ದೇವರ ಹರಕೆಗೆ ಮಾನವರ ಬಲಿ; ಸ್ವಂತ ಮಕ್ಕಳನ್ನೇ ವಿಚಿತ್ರವಾಗಿ ಬಲಿ ಪದ್ಧತಿ, ಒಂದೇ ಸ್ಥಳದಲ್ಲಿ ಪತ್ತೆಯಾದವು 227 ಮಕ್ಕಳ ಅಸ್ಥಿಪಂಜರ.!

0
376

ಜನರು ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ಕೊಡುವುದು ಎಷ್ಟೊಂದು ಸರಿ ಎನ್ನುವ ಪ್ರಶ್ನೆಗಳು ಹುಟ್ಟಿ, ಇದಕ್ಕೆ ವಿರೋಧಗಳು ಕೇಳಿ ಬಂದು ಕೋರ್ಟ್ ಮೆಟ್ಟಿಲೇರಿದ್ದು ಇದೆ. ಆದರೆ ಕೆಲವು ಪ್ರದೇಶದಗಳಲ್ಲಿ ದೇವರ ಹೆಸರಲ್ಲಿ ಪ್ರಾಣಿಗಳು ಹೋಗಲಿ ಮನುಷ್ಯರನ್ನೇ ಬಲಿ ಕೊಡುತ್ತಾರೆ ಎಂದರೆ ಆಶ್ಚರ್ಯವಾಗಿತ್ತೆ. ಇನ್ನೂ ಕೆಲವರು ಮಕ್ಕಳನ್ನು ಗರ್ಭಿಣಿಯರನ್ನು ನಿಧಿ ಆಸೆಗೆ ಬಲಿ ಕೊಡುವ ಪ್ರಕರಣಗಳು ಕೇಳಿಬಂದಿವೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ನೂರಾರು ಮಕ್ಕಳನ್ನು ಬಲಿ ಕೊಟ್ಟಿದ್ದು ಬೆಳಕಿಗೆ ಬಂದಿದ್ದು, ಒಂದೇ ಜಾಗದಲ್ಲಿ ಸುಮಾರು 227 ಅಸ್ತಿಪಂಜರಗಳು ಪತ್ತೆಯಾಗಿವೆ.

ಮಕ್ಕಳ ಅತಿಪಂಜರ ಪತ್ತೆ?

ಹೌದು ಕೆಲವು ಸಮುದಾಯಗಳು ನಡೆಸಿಕೊಂಡು ಬರುತ್ತಿರುವ ಪದ್ದತಿಗಳು ಮತ್ತು ಆಚರಣೆಗಳು ಕೇಳುಗರಿಗೆ ವಿರೋಧ ಅನಿಸಿದರು ಅವುಗಳನ್ನು ಇನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ದೇವರ ಹೆಸರಲ್ಲಿ ಮಕ್ಕಳನ್ನು ಬಲಿ ಕೊಡುತ್ತಾರೆ ಎನ್ನುವುದಕ್ಕೆ ಹೆಸರುವಾಸಿಯಾದ ಚಿಮು ನಾಗರೀಕತೆ ನೆಲಸಿದ್ದ ಪೆರುವಿನ ಪೂರ್ವ ಕೊಲಂಬಿಯಾ ಪ್ರದೇಶದಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರಗಳು ದೊರಕಿವೆ. ಕಳೆದ ಒಂದು ವರ್ಷದಿಂದ ರಾಜಧಾನಿ ಲಿಮಾದ ಉತ್ತರದ ಪ್ರವಾಸಿ ಪಟ್ಟಣವಾದ ಹುವಾನ್‍ಚಾಕೊ, ಚಿಮು ನಾಗರೀಕತೆಯಲ್ಲಿ ಮಕ್ಕಳನ್ನು ಬಲಿಕೊಡವ ಅತೀ ದೊಡ್ಡ ತಾಣ ಎಂದು ಪೆರುವಿನ ಪುರಾತತ್ವ ಇಲಾಖೆ ಅಲ್ಲಿ ಸಂಶೋಧನೆ ಮಾಡುತ್ತಿತ್ತು. ಚಿಮು ನಾಗರೀಕತೆಯು ಪೆರುವಿಯನ್ ಕರಾವಳಿಯುದ್ದಕ್ಕೂ ಈಕ್ವೆಡಾರ್‍ವರೆಗೆ ವಿಸ್ತರಿಸಿತ್ತು. ಆದರೆ ಇಂಕಾ ಸಾಮ್ರಾಜ್ಯವು ಈ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ 1475 ರಲ್ಲಿ ಕಣ್ಮರೆಯಾಯಿತು.

ಅದರಂತೆ ಈ ಜಾಗದಲ್ಲಿ ತುಂಬಾ ಮಕ್ಕಳ ಅಸ್ಥಿಪಂಜರಗಳು ಸಿಕ್ಕಿವೆ ಎಂದು ಪುರಾತತ್ವ ಶಾಸ್ತ್ರಜ್ಞ ಫೆರೆನ್ ಕ್ಯಾಸ್ಟಿಲ್ಲೊ ಹೇಳಿದ್ದಾರೆ. ಶಾಸ್ತ್ರಜ್ಞ ಮಾಹಿತಿಯ ಪ್ರಕಾರ, ಅಂದಿನ ಚಿಮು ನಾಗರೀಕತೆಯ ಸಂಸ್ಕೃತಿಯಲ್ಲಿ ದೇವರನ್ನು ಸಮಾಧಾನಪಡಿಸಲು ಅಲ್ಲಿನ ಜನರು 4 ರಿಂದ 14 ವರ್ಷದ ಒಳಗಿನ ಮಕ್ಕಳನ್ನು ಬಲಿ ಕೊಡುತ್ತಿದ್ದ ಮೂಢನಂಬಿಕೆ ಇತ್ತು. ಅವರು ಮಕ್ಕಳನ್ನು ಹೆಚ್ಚು ಶೀತ ಪ್ರದೇಶದಲ್ಲಿ ದೇವರಿಗೆ ಬಲಿಕೊಡುತ್ತಿದ್ದರು. ಈ ಪ್ರದೇಶದಲ್ಲಿ ಎಲ್ಲಿ ಆಗೆಯುತ್ತೀರೋ ಅಲ್ಲಿ ಎಲ್ಲಾ ಮಕ್ಕಳ ಅಸ್ಥಿಪಂಜರಗಳು ಸಿಗುತ್ತಿವೆ ಎಂದು ತಿಳಿಸಿದ್ದಾರೆ. ಈ ನಾಗರೀಕತೆಯಲ್ಲಿ ಮಕ್ಕಳನ್ನು ಸಮುದ್ರಕ್ಕೆ ಎದುರಾಗಿರುವ ಪ್ರದೇಶದಲ್ಲಿ ಹೆಚ್ಚು ಬಲಿಕೊಡಲಾಗಿದೆ.

ಈ ವೇಳೆ ಅವರ ಸಮುದ್ರಕ್ಕೆ ಹತ್ತಿರ ಇರುವ ಪ್ರದೇಶದಲ್ಲಿ ಅತೀ ಹೆಚ್ಚು ಮಕ್ಕಳ ಬಲಿಕೊಟ್ಟಿರುವ ತಾಣಗಳು ಪತ್ತೆಯಾಗಿಯೇ ಹುವಾನ್‍ಚಾಕೊ ಎಂಬ ಪ್ರದೇಶದಲ್ಲಿ ಅತೀ ಹೆಚ್ಚು ಮಕ್ಕಳ ಅವಶೇಷಗಳು ಕಂಡು ಬಂದಿದ್ದು, ಈ ಪ್ರದೇಶವನ್ನು ಅತೀ ಹೆಚ್ಚು ಮಕ್ಕಳನ್ನು ಬಲಿಪಡೆದ ಪ್ರದೇಶ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. 2018 ರ ಜೂನ್ ಅಲ್ಲಿ ಪಂಪಾ ಲಾ ಕ್ರೂಜ್ ಪಟ್ಟಣದ ನೆರೆಹೊರೆಯ ಸ್ಥಳದಲ್ಲಿ ಅಗೆದು ಸಂಶೋಧನೆ ಮಾಡುವಾಗ ಪುರಾತತ್ವ ಶಾಸ್ತ್ರಜ್ಞರಿಗೆ ಮೊದಲು ಮಕ್ಕಳ ಶವಗಳು ಸಿಕ್ಕವು. ಈ ಪ್ರದೇಶದಲ್ಲಿ 56 ಮಕ್ಕಳ ಅಸ್ಥಿಪಂಜರಗಳನ್ನು ಪತ್ತೆಯಾದವು. ಪಂಪಾ ಲಾ ಕ್ರೂಜ್ ಹುವಾನ್‍ಚಾಕೊದಿಂದ ಸ್ವಲ್ಪ ದೂರದಲ್ಲಿದ್ದು, ಅಲ್ಲಿ ಜೀವವನ್ನು ತ್ಯಾಗ ಮಾಡಿದ 140 ಮಕ್ಕಳು ಮತ್ತು 200 ಲಾಮಾಗಳ ಅವಶೇಷಗಳು 2018 ರ ಏಪ್ರಿಲ್‍ನಲ್ಲಿ ಪತ್ತೆಯಾಗಿದ್ದವು. ಇದೆಲ್ಲವೂ ಒಂದು ಅನಿಷ್ಟ ಮತ್ತು ಕಾನೂನಿಗೆ ವಿರೋಧವಾದ ಪದ್ದತಿಯಾಗಿದ್ದು ಸರ್ಕಾರ ಸರಿಯಾದ ಕ್ರಮ ಕೈ ಗೊಳ್ಳುತ್ತಿದೆ.

Also read: ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ; ಈ ಜಿಲ್ಲೆಯಲ್ಲಿ ದಲಿತರು ಹೋಟೆಲ್‍ಗೆ ಹೋಗಂಗಿಲ್ಲ, ಕುಡಿಯಲು ನೀರು ಇಲ್ಲ, ಮೆಡಿಕಲ್-ನಲ್ಲಿ ಟ್ಯಾಬ್ಲೆಟ್ ಕೂಡ ಕೊಡಲ್ಲ..