ಮತ್ತೊಮ್ಮೆ ಅಚ್ಚರಿ ನೀಡಿರುವ ವಿರುಷ್ಕ ಜೋಡಿ ದಕ್ಷಿಣ ಆಫ್ರಿಕಾ ಬದಲು ಪ್ರಪಂಚದ ಅತಿ ಸುಂದರ ಸ್ಥಳಕ್ಕೆ ಹನಿಮೂನ್-ಗೆ ಹೊರಟಿದ್ದಾರೆ…

0
871

ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮ ಜೋಡಿ ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಕೇವಲ ಕೆಲ ಸಂಬಂಧಿಕರ ನಡುವೆ ಮಾತ್ರ ಮದುವೆಯಾಗಿ ನಂತರ ಮದುವೆ ಫೋಟೋ-ಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಾಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ಈಗ ಈ ಜೋಡಿ ಹನಿಮೂನ್-ಗಾಗಿ ಯಾವ ದೇಶಕ್ಕೆ ಹೋಗಲಿದ್ದಾರೆ ಎಂಬುದೇ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ, ಈ ಮೊದಲು ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಪಂದ್ಯವಿರುವುದರಿಂದ ಹನಿಮೂನ್-ಗೆಂದು ಅಲ್ಲಿಗೆ ಹೋಗುತ್ತಿರಬಹುದೆಂದು ಊಹಿಸಲಾಗಿತ್ತು ಆದರೆ, ಈಗ ಮತ್ತೊಮ್ಮೆ ಅಚ್ಚರಿ ನೀಡಿರುವ ಈ ಜೋಡಿ ದಕ್ಷಿಣ ಆಫ್ರಿಕಾ ಬದಲು ಪ್ರಪಂಚದ ಅತಿ ಸುಂದರ ಸ್ಥಳಗಳಲ್ಲೊಂದಾದ ಇಟಲಿಯ, ರೋಮ್‍ಗೆ ತೆರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹನಿಮೂನ್ ಮುಗಿಸಿ ಬಂದ ಮೇಲೆ ಡಿಸೆಂಬರ್ 21 ರಂದು ದೆಹಲಿಯಲ್ಲಿ ಮತ್ತು ಡಿಸೆಂಬರ್ 26 ರಂದು ಮುಂಬೈಯಲ್ಲಿ ಗೆಳೆಯರಿಗೆ ಮತ್ತು ಬಂಧುಗಳಿಗೆ ವಿಶೇಷ ಔತಣಕೂಟವನ್ನು ವಿರುಷ್ಕಾ ಜೋಡಿ ಏರ್ಪಡಿಸಿದೆ.

ಇದಲ್ಲದೆ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ, ಅನುಷ್ಕಾ ಕೂಡ ವಿರಾಟ್ ಜೊತೆ ಹೊಸ ವರ್ಷ ಆಚರಿಸಿದ ನಂತರ ಶಾರುಖ್ ಖಾನ್ ಜೊತೆ ಒಂದು ಚಿತ್ರದಲ್ಲಿ ನಟಿಸಲಿದ್ದಾರೆ.

In heaven, literally ??

A post shared by AnushkaSharma1588 (@anushkasharma) on