ಚಳಿಗಾಲದಲ್ಲಿ ನಿಮ್ಮ ತುಟಿಗಳು ಒಡೆದು ನೋವು ಅನುಭವಿಸುತ್ತಿರ? ಹಾಗಾದ್ರೆ ತಪ್ಪದೆ ಈ ಮನೆಮದ್ದು ಪಾಲಿಸಿ ನೋಡಿ ತೊಂಡೆಹಣ್ಣಿನ್-ಕ್ಕಿಂತ ಕೆಪ್ಪಾಗಿರುತ್ತೆ..

0
485

ಚಳಿಗಾಲ ಬಂತು ಎಂದರೆ ಚರ್ಮದ ಗುಣವೆಲ್ಲ ಹಾಳಾಗಿ ಒಡೆದು ರಕ್ತ ಸೋರುತ್ತೆ. ಇದರಿಂದ ತುಟಿಗಳು ಕಪ್ಪಾಗಿ ಒಡೆದು ವಿಪರೀತವಾದ ನೋವು ಕಾಣುತ್ತೆ. ಸರಿಯಾಗಿ ಊಟ ಕೂಡ ಮಾಡಲು ಆಗುವುದಿಲ್ಲ. ಅದರಲ್ಲಿ ಒಣ ಚರ್ಮವಿರುವರು ಅಂತು ಈ ಹಾಳಾದ ಚಳಿಗಾಲ ಯಾಕಾದರೂ ಬರುತ್ತೋ ಅಂತ ಗೊಣಗುತ್ತಾರೆ ಅಷ್ಟೊಂದು ನೋವನ್ನುಂಟು ಮಾಡುತ್ತೆ ಈ ಚಳಿಯಿಂದ ಹಾಗಾದ್ರೆ ಈ ಚಳಿಗಾಲದಲ್ಲಿ ನಿಮ್ಮ ತುಟಿಗಳು ಒಡೆಯದೆ ಇರಲು ಮತ್ತು ಯಾವತ್ತು ಗುಲಾಬಿ ಬಣ್ಣದಲ್ಲಿರಲು ಈ ಮನೆಮದ್ದು ಪಾಲಿಸಿ.


ಶ್ರೀಗಂಧ ಪುಡಿ :

ಶ್ರೀಗಂಧದ ಪುಡಿಯಲ್ಲಿ ಇರುವಂತಹ ಚರ್ಮ ಬಿಳಿ ಮಾಡುವ ಗುಣಗಳು ತುಟಿ ಹಾಗೂ ಗಲ್ಲದ ಸುತ್ತಿನ ಕಪ್ಪಾಗಿರುವ ಚರ್ಮವನ್ನು ಬಿಳಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಒಂದು ಚಮಚ ಶ್ರೀಗಂಧದ ಹುಡಿ ಮತ್ತು ಎರಡು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಇದನ್ನು ಪೇಸ್ಟ್ ಮಾಡಿಕೊಂಡು ಬಾಧಿತ ಚರ್ಮಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ. ವೇಗದ ಫಲಿತಾಂಶ ಪಡೆಯಬೇಕೆಂದರೆ ವಾರದಲ್ಲಿ 3-4 ದಿನ ಇದನ್ನು ಬಳಸಿ.

ತೆಂಗಿನ ಎಣ್ಣೆ:

ಒಣಗಿದ ತುಟಿಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು. ಅಥವಾ ಹರಳೆಣ್ಣೆ ಕೂಡ ಅನ್ವಯಿಸಬಹುದು.

ಅರಿಶಿನ ಪುಡಿ:

ಅರಿಶಿನ ಪುಡಿಯಲ್ಲಿ ಚರ್ಮಕ್ಕೆ ನೆರವಾಗುವಂತಹ ಆ್ಯಂಟಿಆಕ್ಸಿಡೆಂಟ್ ತುಟಿ ಹಾಗೂ ಗಲ್ಲದತ್ತ ಇರುವಂತಹ ಕಪ್ಪು ಬಣ್ಣವನ್ನು ಬಿಳಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಒಂದು ಚಿಟಿಕೆ ಅರಶಿನ ಪುಡಿಯನ್ನು ಒಂದು ಚಮಚ ಮೊಸರಿನೊಂದಿಗೆ ಬೆರೆಸಿ. ಇದನ್ನು ಬಾಧಿತ ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಹಾಗೆ ಬಿಡಿ. ಹಗುರ ಬಿಸಿ ನೀರಿನಿಂದ ಮುಖ ತೊಳೆಯರಿ. ಮನೆಯಲ್ಲೇ ತಯಾರಿಸಿರುವ ಪೇಸ್ಟ್ ಅನ್ನು ವಾರದಲ್ಲಿ ಒಂದು ಸಲ ಬಳಸಿ.

ಸೌತೆಕಾಯಿ:

ತುಟಿಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸೌತೆಕಾಯಿಗಳ ಪಾತ್ರ ಕೂಡ ಪ್ರಮುಖವಾಗಿದೆ. ಸೌತೆಕಾಯಿ ತುಂಡುಗಳನ್ನು ಎರಡ್ಮೂರು ನಿಮಿಷಗಳ ಕಾಲ ತುಟಿಗಳಿಗೆ ಅನ್ವಯಿಸುವುದರಿಂದ ಒಣ ತುಟಿ ಸಮಸ್ಯೆಗೆ ಪರಿಹಾರ ಕಾಣಬಹುದು. ಸೌತೆಕಾಯಿ:

ಅಲೋವೆರಾ:

ಅಲೋವೆರಾ ಗಿಡದ ತಿರುಳನ್ನು ತುಟಿಗಳಿಗೆ ಹಚ್ಚುವುದರಿಂದ ಒಣಗಿದ ತುಟಿಗಳ ಸಮಸ್ಯೆ ದೂರವಾಗಿ ಲಿಪ್ಸ್ ಸದಾ ಕಾಂತಿಯುತವಾಗಿ ಕಾಣಿಸುತ್ತದೆ.

ಆಲಿವ್ ತೈಲ:

ಚರ್ಮಕ್ಕೆ ಸಂಬಂಧಿಸಿದಂತಹ ಎಲ್ಲಾ ರೀತಿಯ ಸಮಸ್ಯೆಗಳಿಗೆ ಆಲಿವ್ ತೈಲವು ತುಂಬಾ ಪರಿಣಾಮಕಾರಿಯಾಗಿದೆ. ತುಟಿ ಹಾಗೂ ಗಲ್ಲದ ಸುತ್ತಲಿನ ಕಪ್ಪು ಚರ್ಮವನ್ನು ಬಿಳಿಯಾಗಿಸುವಲ್ಲಿ ಆಲಿವ್ ತೈಲವು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಬಾಧಿತ ಚರ್ಮಕ್ಕೆ ಆಲಿವ್ ತೈಲವನ್ನು ಹಚ್ಚಿಕೊಳ್ಳಿ ಮತ್ತು ಇದನ್ನು ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ಇದನ್ನು ನೀರಿನಿಂದ ತೊಳೆಯಿರಿ. ತುಟಿ ಮತ್ತು ಗಲ್ಲದ ಸುತ್ತಿನ ಕಪ್ಪು ಚರ್ಮ ನಿವಾರಣೆ ಮಾಡಲು ದಿನಲೂ ಇದನ್ನು ಬಳಸಿದರೆ ತುಂಬಾ ಒಳ್ಳೆಯದು.

ಜೇನುತುಪ್ಪ:

ಕಚ್ಚಾ ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ವ್ಯಾಸಲಿನ್​ನೊಂದಿಗೆ ಮಿಶ್ರ ಮಾಡಿ. ರಾತ್ರಿ ಮಲಗುವ ವೇಳೆ ಇದನ್ನು ತುಟಿಗಳಿಗೆ ಹಚ್ಚುವುದರಿಂದ ಶೀಘ್ರ ಪರಿಹಾರ ಕಾಣಬಹುದು.

ಗುಲಾಬಿ ಹೂ ಎಲೆಗಳು:

ಗುಲಾಬಿ ಹೂವಿನ ಎಲೆಗಳನ್ನು ವ್ಯಾಸಲಿನ್​ನೊಂದಿಗೆ ಮಿಶ್ರಣ ಮಾಡಿ ತುಟಿಗೆ ಹಚ್ಚಿಕೊಳ್ಳಿ. ಇದರಿಂದ ತುಟಿಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.