ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಿದೆ : ಬಿಪಿನ್ ರಾವತ್…

0
431

ಭಾರತ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಪಾಕಿಸ್ತಾನದ ಸೇನೆಯನ್ನು ಅಲ್ಲಿನ ಸರ್ಕಾರ ಕಟ್ಟು ನಿಟ್ಟಾಗಿ ನಿರ್ವಹಿಸದಿದ್ದರೆ ನಾವು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿದೆ. ಇಲ್ಲವಾದಲ್ಲಿ ಪಾಕ್ ಸೇನೆ ಪದೇ ಪದೇ ನಮಗೆ ತೊಂದರೆ ಕೊಡುತ್ತದೆ ಎಂದು ರಾವತ್ ಹೇಳಿದರು.

ಪಾಕಿಸ್ತಾನದ ಸೈನಿಕರು ಭಾರತದ ಯೋಧರನ್ನು ಗುರಿಯಾಗಿಸಿಕೊಂಡು ಪದೇ ಪದೇ ದಾಳಿ ಮಾಡುತ್ತಿದ್ದಾರೆ. ಪಾಕಿಸ್ಥಾನವು ಕಾಶ್ಮೀರದ ಯುವಕರನ್ನು ಉಗ್ರವಾದಕ್ಕೆ ಸೆಳೆಯುತ್ತಿದೆ. ಕಾಶ್ಮೀರದಲ್ಲಿ ಹಿಂಸೆ ನಡೆಯುತ್ತಲೇ ಇರಬೇಕು ಹಾಗೂ ಭಾರತದಲ್ಲಿ ರಕ್ತಪಾತ ನಡೆಸಬೇಕು ಎಂಬುದು ಪಾಕಿಸ್ತಾನದ ಉದ್ದೇಶ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಪೊಲೀಸರ ಹತ್ಯೆ ಹಾಗೂ ಉಗ್ರ ಬುರ್ಹಾನ್‌ ವಾನಿಯ ಅಂಚೆ ಚೀಟಿಯನ್ನು ಪಾಕಿಸ್ಥಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಮಾತುಕತೆಯನ್ನು ಭಾರತ‌ ರದ್ದು ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ರಾವತ್‌, ಪಾಕ್‌ ಅಧ್ಯಕ್ಷ ಇಮ್ರಾನ್‌ ಖಾನ್‌ ಅಧಿಕಾರಕ್ಕೆ ಬಂದಾಗ ಶಾಂತಿ ಸಂದೇಶಗಳನ್ನು ಕಳುಹಿಸಲು ಪ್ರಯತ್ನಿಸಿದರು. ಆದರೆ ಪಾಕಿಸ್ಥಾನದ ಇಡೀ ವ್ಯವಸ್ಥೆಗೆ ಶಾಂತಿ ಬೇಕಿತ್ತೇ ಎಂಬುದನ್ನು ನಾವು ತಿಳಿಯಬೇಕಿದೆ ಎಂದಿದ್ದಾರೆ. ಏತನ್ಮಧ್ಯೆ, ರವಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ  ಜಿಲ್ಲೆ ಯಲ್ಲಿ ಪಾಕಿಸ್ತಾ ನ ಮೂಲದ ಜೈಶ್‌ ಉಗ್ರನೊಬ್ಬನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಈ ಹಿಂದೆ ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಅಚ್ಚರಿಯ ಅಸ್ತ್ರ, ಹಾಗೂ ಅದು ಹಾಗೆಯೇ ಇರಬೇಕು ಎಂದು ಎಚ್ಚರಿಕೆ ಸಂದೇಶ ನೀಡಿದ್ದರು. ಪಾಕಿಸ್ತನ ಕದನ ವಿರಾಮ ಉಲ್ಲಂಘನೆಗೆ ಕರೆ ನೀಡಿದ ಬಳಿಕವೂ ಗಡಿ ಪ್ರದೇಶದಲ್ಲಿ ಒಳನುಸುಳುವಿಕೆ ಮುಂದುವರೆಯುತ್ತಲೇ ಇದೆ, ಪಾಕಿಸ್ತಾನ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ರಾವತ್ ಹೇಳಿದರು.