ದೇಶದ ಅತಿ ದೊಡ್ಡ ಆಂಜನೇಯನ ಏಕಶಿಲಾ ವಿಗ್ರಹ ಸಾಗಣೆಗೆ ನಾನ ವಿಘ್ನಗಳು ಎದುರಾಗುತ್ತವೆ ಇದೆ!!

0
635

ರಾಜಧಾನಿ ಬೆಂಗಳೂರಿನಲ್ಲಿ ರಾಮ ಭಕ್ತ ಹನುಮನ ಏಕಶಿಲಾ ವಿಗ್ರಹದ ಪ್ರತಿಷ್ಠಪನೆಯ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಕಾಚರಕನಹಳ್ಳಿಯ ಬಳಿ ಪ್ರತಿಷ್ಠಾಪನೆ ಆಗಲಿರುವ ಹನುಮಂತ ವಿಗ್ರಹಕ್ಕೆ ಈಗ ವಿನಾಯಕನ ಆಶಿರ್ವಾದ ಬೇಕಿದೆ.

ಹೌದು.. ಕೆತ್ತನೆಯ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಮಭಕ್ತನನ್ನು ಟ್ರಕ್​​ನಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ಕರೆದುಕೊಂಡು ಹೋಗು ಕಾರ್ಯ ನಡೆದಿತ್ತು. ಇದಕ್ಕೆ ಆಯೋಜಕರು ಸಕಲ ಸಿದ್ಧತೆ ಮಾಡಿಕೊಂಡಿದ್ರ. ಇನ್ನೇನು ಬೆಂಗಳೂರು ಹೊರವಲಯದ ಹತ್ತಿರ ಬಂದಿದೆ. ಎಲ್ಲಾ ಸೂಸತ್ರ ವಾಗಿ ನಡೆದಿದೆ ಎಂದುಕೊಂಡ್ರೆ ವಿಘ್ನ ಎದುರಾಗಿದೆ.

ಸಾಗಾಟ ಹೇಗೆ? : 62 ಅಡಿ ಉದ್ದ, 25 ಅಡಿ ಅಗಲ, 750 ಟನ್‌ ತೂಕದ ಆಂಜನೇಯ ವಿಗ್ರಹ ಸಾಗಾಟಕ್ಕೆ 3 ಎಂಜಿನ್‌ಗಳ ಟ್ರಕ್‌ ತಂತ್ರಜ್ಞರು ಸ್ಥಳದಲ್ಲೇ ಜೋಡಿಸುತ್ತಿದ್ದಾರೆ. ವಿಗ್ರಹವನ್ನು ಹೊತ್ತ ಟ್ರಕ್‌ ಗಂಟೆಗೆ ಚಲಿಸುವ ವೇಗ ಕೇವಲ 3 ಕಿ.ಮೀ., ಬೆಂಗಳೂರಿಗೆ ವಿಗ್ರಹ ತಲುಪಲು 10 ದಿನ ಬೇಕು.

ಏಕ ಶಿಲಾ ಬಂಡೆಯನ್ನು ಬಹು ಹುಡುಕಿದ ನಂತರ, ಭೈರಸಂದ್ರ ಗ್ರಾಮದ ರೈತ ಬಿ.ಎಂ.ಮುನಿರಾಜು ಅವರ ತೋಟದಲ್ಲಿ ಇದ್ದಂತಹ ಬೃಹತ್‌ ಬಂಡೆ ಆಯ್ಕೆ ಮಾಡಿ ರೈತರ ಸಹಕಾರ ಪಡೆದು ಸೆ.2015ರಲ್ಲಿ ಕೆತ್ತನೆ ಕಾರ‍್ಯ ಪ್ರಾರಂಭಿಸಿದರು.

ಬೆಂಗಳೂರಿನ ಉತ್ತರ ತಾಲೂಕಿನ ವ್ಯಾಪ್ತಿಗೆ ಬರುವ ಕಣ್ಣೂರು ಬಳಿ ಆಂಜನೆಯ ಭಾರ ತಾಳಲಾರದ ಟ್ರಕ್​​ ಆಯ ತಪ್ಪಿದೆ. ಪರಿಣಾಮ ಮೂರ್ತಿಗೆ ಏನು ಹಾನಿ ಆಗಿಲ್ಲ.. ಕೂದಲಳೆತೆಯಲ್ಲಿ ಅನಾಹುತ ತಪ್ಪಿದೆ. ಲಾರಿಯ ಒಟ್ಟು 8 ಚಕ್ರಗಳು ಹೂತು ಹೋಗಿದ್ದು ಜೆಸಿಬಿ ಬಳಸಿ ಮೇಲಕ್ಕೆತ್ತುವ ಕೆಲಸ ಮಾಡಲಾಗುತ್ತಿದೆ.