ಬ್ಯಾಟ್ ಬಿಟ್ಟು ಎಕೆ 47 ಗನ್ ಹಿಡಿದ ಮಹೇಂದ್ರ ಸಿಂಗ್ ಧೋನಿ; ಸೈನಿಕರೊಂದಿಗೇ 19 ಕೆಜಿ ಬ್ಯಾಗ್ ಹೊತ್ತು ಕಾಶ್ಮೀರದಲ್ಲಿ ಸೇವೆ ಆರಂಭ..

0
161

ಕ್ರಿಕೆಟ್‌ ಜೀವನದಲ್ಲಿ ಹಲಾವರು ಇತಿಹಾಸ ಬರೆದ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಗೆ ಸೇರಿದ್ದಾರೆ. ಎನ್ನುವ ಸುದ್ದಿ ದೇಶ- ವಿದೇಶದಲ್ಲಿ ವೈರಲ್ ಆಗಿ ಮೆಚ್ಚುಗೆ ಪಡೆದಿದ್ದರು, ಈಗ ಧೋನಿ ಕ್ರಿಕೆಟ್‌ಗೆ ಎರಡು ತಿಂಗಳುಗಳ ಬಿಡುವು ಪಡೆದು ಇಂದಿನಿಂದ ಎಲ್ಲ ಸೈನಿಕರಂತೆ ನಿಜವಾದ ಕರ್ತವ್ಯ ಸಲ್ಲಿಸಲು ಮುಂದಾಗಿದ್ದಾರೆ. ಈ ಹಿಂದೆ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ ಅವರು ಈಗ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ವರೆಗೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಹೌದು ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿದ್ದ, ಮಾಹಿಗೆ ನಿಜವಾದ ಸವಾಲು ಇಂದಿನಿಂದ ಶುರುವಾಗಿದ್ದು, ಧೋನಿ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಗಸ್ತು ತಿರುಗುವ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕೈಯಲ್ಲಿ ಎಕೆ-47 ಮತ್ತು 19 ಕೆಜೆ ಭಾರದ ಬ್ಯಾಗ್ ಹೊತ್ತು ಕಾಶ್ಮೀರ ಪರ್ವತ ಶ್ರೇಣಿಯಲ್ಲಿ ಗಸ್ತು ತಿರುಗಲಿದ್ದಾರೆ. 106ನೇ ಟೆರಿಟೋರಿಯಲ್ ಆರ್ಮಿ ಬಟಾಲಿಯನ್ ಪ್ಯಾರಾ ಕಮಾಂಡೋ ಯುನಿಟ್ ನಲ್ಲಿ ಧೋನಿ ಕಾರ್ಯ ನಿರ್ವಹಿಸಲಿದ್ದಾರೆ. ಅವಂತಿಪೋರಾದ ತೈನಾತಿ ಘಾಟಿಯಲ್ಲಿ ಧೋನಿ ಗಸ್ತು ತಿರುಗಲಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯೇ ಪಟ್ರೋಲಿಂಗ್, ಗಾರ್ಡ್ ಮತ್ತು ಪೋಸ್ಟ್ ಡ್ಯೂಟಿಯನ್ನು ಧೋನಿ ನಿರ್ವಹಿಸಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ವರೆಗೆ ಕಾಶ್ಮೀರದಲ್ಲಿ ಸೇವೆ

ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅವಕಾಶ ಕೋರಿದ್ದ ಧೋನಿ ಬೇಡಿಕೆಯನ್ನು ಇತ್ತೀಚೆಗಷ್ಟೇ ಮಾನ್ಯ ಮಾಡಿದ್ದ ಭಾರತೀಯ ಸೇನೆ, ಧೋನಿಯನ್ನು ಜುಲೈ 31ರಿಂದ ಆಗಸ್ಟ್ 15ವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿತ್ತು. ಹೀಗಾಗಿ ಮುಂದಿನ 15 ದಿನಗಳ ಅವಧಿಯಲ್ಲಿ ಧೋನಿ ಅರೆಸೇನಾಪಡೆಯ ವಿಕ್ಟರ್‌ ಫೋರ್ಸ್ ನೊಂದಿಗೆ ಗಸ್ತು ತಿರುಗಲಿದ್ದಾರೆ. ಅಲ್ಲದೆ ಧೋನಿ ಇದೇ ವಿಕ್ಟರ್ ಫೋರ್ಸ್ ಸೈನಿಕರೊಂದಿಗೇ ಇರಲಿದ್ದು, ಸೈನಿಕರು ನಿರ್ವಹಿಸುವ ಎಲ್ಲಾ ಕೆಲಸಗಳನ್ನೂ ಮಾಡಲಿದ್ದಾರೆ. ಇನ್ನು ಧೋನಿ ಅವರಿಗೆ ಇತರೆ ಸೇನಾಧಿಕಾರಿಗಳಂತೆ ಒಂದು ಎಕೆ 47 ಬಂದೂಕು ನೀಡಲಿದ್ದು, ಅದರೊಂದಿಗೆ ಬುಲೆಟ್ ಗಳು ತುಂಬಿರುವ ಮೂರು ಮ್ಯಾಗಜಿನ್ ಅನ್ನೂ ಕೂಡ ನೀಡಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಮೊದಲಿನಿಂದ ಅವರಿಗೆ ಇಚ್ಛೆಯಿತ್ತು ಆದರೆ ಕ್ರಿಕೆಟ್-ನಲ್ಲಿ ಬಾಗಿಯಾದ ಕಾರಣ ಈಗ ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅವಕಾಶ ಕೋರಿದ್ದ ಧೋನಿ ಬೇಡಿಕೆಯನ್ನು ಇತ್ತೀಚೆಗಷ್ಟೇ ಮಾನ್ಯ ಮಾಡಿದ್ದ ಭಾರತೀಯ ಸೇನೆ, ಧೋನಿಯನ್ನು ಜುಲೈ 31ರಿಂದ ಆಗಸ್ಟ್ 15ವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿತ್ತು. ಹೀಗಾಗಿ ಮುಂದಿನ 15 ದಿನಗಳ ಅವಧಿಯಲ್ಲಿ ಧೋನಿ ಅರೆಸೇನಾಪಡೆಯ ವಿಕ್ಟರ್‌ ಫೋರ್ಸ್ ನೊಂದಿಗೆ ಗಸ್ತು ತಿರುಗಲಿದ್ದಾರೆ. ಅದರಂತೆ ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು.

ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು. ಅಂತೆಯೇ ಧೋನಿ ತಮ್ಮ ಕರ್ತವ್ಯದ ಸಂದರ್ಭದಲ್ಲಿ ಕಾಶ್ಮೀರದಲ್ಲಿರುವ ವಿವಿಧ ಸೇನಾ ಕ್ಯಾಂಪ್ ಗಳಿಗೆ ಭೇಟಿ ನೀಡಲಿದ್ದು, ಸೈನಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಅಲ್ಲಿ ಸೇನೆ ನಡೆಸುತ್ತಿರುವ ಶಾಲೆಗಳಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿರುವ ಧೋನಿ ಮಕ್ಕಳೊಂದಿಗೆ ಬೆರೆತು ವಿವಿಧ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲ್ಲಿದ್ದಾರೆ. ಇದಲ್ಲದೆ ಧೋನಿ ಕಾಶ್ಮೀರದ ಐದು ಸ್ಥಳೀಯ ಕ್ರಿಕೆಟ್ ತಂಡಗಳೊಂದಿಗೆ ಕ್ರಿಕೆಟ್ ಸರಣಿ ಕೂಡ ಆಡಲಿದ್ದಾರೆ.