ಅಂಜೂರದಲ್ಲಿನ ಅದ್ಭುತವಾದ ಗುಣಗಳು

0
2077

ಅಂಜೂರ ಹಣ್ಣಿನಲ್ಲಿ ವಿಶೇಷವಾದ, ಅನೇಕ ಪೋಷಕಾಂಶಗಳಿವೆ ಎಂದು ಪರಿಣಿತರು ಹೇಳುತ್ತಾರೆ. ದಿನಕ್ಕೆ ಎರಡು ಹಣ್ಣು ತಿಂದರೆ ಸಾಕು ಅನೇಕ ಸಮಸ್ಯೆಗಳು ದೂರವಾಗುತ್ತವೆಂದು ಧೃಡೀಕರಿಸಿದ್ದಾರೆ. ಪ್ರಮುಖವಾಗಿ ಮಕ್ಕಳಿಲ್ಲದವರಿಗೆ, ಮಕ್ಕಳನ್ನು ಪಡೆಯಬೇಕೆಂದು ಬಯಸುವವರಿಗೆ, ಅಂಜೂರ ಹಣ್ಣುಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸಬೇಕೆಂದು ಸೂಚಿಸುತ್ತಿದ್ದಾರೆ. ಇಷ್ಟಕ್ಕೂ ಅಂಜೂರದಲ್ಲಿರುವ ಅದ್ಭುತವಾದ ಮಹತ್ವವೇನೆಂಬುದನ್ನು ನೋಡೋಣ…

ಅಂಜೂರದಲ್ಲಿನ ಅದ್ಭುತವಾದ ಗುಣಗಳು:

  •  ಅಂಜೂರದಲ್ಲಿರುವ ಮೆಗ್ನಿಷಿಯಂ, ಮ್ಯಾಂಗನೀಸ್, ಜಿಂಕ್, ಖನಿಜಗಳು ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುವುದಕ್ಕೆ ಸಹಕರಿಸುತ್ತವೆ.
  •  ಈಗ ಸಾಮಾನ್ಯವಾಗಿ ಕಂಡುಬರುತ್ತಿರುವ ಹೈಬಿಪಿಗೆ ಸೂಕ್ತವಾದ ಮೆಡಿಸಿನ್ ಅಂಜೂರದ ಹಣ್ಣು. ಹಣ್ಣಾಗಿದರೂ ಅಥವಾ ಒಣಗಿದ್ದು ಆದರೂ ಸರಿ ಪ್ರತಿನಿತ್ಯ ತಿಂದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.
  •  ಅಂಜೂರದಲ್ಲಿ ಹೇರಳವಾಗಿರುವ ಪೊಟಾಷಿಯಂ, ಸೋಡಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  •  ಅಂಜೂರ ಹಣ್ಣಿನಲ್ಲಿ ನಾರಿನ ಪದಾರ್ಥವಿರುತ್ತದೆ. ಈ ನಾರಿನ ಪದಾರ್ಥವನ್ನು ಹೆಚ್ಚು ತಿನ್ನುವುದರಿಂದ ಜೀರ್ಣ ವ್ಯವಸ್ಥೆ ಶುದ್ದಿಯಾಗುತ್ತದೆ ಮತ್ತು ಅದರ ಕಾರ್ಯವೈಖರಿಯೂ ಉತ್ತಮಗೊಳ್ಳುತ್ತದೆ.
  • ಚಿಕ್ಕ ಮಕ್ಕಳಲ್ಲಿ ಹಾಗೂ ತುಂಬಾ ಜನರಿಗೆ ಮಲಬದ್ದತೆ ಸಮಸ್ಯೆ ಇರುತ್ತದೆ. ಆದ್ದರಿಂದ ಅವರಿಗೆ ಅಂಜೂರ ಹಣ್ಣುಗಳನ್ನು ಎರಡೊತ್ತೂ ತಿನ್ನಿಸಿದರೆ ಆ ಸಮಸ್ಯೆ ಹೋಗುತ್ತದೆ.
  • ಹಾಗೇಯೆ ಚಿಕ್ಕವಯಸ್ಸಿನಿಂದಲೂ ಅಂಜೂರ ಅಭ್ಯಾಸ ಮಾಡಿದರೆ, ರಕ್ತ ಚೆನ್ನಾಗಿ ಕೂಡುತ್ತದೆ. ಮಕ್ಕಳಿಗೆ ಆರೋಗ್ಯಕರವಾದ ಶಾರೀರಿಕ ಬೆಳವಣಿಗೆಯಾಗುತ್ತದೆ.
  • ಮಹಿಳೆಯರು ಇದನ್ನು ದಿನನಿತ್ಯ ತಿನ್ನುವುದರಿಂದ ರಕ್ತಹೀನತೆ ಮಾಯವಾಗುತ್ತದೆ.
  • ಅಂಜೂರ ಹಣ್ಣುಗಳು ಎಷ್ಟು ತಿಂದರೂ ಕೊಲೆಸ್ಟ್ರಾಲ್ ಸೇರುವುದಿಲ್ಲವಾದ್ದರಿಂದ ತೂಕ ಕಡಿಮೆಯಾಗಬಯಸುವವರಿಗೆ, ಈ ಹಣ್ಣು ಒಳ್ಳೆಯ ಆಯ್ಕೆ.

ಊಟಕ್ಕೆ ಮೊದಲು ಒಂದು ಬಟ್ಟಲು ಅಂಜೂರ ಹಣ್ಣಿನ ಪೀಸ್ ಗಳನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಹಾಗೆ ಅನ್ನಿಸುತ್ತದೆ. ಅನಂತರ ಊಟ ಕಡಿಮೆ ತಿನ್ನುತ್ತೀರ. ಹೀಗೆ ಒಳ್ಳೆ ಪದ್ದತಿಯಲ್ಲಿಯೇ ತೂಕ ಕಡಿಮೆಯಾಗಬಹುದು.