ನಿಜ ಇದು ಎಷ್ಟೋ ಜನರಿಗೆ ಸ್ಪೋರ್ತಿ ಆಗಬೇಕು ಇಲ್ಲಿ ಹಿಂದೂ ದೇವಾಲಯದಲ್ಲಿ ಮುಸ್ಲಿಂರೇ ದೇವಸ್ಥಾನದಲ್ಲಿ ಅಭಿಷೇಕ ಮಾಡುವುದು.
ದೇವಾಲಯಗಳು ಮುಸ್ಮಿಂರಿಗೆ, ಹಿಂದೂಗಳಿಗೆ, ಕೈಸ್ತರಿಗೆ, ಬೌದ್ಧರಿಗೆ, ಜೈನರಿಗೆ, ಸಿಖ್ರಿಗೆ ಎಂದು ಹಲವಾರು ವಿಭಿನ್ನವಾದ ದೇವಾಲಯಗಳಿವೆ. ಆದರೆ ಈ ಎಲ್ಲಾ ಧರ್ಮದ ದೇವರು ಕೂಡ ಒಬ್ಬನೇ ” ದೇವ ಒಬ್ಬನೇ ನಾಮ ಹಲವು” ಎಂಬ ರೀತಿಯನ್ನು ಎಲ್ಲರೂ ಕೂಡ ಮೈಗೂಡಿಸಿಕೊಳ್ಳಬೇಕು.
ತೆಲಂಗಾಣದ ಖಮ್ಮಂ ನಗರದಿಂದ ಸುಮಾರು 20 ಕಿ,ಮೀ ದೂರದಲ್ಲಿನ ಪರ್ವತದ ಮೇಲಿರುವ ಉಗ್ರ ನರಸಿಂಹ ದೇವಾಲಯ. ಅಷ್ಣಗುರ್ತಿ ಗ್ರಾಮಕ್ಕೆ ಸೇರಿದ ಭೂಪತಿ ವೆಂಕಮ್ಮ ಅತ್ಯಂತ ದೊಡ್ಡ ಭಕ್ತೆಯಾಗಿದ್ದಳು.ಒಮ್ಮೆ ವೆಂಕಮ್ಮಳ ಕನಸಿನಲ್ಲಿ ಸ್ವಾಮಿಯು ತಾನು ಸ್ತಂಭಾದ್ರಿ ಗುಡ್ಡದ ಮೇಲೆ ನೆಲೆಸಿದ್ದೇನೆ ಎಂದು ಹೇಳಿದನು.ಅಲ್ಲಿ ತನಗೆ ನಿತ್ಯ ನೈವೆಧ್ಯ ಹಾಗೂ ಪೂಜೆಗಳನ್ನು ಮಾಡಬೇಕು ಎಂದು ಆದೇಶವನ್ನು ಸ್ವಾಮಿಯು ನೀಡಿದ. ಅವಳ ಕನಸನ್ನು ಪ್ರಜೆಗಳಿಗೆ ತಿಳಿಸಿ ತಕ್ಷಣವೇ ಸ್ತಂಭಗಿರಿಯ ಮೇಲೆ ಹೋರಟರು ಸ್ವಾಮಿ ಹೇಳಿದ ಪ್ರದೇಶವು ಕಾಣಿಸಿತು. ಅಲ್ಲಿ ನರಸಿಂಹನ ಗುಡಿ ಕೂಡ ಇತ್ತು. ಆನಂದಾಶ್ಚರ್ಯಗೊಂಡ ಭಕ್ತರು ಸ್ವಾಮಿಯನ್ನು ಹಲವು ಪೂಜಾ ಕೈಂಕರ್ಯವನ್ನು ಮಾಡತೊಡಗಿದರು. ಆದರೆ ಈ ದೇವಾಲಯದಲ್ಲಿ ಮುಸ್ಲಿಂರು ಹಿಂದೂ ದೇವರಾದ ಉಗ್ರ ನರಸಿಂಹ ಸ್ವಾಮಿಗೆ ಅಭಿಷೇಕವನ್ನು ಮಾಡುತ್ತಾರೆ.
ಮುಸ್ಲಿಂರು ಉಗ್ರ ನರಸಿಂಹನಿಗೆ ಯುಗಾದಿಯೊಂದು ಅತ್ಯಂತ ಸಡಗರದಿಂದ ಸಂಭ್ರಮಾಚರಣೆ ಮಾಡಲಾಗುತ್ತದೆ. ಇಲ್ಲಿ ಸ್ವಾಮಿಗೆ ಮೊದಲ ಅಭೀಷೇಕವು ಮುಸ್ಲಿಂರು ಮಾಡುವ ಆಚಾರವನ್ನು ರೂಢಿಸಿಕೊಂಡು ಬಂದಿದ್ದಾರೆ. ನಿಜಾಮ ನವಾಬರ ಕಾಲದಿಂದಲೂ ಇಲ್ಲಿ ಮುಸ್ಲೀಂರೇ ಅಭಿಷೇಕ ಮಾಡುವುದು.