ಪುಲ್ವಾಮ ದಾಳಿ ರೀತಿಯಲ್ಲಿ ಭಾರತಕ್ಕೆ ಮತ್ತೊಂದು ದಾಳಿ ಮಾಡುವ ಬೆದರಿಕೆ ನೀಡಿದ ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್..

0
168

ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಯುದ್ದದ ವಾತಾವರಣ ಮೂಡಿದ್ದು, ದೇಶದ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕೆಲಸಗಳನ್ನು ಪಾಕ್ ಸಹಿಸಿಕೊಳ್ಳುತ್ತಿಲ್ಲ ಎನ್ನುವುದು ಮತ್ತಷ್ಟು ಸತ್ಯವೆನ್ನುವುದು ತಿಳಿದಿದೆ. ಏಕೆಂದರೆ 370ನೇ ವಿಧಿ ರದ್ದಾದ ಬಳಿಕ ಹತಾ​ಶೆ​ಗೊ​ಳ​ಗಾ​ಗಿ​ರುವ ಪಾಕಿ​ಸ್ತಾನ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರದ ವಿರುದ್ಧ ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್​​ ನೇತೃತ್ವದ ಸರ್ಕಾರ ಕಿಡಿಕಾರಿದೆ. ಭಾರತ ಸರ್ಕಾರದ ಈ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ. ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು. ಭಾರತದ ಇಂಥ ನಿರ್ಧಾರ, ಮತ್ತೊಂದು ಪುಲ್ವಾಮ ಮಾದ​ರಿ ದಾಳಿಗೆ ಕಾರಣವಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.


Also read: ಜನಪ್ರಿಯ ಜೋಡಿಗಳಾದ ನರೇಂದ್ರ ಮೋದಿ-ಅಮಿತ್ ಶಾ 370 ಕಲಂ ರದ್ದು ಮಾಡಿರುವುದಕ್ಕೆ ಈ ಐದು ಕಾರಣಗಳು ಮುಖ್ಯವಂತೆ

ಯುದ್ದದ ಸೂಚನೆ ನೀಡಿದ ಪಾಕ್?

ಹೌದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತ ಸರ್ಕಾರದ ನಡೆಯನ್ನು ಪಾಕಿಸ್ತಾನ ಸಹಿಸಲು ಆಗದೆ ಮತ್ತೆ ಪುಲ್ವಾಮ ದಾಳಿಯಂತೆ ಸಂಚು ರೂಪಿಸುತ್ತಿದೆ ಎನ್ನುವುದು ಪಾಕ್ ಪ್ರಧಾನಿ ಒಪ್ಪಿಕೊಂಡತಾಗಿದೆ. ಕಾಶ್ಮೀರ ವಿಚಾರ ಸಂಬಂಧ ಆಯೋಜನೆಗೊಂಡಿದ್ದ ಸಂಸತ್ತಿನ ತುರ್ತು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್‌, ಭಾರ​ತದ ಈ ನಡೆ​ಯಿಂದಾಗಿ ಯುದ್ಧ ವಾತಾ​ವ​ರ​ಣ ಸೃಷ್ಟಿಯಾಗಿದ್ದು, ಇದ​ರಿಂದ ಪುಲ್ವಾಮ ಮಾದ​ರಿ ದಾಳಿ ಸಂಭ​ವಿ​ಸಿ​ದ್ರೂ ಅಚ್ಚ​ರಿ​ಯಿಲ್ಲ. ಇದಕ್ಕೆ ನಮ್ಮನ್ನು ದೂರ​ಬಾ​ರ​ದು. ಎಂದು ಹೇಳಿರುವ ಪಾಕ್ ಮಾತು ಅನುಮಾನ ಹುಟ್ಟಿಸಿದೆ.


Also read: ಕೇಂದ್ರಾಡಳಿತ ಪ್ರದೇಶವಾಗಲಿದೆ ಜಮ್ಮು-ಕಾಶ್ಮೀರ; ವಿಶೇಷ ಅಧಿಕಾರ, ಸ್ಥಾನಮಾನ ರದ್ದು, ಏನೇನು ಬದಲಾಗುತ್ತೆ? ಇಲ್ಲಿದೆ ನೋಡಿ ರೋಚಕ ಮಾಹಿತಿ!!

ಪಾಕ್ ಬೆದರಿಕೆ ಏನು?

ಎರಡು ಅಣ್ವಸ್ತ್ರ ರಾಷ್ಟ್ರ​ಗಳ ನಡು​ವಿನ ತಿಕ್ಕಾಟದಿಂದ ಕೇವಲ ಭಾರತ- ಪಾಕ್‌ ಮಾತ್ರ​ವಲ್ಲ, ಇಡೀ ಜಗತ್ತು ಇದ​ರಿಂದ ತೊಂದರೆ ಅನು​ಭ​ವಿ​ಸು​ತ್ತದೆ. ಇದು ನಮ್ಮ ಅಣ್ವ​ಸ್ತ್ರ ಬೆದ​ರಿ​ಕೆ​ಯಲ್ಲ. ನಮ್ಮ ಮೇಲೆ ದಾಳಿ ಮಾಡಿ​ದರೆ ನಾವು ಪ್ರತಿ​ದಾಳಿ ಮಾಡು​ತ್ತೇವೆ. ಇದ​ರಿಂದ ಯುದ್ಧ ಸನ್ನಿ​ವೇಶ ಸೃಷ್ಟಿ​ಯಾ​ಗು​ತ್ತದೆ. ಯುದ್ಧ​ದಲ್ಲಿ ಯಾರೂ ಗೆಲ್ಲು​ವು​ದಿಲ್ಲ. ಯುದ್ಧ ನಡೆ​ದರೆ ಇಡೀ ಪ್ರಪಂಚಕ್ಕೆ ತೊಂದ​ರೆ​ಯಾ​ಗು​ತ್ತದೆ ಎಂದು ಪರೋ​ಕ್ಷ​ವಾಗಿ ಯುದ್ಧದ ಮುನ್ಸೂ​ಚ​ನೆ ನೀಡಿ​ದ್ದಾರೆ. ಜನಾಂಗೀಯ ಸಿದ್ಧಾಂತದ ಮೂಲಕ ಕಾಶ್ಮೀ​ರ​ವನ್ನು ಭಾರ​ತ ಒಡೆದು ಹಾಕಿದ್ದು ಇದು ಮಹಾತ್ಮಾ ಗಾಂಧಿ​ಯ​ವರ ತತ್ವ​ಗ​ಳಿಗೆ ವಿರು​ದ್ಧ​ವಾ​ಗಿದೆ. ಭಾರ​ತದ ಈ ನಿಲುವನ್ನು ನಾವು ವಿಶ್ವ​ಸಂಸ್ಥೆಯ ಭದ್ರತಾ ಮಂಡ​ಳಿ​ಯಲ್ಲಿ ಪ್ರಶ್ನೆ ಮಾಡು​ತ್ತೇ​ವೆ. ಜಾಗ​ತಿಕ ಸಮು​ದಾಯ ಕಾಶ್ಮೀ​ರದ ಪ್ರಸ​ಕ್ತ ಸನ್ನಿ​ವೇ​ಶದ ಬಗ್ಗೆ ಗಮನ ಹರಿ​ಸ​ಬೇಕು ಎಂದು ಮನವಿ ಮಾಡಿ​ದ್ದಾ​ರೆ.


Also read: ಬಿಗ್ ಬ್ರೇಕಿಂಗ್ ಜಮ್ಮು-ಕಾಶ್ಮೀರದಲ್ಲಿ ಯುದ್ದದ ವಾತಾವರಣ; 370 ವಿಶೇಷ ಸ್ಥಾನಮಾನಕ್ಕೆ ಅಂತಿಮ?ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ..

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಕಾಶ್ಮೀರದ್ದು ವಿವಾದಿತ ಸ್ಥಾನವೆಂದು ಮಾನ್ಯ ಮಾಡಲಾಗಿದೆ. ಕಾಶ್ಮೀರ ವಿಚಾರದಲ್ಲಿ ಭಾರತ ಕೈಗೊಳ್ಳುವ ಯಾವುದೇ ಏಕಪಕ್ಷೀಯ ನಿರ್ಧಾರವು ಜಮ್ಮು-ಕಾಶ್ಮೀರದ ಜನತೆ ಹಾಗೂ ಪಾಕಿಸ್ತಾನಕ್ಕೆ ಅಸಮ್ಮತವಾಗಿರುತ್ತದೆ. ಏಕೆಂದರೆ ಇಮ್ರಾನ್ ಹೇಳುವಂತೆ ಪಾಕ್ ಎಲ್ಲಾ ನೆರೆ ರಾಷ್ಟ್ರ​ಗ​ಳೊಂದಿಗೆ ಉತ್ತಮ ಸಂಬಂಧ ಕಾಯ್ದು​ಕೊ​ಳ್ಳು​ವು​ದಕ್ಕೆ ಬಯ​ಸಿದ್ದು, ಭಾರತ ಇದಕ್ಕೆ ಪೂರ​ಕ​ವಾ​ಗಿ ಸ್ಪಂದಿ​ಸು​ತ್ತಿಲ್ಲ. ನಾನು ಭಾರ​ತದ ಪ್ರಧಾ​ನಿ​ಯೊಂದಿಗೆ ನಾನು ಮಾತು​ಕತೆ ನಡೆ​ಸಿ​ದಾಗ ಕಾಶ್ಮೀ​ರದಲ್ಲಿ ಉಪ​ಟಳ ನೀಡು​ತ್ತಿ​ರು​ವ ಭಯೋ​ತ್ಪಾ​ದಕರನ್ನು ನಿಯಂತ್ರಿ​ಸುವ ಬಗ್ಗೆ ಮಾತು ಕೊಟ್ಟಿದ್ದೆ. ಆದರೆ ಅವರು ನಮ್ಮ ಮೇಲೆ ದಾಳಿ ಮಾಡಿ​ದ​ರು. ಮಾತು​ಕ​ತೆ ಕರೆ​ದ​ರೂ ಪೂರ​ಕ​ವಾಗಿ ಸ್ಪಂದಿ​ಸು​ತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.