ಪಿ.ಯು.ಸಿ ಮುಗಿಸಿದ ಅಭ್ಯರ್ಥಿಗಳಿಗೆ ದಕ್ಷಿಣ ಕನ್ನಡ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ ಪ್ರಕಟಣೆ..!!

0
906

puc ಮುಗಿಸಿದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿ ಬರುವ ತಾಲೂಕುಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆ ನೇಮಕಾತಿ ಪ್ರಕಟಣೆ ಹೊರಡಿಸಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 31. 2018 ರ ಒಳಗೆ ಅರ್ಜಿ ಸಲ್ಲಿಸಬಹುದು.

Also read: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನಲ್ಲಿ ಉದ್ಯೋಗ ಅವಕಾಶ: ತಿಂಗಳಿಗೆ 75000 ಗಳಿಸಬಹುದು…!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ ನೋಡಿ:

  • ಹೆದ್ದೆಯ ಹೆಸರು (Name Of The Posts): ಗ್ರಾಮ ಲೆಕ್ಕಿಗ ಹುದ್ದೆ
  • ಸಂಸ್ಥೆ (Organisation): ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ
  • ವಿದ್ಯಾರ್ಹತೆ (Educational Qualification): ಅಭ್ಯರ್ಥಿಗಳು ಸಿಬಿಎಸ್ಇ ಅಥವಾ ಐಸಿಎಸ್ಇ 12 ನೇ ತರಗತಿ ಪಾಸಾಗಿರಬೇಕು
  • ಉದ್ಯೋಗ ಸ್ಥಳ (Job Location): ದಕ್ಷಿಣ ಕನ್ನಡ
  • ಅನುಭವ (Experience): ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
  • ಅಗತ್ಯವಿರುವ ಸ್ಕಿಲ್ಸ್ (Skills Required): ಕಂಪ್ಯೂಟರ್ ಜ್ಞಾನ ಹೊಂದಿರಬೇಕು
  • ಉದ್ಯಮ (Industry): ಜಿಲ್ಲಾಧಿಕಾರಿ ಕಚೇರಿ
  • ಅರ್ಜಿಸಲ್ಲಿಸಲು (Application End Date): October 31, 2018

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಮೊದಲಿಗೆ ಆಫೀಶೀಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ
  • ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಅರ್ಜಿಯನ್ನ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸಲು ಅವಕಾಶವಿದೆ.
  • ಅರ್ಜಿಗಳನ್ನು ನೆರೆವಾಗಿ ಇಲ್ಲ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.
  • ಸ್ಕ್ರೀನ್ ಮೇಲೆ ಮೂಡುವ ಹುದ್ದೆಯ ವಿವರಗಳನ್ನ ಕ್ಲಿಕ್ ಮಾಡಿ, ಗಮನವಿಟ್ಟು ಓದಿಕೊಳ್ಳಿ
  • ಬಳಿಕ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ
  • ಅಭ್ಯರ್ಥಿಯು ಸಬ್‌ಮಿಟ್ ಬಟನ್ ಒತ್ತಿದರೆ ಅರ್ಜಿ ಸಂಖ್ಯೆ ಸೃಷ್ಟಿಯಾಗುತ್ತದೆ

Also read: ITI ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ NPCIL ನಲ್ಲಿ ಉತ್ತಮ ಅವಕಾಶವಿದೆ ನೋಡಿ..!!

ಅರ್ಜಿಸಲ್ಲಿಕೆಗೆ ಶುಲ್ಕ ಪಾವತಿ:

  • SC/ST, CAT 1 – ರೂ 250/- ಸಾಮಾನ್ಯ ವರ್ಗ, 2A, 2ಬB, 3A, 3B ವರ್ಗಕ್ಕೆ : ರೂ 500/-
  • ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ
  • ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ ಮತ್ತು ದ್ವಿಪ್ರತಿ ಚಲನ್ ತೆಗೆದಕೊಳ್ಳಬೇಕು
  • ಚಲನ್-ನ್ನು ಅರ್ಜಿ ಶುಲ್ಕದೊಂದಿಗೆ ಕಾರ್ಪೋರೇಶನ್ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್ ಕರ್ನಾಟಕದ ಯಾವುದಾದರೂ ಶಾಖೆಯಲ್ಲಿ ಪಾವತಿಸಬೇಕು.
  • ಅಭ್ಯರ್ಥಿಗಳು ಕಡ್ಡಾಯವಾಗಿ ಸ್ವೀಕೃತಿ ಸ್ಲಿಪ್ ಮತ್ತು ಚಲನ್ ಪಾವತಿಯ ಒಂದು COPY ತಮ್ಮ ಬಳಿ ಇಟ್ಟಕೊಳ್ಳಬೇಕು.
  • ಅರ್ಜಿ ಶುಲ್ಕ ಪಾವತಿಸಲು ಬ್ಯಾಂಕಿನಲ್ಲಿ ನಿಗಧಿತ ಗೊಳಿಸಿದ ಕೊನೆಯ ದಿನಾಂಕ 02.11.2018 ರ ಸಂಜೆ 5.30 ರೊಳಗೆ ಚಲನ್ ಅಪ್‌ಲೋಡ್ ಮಾಡಿಕೊಳ್ಳಬೇಕು.

ಅಭ್ಯರ್ಥಿಗಳು ನೆನಪಿನಲ್ಲಿ ಇಟ್ಟುಕೊಳ್ಳಲು ಅಂಶಗಳು:

  • ಅರ್ಜಿ ಸಲ್ಲಿಸುವ ದಿನಾಂಕ : 01/10/2018
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31/10/2018
  • ಅರ್ಜಿ ಶುಲ್ಕವನ್ನ ಬ್ಯಾಂಕಿಗೆ ಪಾವತಿಸಿಲು ಕೊನೆಯ ದಿನಾಂಕ : 02/11/2018