ಪುಲ್ವಾಮ ದಾಳಿಯಂತೆ ಮತ್ತೊಂದು ಆತ್ಮಹತ್ಯೆ ದಾಳಿ; ತಪ್ಪಿತು ಮಹಾ ದುರಂತ, ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..

0
452

ಪುಲ್ವಾಮಾ ದಾಳಿ ಮಾಸುವ ಮುನ್ನವೇ ಅದೇ ರೀತಿಯಲ್ಲಿ ಮತ್ತೊಂದು ಆತ್ಮಹತ್ಯೆ ದಾಳಿಯ ಬಾರಿ ದುರಂತಯೊಂದು ನಡೆದಿದೆ ಇದರಲ್ಲಿ ಸೈನಿಕರಿಗೆ ಯಾವುದೇ ಅಪಾಯಗಳು ಆಗಿಲ್ಲ, ದಾಳಿ ಮಾಡಲು ಸಂಚು ನಡೆಸಿದ ಉಗ್ರರನ್ನು ಬಂಧಿಸಲಾಗಿದೆ. ಈ ಪಾಪಿ ಉಗ್ರನೆ ಸತ್ಯಾಂಶ ಬಾಯಿ ಬಿಟ್ಟಿದ್ದು. ಅವನ ಬಳಿ ಇದ್ದ ದಾಖಲೆಗಳಿಂದ ಆತ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ.


Also read: ರಾಜಕಾರಣಿಗಳು ತಾವು ಮಾಡುವ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ಹುಟ್ಟು ಹಾಕಿದ್ದಾರೆ; ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಕ್ರೋಶ; ಇವರ ಮಾತು ಅಕ್ಷರಶಃ ನಿಜ ಅಲ್ವಾ??

ಹೌದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಸೈನಿಕರು ಸಂಚಾರ ನಡೆಸುತ್ತಿದ್ದ ಬಸ್​ ಸ್ಫೋಟಿಸುವ ವಿಫಲ ಪ್ರಯತ್ನವೊಂದು ನಡೆದಿತ್ತು. ಆತ್ಮಾಹುತಿ ದಾಳಿ ಮೂಲಕ ಸೈನಿಕರನ್ನು ಹತ್ಯೆ ಮಾಡಲು ಮುಂದಾಗಿದ್ದ ಉಗ್ರನನ್ನು ಪೊಲೀಸರು ಬಂಧಿಸಿದ್ದು, ಆತಂಕಕಾರಿ ವಿಚಾರವೊಂದನ್ನು ಉಗ್ರ ಹೇಳಿಕೊಂಡಿದ್ದು ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸಿಆರ್ ಪಿಎಫ್ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಲು ಸಂಚು ರೂಪಿಸಲಾಗಿತ್ತು. ಸಿಆರ್ ಪಿಎಫ್ ವಾಹನದ ಅನತಿ ದೂರದಲ್ಲಿ ಕಾರ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.


Also read: ಲಗ್ನ ಪತ್ರಿಕೆಯಲ್ಲಿ ಮೋದಿ ಹವಾ; ನರೇಂದ್ರ ಮೋದಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ ಎನ್ನುವ ಮನವಿ..

ಮತ್ತೊಂದು ಆತ್ಮಹತ್ಯೆ ದಾಳಿ?

ಆತ್ಮಾಹುತಿ ದಾಳಿಕೋರನನ್ನು ಓವೈಸ್ ಅಮೀನ್ ಎಂದು ಗುರುತಿಸಲಾಗಿದೆ. ಓವೈಸ್ ದಾಳಿಗೂ ಮುನ್ನವೇ ಸ್ಫೋಟಕಗಳಿಂದ ಕಾರ್ ಬಿಟ್ಟು ಓಡಿ ಹೋಗಿದ್ದಾನೆ. ಜಮ್ಮು-ಕಾಶ್ಮೀರ ಪೊಲೀಸರಿಗೆ ಎರಡು ಪುಟಗಳ ಪತ್ರ ದೊರೆತಿದ್ದು, ಉಗ್ರ ಭಾರತದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದನು ಎಂಬುವುದು ಬಯಲಾಗಿದೆ. ಹೀಗಾಗಿ ಸೈನಿಕರ ವಾಹನಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಆತ್ಮಾಹುತಿ ದಾಳಿ ನಡೆಸಲು ಉಗ್ರ ಓವೈಸ್ ಪ್ಲಾನ್ ಮಾಡಿದ್ದ. ಕೊನೆ ಕ್ಷಣದಲ್ಲಿ ತನ್ನ ಸಾವಿಗೆ ಹೆದರಿದ ಓವೈಸ್, ಸೈನಿಕರ ವಾಹನದ ಕೂಗಳತೆಯ ದೂರದಲ್ಲಿ ಕಾರ್ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

ಪುಲ್ವಾಮ ಮಾದರಿಯಲ್ಲೇ ಮತ್ತೊಂದು ದಾಳಿ


Also read: ಮೊಬೈಲ್ ಎಷ್ಟೊಂದು ಉಪಯುಕ್ತ ಎನ್ನುವರಿಗೆ ಆಘಾತ; ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಿದ್ರೆ ರೋಗ, ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಕಾರಣವಂತೆ!!

ಸೈನಿಕರು ಸಂಚಾರ ನಡೆಸುತ್ತಿದ್ದ ಬಸ್​ಗೆ ಕಾರನ್ನು ಗುದ್ದಿಸುವುದು ಈತನ ಟಾಸ್ಕ್​​ ಆಗಿತ್ತು. ಅಷ್ಟೇ ಅಲ್ಲ, ಈ ವೇಳೆ ಆತನಿಗೆ ಕೊಟ್ಟಿದ್ದ ಮಷಿನ್​ ಒಂದರ ಬಟನ್​ ಒತ್ತಬೇಕಿತ್ತಂತೆ. “ಸೈನಿಕರು ಸಂಚಾರ ಮಾಡುತ್ತಿದ್ದ ವಾಹನ ಸ್ಫೋಟಿಸುವಂತೆ ನನಗೆ ದೂರವಾಣಿ ಮೂಲಕ ಆದೇಶ ಬಂತು. ಅವರು ನೀಡಿದ್ದ ಕಾರನ್ನು ತೆಗೆದುಕೊಂಡು ಹೋಗಿ ಬಸ್​ಗೆ ಗುದ್ದುವುದು ನನ್ನ ಟಾಸ್ಕ್​ ಆಗಿತ್ತು. ಅಂತೆಯೇ ಬಸ್​ಗೆ ಕಾರನ್ನು ಗುದ್ದಲು ಪ್ರಯತ್ನಿಸಿದೆ. ಬಟನ್ ಕೂಡ​ ಒತ್ತಿದೆ,” ಎಂದು ಮಾಹಿತಿ ನೀಡಿದ್ದಾನೆ.
ಬಂಧಿತ ಉಗ್ರ ಓವೈಸ್​ ಅಮಿನ್​. ಜವಾಹಾರ್​ ಸುರಂಗದ ಸಮೀಪ ಕಾರು ಸ್ಫೋಟಗೊಂಡಿತ್ತು. ಸೈನಿಕರು ಸಂಚಾರ ಮಾಡುತ್ತಿದ್ದ ಬಸ್​ ಹಾದು ಹೋದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿದೆ. ಹಾಗಾಗಿ, ಬಸ್​ಗೆ ಜಾಸ್ತಿ ಹಾನಿ ಉಂಟಾಗಿಲ್ಲ. ಕಾರು ಸ್ಫೋಟಗೋಳ್ಳುವುದಕ್ಕೂ ಮೊದಲು ಉಗ್ರ ಕಾರಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದ. ಹಾಗಾಗಿ, ಆತನನ್ನು ಬಂಧಿಸಲಾಗಿದೆ.

ಉಗ್ರರನ ಬಳಿ ಸಿಕ್ಕ ಪತ್ರದಲ್ಲಿ ಏನಿತ್ತು?

ದಾಳಿಗೆ ಸಂಚು ನಡೆಸಿದ ಉಗ್ರ ಬರೆದ ಪತ್ರದಲ್ಲಿಬರೆಯಲಾಗಿದ್ದ ಮಾಹಿತಿಯಂತೆ. ಸ್ಪೋಟದ ನಂತರ ಪತ್ರ ಸಿಗುವ ವೇಳೆಗೆ ನಾನು ಸ್ವರ್ಗ ತಲುಪಿರುತ್ತೇನೆ. ಈ ಎಲ್ಲ ದೃಶ್ಯಗಳನ್ನು ನೋಡಿ ನಾನು ಸ್ವರ್ಗದಲ್ಲಿ ಮಜಾ ಮಾಡುತ್ತಿರುತ್ತೇನೆ. ಈ ಮೊದಲು ಕಾಶ್ಮೀರವನ್ನು ಸ್ವತಂತ್ರ ಮಾಡಿದ್ದರೆ, ಭಾರತ ಈ ದಿನವನ್ನು ನೋಡುತ್ತಿರಲಿಲ್ಲ. ನಮ್ಮ ಸ್ವತಂತ್ರಕ್ಕಾಗಿ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಧುಮುಕಿದ್ದೇವೆ ಎಂದು ಪತ್ರ ಬರೆದಿದ್ದ.

ಓವೈಸ್ ಅಮಿನ್ ಯಾರು?

ಅರ್ವಾನಿ ನಿವಾಸಿ ಯೂಸೂಫ್ ಮಲೀಕ್ ಎಂಬವರ ಪುತ್ರನಾಗಿರುವ ಓವೈಸ್ ಅಹ್ಮದ್ ಮಲೀಕ್ ಅಮೀನ್ ಸಿ ಕೆಟಗರಿಯ ಉಗ್ರನಾಗಿದ್ದನು. 2018ರ ಏಪ್ರಿಲ್ 5 ರಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಸೇರಿಕೊಂಡು ಭಯೋತ್ಪಾನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು. ಈತ ಜಬ್ಲಿಪೋರಾ, ಅರ್ವಾನಿ ಮತ್ತು ಬಿಜ್ಬೇಹರಾ ಪ್ರದೇಶಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು ಎಂದು ತಿಳಿದುಬಂದಿದೆ.