ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ CISF ಹೆಡ್​ ಕಾನ್ಸ್‌ಟೇಬಲ್​ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
588

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸೆಂಟ್ರಲ್​ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್​ (CISF) ವಿಭಾಗದ ಹೆಡ್​ ಕಾನ್ಸ್ಟೇಬಲ್​ ಹುದ್ದೆಗಳು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. 12ನೇ ತರಗತಿ ಉತೀರ್ಣರಾದ ಅಭ್ಯರ್ಥಿಗಳು ಫೆಬ್ರವರಿ 20 2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: 10ನೇ ತರಗತಿ ಪಾಸಾದವರಿಗೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಉದ್ಯೋಗ ಅವಕಾಶ..

ಹುದ್ದೆಗೆ ಸಂಬಧಪಟ್ಟ ಮಾಹಿತಿ:

  • ಹುದ್ದೆಯ ಹೆಸರು: ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ (CISF Head Constable)
  • ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ(ಪಿಯುಸಿ) ಪಾಸ್ ಆಗಿರಬೇಕು.
  • ವಯೋಮಿತಿ: ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೆಯೇ 25 ವರ್ಷದೊಳಗಿರಬೇಕಾಗುತ್ತದೆ. ಒಬಿಸಿ ಮತ್ತು ಎಸ್​ಸಿ ಎಸ್​ಟಿ ಸಮುದಾಯದ ಅರ್ಜಿದಾರರಿಗೆ ವಯಸ್ಸಿನಲ್ಲಿ 3 ಮತ್ತು 5 ವರ್ಷಗಳ ವಿನಾಯಿತಿ ನೀಡಲಾಗಿದೆ.
    Also read: ಲಕ್ಷಾಂತರ ರುಪಾಯಿ ಸಂಬಳ ನೀಡುವ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಸ್ಪೆಷಲಿಸ್ಟ್​ ಕ್ಯಾಡರ್​ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯಾಗಿದೆ!
  • ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಪಿಎಸ್ಟಿ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಒಎಂಆರ್ ಅಥವಾ ಕಂಪ್ಯೂಟರ್​ ಆಧಾರಿತ ಪರೀಕ್ಷೆ ಇರಲಿದೆ. ಮೂರನೇ ಹಂತದಲ್ಲಿ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ.
  • ಒಟ್ಟು ಪೋಸ್ಟ್​ಗಳು: 429 ಹುದ್ದೆಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20
  • ಹೆಚ್ಚಿನ ಮಾಹಿತಿಗಾಗಿ: https://cisfrectt.in/
  • ಕ್ಲಿಕ್ ಮಾಡಿ.