ಸೇಬಿನ ಕೇಸರಿ ಬಾತ್

0
2874

ಸಾಮಾನ್ಯವಾಗಿ ಗೃಹಿಣಿ ಮನೆಗೆ ಬಂದ ಅತಿಥಿಗಳು ಬಂದಾಗ ತಕ್ಷಣ ಏನು ಸಿಹಿತಿಂಡಿ ಮಾಡಬೇಕು ಅಂತ ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ ಅತಿ ಸುಲಭವಾಗಿ ದಿಡಿರನೆ ಮಾಡಬಹುದಾದ ಸಿಹಿಯಾದ ಅಡುಗೆಯನ್ನು ಮಾಡುವ ವಿಧಾನ ತಿಳಿಯಿರಿ. ಇದಕ್ಕೆ ಅಷ್ಟೊಂದು ಸಾಮಗ್ರಿಗಳು ಬೇಕಾಗಿಲ್ಲ, ಬಹುಬೇಗನೆ ಈ ಸೇಬಿನ ಕೇಸರಿಬಾತ್ ಮಾಡಬಹುದು. ಸೇಬುಹಣ್ಣಿನ ಕೆಸರಿಬಾತ್ ಮಾಡುವ ವಿಧಾನ ತಿಳಿಯಿರಿ.

 

ಬೇಕಾಗುವ ಪದಾರ್ಥಗಳು

1)ಸೇಬುಹಣ್ಣಿನ ಸಣ್ಣ ಪೀಸ್ 1 ಕಪ್,

2)ಚಿರೋಟಿ ರವೆ 1ಕಪ್,

3)ಸಕ್ಕರೆ 1ಕಪ್,

4)ತುಪ್ಪ,

5)ಹಾಲು 1ಕಪ್,

6)ದ್ರಾಷ್ಕಿ, ಗೋಡಂಬಿ,

7)ಕೇಸರಿ, ಏಲಕ್ಕಿ.

ಸೇಬಿನ  ಕೇಸರಿ ಬಾತ್ ತಯಾರಿಸುವ ವಿಧಾನ :

ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಮೇಲೆ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಕೈಯಾಡಿಸಿ (ಜಾಸ್ತಿಹೊತ್ತು ಬಿಟ್ಟರೆ ದ್ರಾಕ್ಷಿ ಕಪ್ಪಾಗಾಗುತ್ತದೆ). ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ ಬಿಸಿಯಾದ ಮೇಲೆ ರವೆಯನ್ನು ಹಾಕಿ, ನಂತರ ಡಾಲ್ಢ ತುಪ್ಪ ಮತ್ತು ಸನ್ಫ್ಲವರ್ ಆಯಿಲ್ನ್ನು (ಸ್ವಲ್ಪ) ಹಾಕಿ ಎಲ್ಲೂ ಗಂಟಾಗದಂತೆ ಕೈಯಾಡಿಸಿ. ನೀವು ಹಾಕಿದ ಪ್ರಮಾಣವು, ಬಾಣಲಿಯಲ್ಲಿ ರವೆ ಪಾಯಸದ ತರ ಇರಬೇಕು. ರವೆಯನ್ನು ಕಡಿಮೆ ಉರಿಯಲ್ಲಿ ತಿರುವುತ್ತಾ ಇರಬೇಕು. ಇನ್ನೊಂದು ಕಡೆ ಎರಡು ಕಪ್ನಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ರವೆ ಇರುವ ಬಾಣಲಿಗೆ ಕಾದ ಬಿಸಿನೀರನ್ನು ಹಾಕಿ. ರವೆ ಪ್ರಮಾಣ ಮತ್ತು ನೀರಿನ ಪ್ರಮಾಣ ಸಮ ಇರಬೇಕು. ನಂತರ ಸ್ವಲ್ಪ ಕೇಸರಿಯನ್ನು ಹಾಕಿ. ಸೇಬಿನ ಪೀಸನ್ನು ಹಾಕಿ ಕುದಿಸಿ.  ನಂತರ 2 ಲೋಟ ಸಕ್ಕರೆಯನ್ನು ಹಾಕಿ ಮತ್ತೆ ಕೈಯಾಡಿಸಿ. ದಟ್ಸಾಲ್, ದಿಢೀರ್  ಸೇಬಿನ ಕೇಸರಿ ಬಾತ್ ತಯಾರ್.