ದೇ ಆದಲ್ಲಿ ಬೇರೆ ಇಂಡಸ್ಟ್ರಿ ಅವರು ಕನ್ನಡ ಚಿತ್ರರಂಗದ ಈ ಪ್ರತಿಭೆಯನ್ನು ಬಳಸಿಕೊಂಡು ಕನ್ನಡದ ಆಚೆಗೂ ಸಹ ಕನ್ನಡದ ಹಿರಿಮೆ ಹಿಗ್ಗಿಸುವುದರಲ್ಲಿ ಖಂಡಿತವಾಗಿಯೂ ಎರಡು ಮಾತಿಲ್ಲ .. ಇವರಿಗೆ Thenewsism.com ತಂಡದಿಂದ ಆಲ್ ಬೆಸ್ಟ್.