ಅಂತ್ಯಸಂಸ್ಕಾರ ಮಾಡಿ 10 ನೇ ದಿನದ ಕ್ರಿಯಾ ಕರ್ಮಕ್ಕೆ ತಂದೆ ಪ್ರತ್ಯಕ್ಷ..!

0
1021

ಹೈದರಾಬಾದ್ ಅಂಬೆರ್ಪೆಟ್ ನ ಗೋಲ್ನಕದ ಹನುಮಂತ ನಗರದ ನಿವಾಸಿ ಕೃಷ್ಣ ಆ ದಿನ ತನ್ನ ತಂದೆಯಾದ ಅಂಜಯ್ಯ ನವರ 10 ನೇ ದಿನದ ಕ್ರಿಯಾ ಕರ್ಮಕ್ಕೆ ತಯಾರಿ ಮಾಡಿಕೊಂಡಿದ್ದಾ. ಆ ದಿನ ಅವನಿಗೆ ಒಂದು ಆಶ್ಚರ್ಯ ಕಾದಿತ್ತು. ಮನೆಯಲ್ಲಿ ತಂದೆಯ ಕ್ರಿಯಾ ಕರ್ಮಕ್ಕೆ ವಿಧಿವಿಧಾನಗಳ ತಯಾರಿ ನಡೆಯುತ್ತಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿದ್ದವರೆಲ್ಲ ಬೆಚ್ಚಿ ಬಿದ್ದಿದ್ರು, ಕಾರಣವೇನೆಂದರೆ ಸಾವನ್ನಪ್ಪಿದ್ದ ಅಂಜಯ್ಯ ಮತ್ತೆ ಪ್ರತ್ಯಕ್ಷನಾಗಿದ್ದ.

ಘಟನೆಯ ಸಂಪೂರ್ಣ ವಿವರಣೆ ಇಲ್ಲಿದೆ

55 ವರ್ಷದ ಅಂಜಯ್ಯ ಹೈದರಾಬಾದ್ ಅಂಬೆರ್ಪೆಟ್ ನ ಗೋಲ್ನಕದ ಹನುಮಂತ ನಗರದ ನಿವಾಸಿ. ಮದ್ಯವ್ಯಸನಿಯಾಗಿದ್ದ ಅಂಜಯ್ಯ ಕೆಲಸಕ್ಕೆ ಹೊರಟವನು ಮರಳಿ ಮನೆಗೆ ಬಂದಿರಲಿಲ್ಲ. ಮಗ ಕೃಷ್ಣ, ಅಪ್ಪನಿಗಾಗಿ ಹುಡುಕಾಟ ಶುರು ಮಾಡಿದ್ದ. ಸೆಪ್ಟೆಂಬರ್ 4ರಂದು ಕೃಷ್ಣ ತನ್ನ ತಂದೆಯ ಫೋಟೋವನ್ನು ಮಿರ್ ಚೌಕ್ ಪೊಲೀಸರಿಗೆ ತೋರಿಸಿ ಮಾಹಿತಿ ಕೇಳಿದ್ದ. ಕಂಠಪೂರ್ತಿ ಕುಡಿದು ರಸ್ತೆ ಬದಿ ಮಲಗಿದ್ದ ಅಂಜಯ್ಯನನ್ನು ಒಸ್ಮಾನಿಯಾ ಜನರಲ್ ಹಾಸ್ಪಿಟಲ್ ಗೆ ದಾಖಲಿಸಿರೋದಾಗಿ ಪೊಲೀಸರು ಮಾಹಿತಿ ನೀಡಿದ್ರು. ಅಲ್ಲಿಗೆ ಧಾವಿಸಿ ಬಂದ ಕೃಷ್ಣಾಗೆ ತಂದೆ ಮಾತ್ರ ಸಿಗಲಿಲ್ಲ.

ಸೆಪ್ಟೆಂಬರ್ 5 ರಂದು ಅಪ್ಪನ ಫೋಟೋ ಹಿಡಿದು ಅಫ್ಜಲ್ ಗಂಜ್ ಪೊಲೀಸ್ ಠಾಣೆಯತ್ತ ನಡೆದಿದ್ದ. 55 ವರ್ಷದ ವ್ಯಕ್ತಿಯೊಬ್ಬ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದಾಗಿಯೂ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಪೊಲೀಸರು ತಿಳಿಸಿದ್ರು. ತಲೆಗೆ ಪೆಟ್ಟು ಬಿದ್ದಿದ್ದರಿಂದ ಆಪರೇಷನ್ ಮಾಡಲಾಗಿತ್ತು, ಆತ ಅಂಜಯ್ಯನೇ ಎಂದು ಕೃಷ್ಣ ಮತ್ತವನ ತಾಯಿ ಗುರುತಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 8 ರಂದು ಆತ ಮೃತಪಟ್ಟಿದ್ದ.

ಆದ್ರೆ ಅಸಲಿಗೆ ಅಲ್ಲಿ ಸಾವನ್ನಪ್ಪಿದ ವ್ಯಕ್ತಿ ಅಂಜಯ್ಯನಾಗಿರಲಿಲ್ಲ, ಬೇರ್ಯಾರನ್ನೋ ಅಂಜಯ್ಯ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬದವರು 10 ನೇ ದಿನದ ಕ್ರಿಯಾ ಕರ್ಮಕ್ಕೆ ತಯಾರಿ ಮಾಡಿಕೊಂಡಿದ್ರು. ಆಗ ಅಂಜಯ್ಯ ಮನೆಗೆ ಮರಳಿದ್ದಾನೆ.