ಸೇನಾಧಿಕಾರಿ ಎಚ್ಚರಿಕೆ ನಂತರ ಹಾಡಿನ ಮೂಲಕ ಸಮಸ್ಯೆ ಹೇಳಿಕೊಂಡ ಸೈನಿಕ!

0
982

ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆ ಹೇಳಿಕೊಂಡರೆ ಅದು ಅಪರಾಧ ಎಂದು ಪರಿಗಣಿಸಿ ಶಿಕ್ಷೆಗೆ ಗುರಿ ಮಾಡಲಾಗುವುದು ಎಂದು ಸೇನಾಧಿಕಾರಿ ಬಿಪಿನ್‍ ರಾವತ್‍ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ತಾವು ಎಂತಹ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹಾಡಿದ ವೀಡೀಯೊವನ್ನು ಸಿಖ್‍ ಸೈನಿಕ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಆರ್ಟಿಕಲ್ ನೋಡಿ :  ಸಾಮಾಜಿಕ ಜಾಲತಾಣದ ಮೊರೆ ಹೋದರೆ ಶಿಕ್ಷೆ: ಯೋಧರಿಗೆ ಸೇನಾ ಮುಖ್ಯಸ್ಥ ಬಿಪಿನ್‍ ರಾವತ್‍ ಎಚ್ಚರಿಕೆ

ಪಂಜಾಬ್‍ ಮೂಲದ ಈ ಸೈನಿಕ ಹಾಡನ್ನು ಯಾವಾಗ ಸಿದ್ಧಪಡಿಸಿದ್ದು ಎಂಬುದು ತಿಳಿದು ಬಂದಿಲ್ಲ. ಆದರೆ ಆಂಗ್ಲ ಪತ್ರಿಕೆಯೊಂದು ಈ ವೀಡೀಯೊ ಪ್ರಕಟವಾಗಿರುವುದನ್ನು ಪ್ರಕಟಿಸಿದೆ. ಹಾಡಿಗೆ ಪಿಕಲ್‍ ಇನ್‍ ದಿ ರೋಟಿ (ರೋಟಿ ಮೇಲೆ ಉಪ್ಪಿನಕಾಯಿ) ಎಂದು ಹೆಸರಿಡಲಾಗಿದೆ.

ವೀಡೀಯೊ 10 ನಿಮಿಷದ್ದಾಗಿದ್ದು, ನಾವು ಇಲ್ಲಿಗೆ ಬಂದು 10 ತಿಂಗಳು ಆಗಿವೆ. ರಜೆ ಸಿಗದೇ ಇಲ್ಲೇ ಇದ್ದೇನೆ. ಅವಳ ಕಣ್ಣಿಂದ ಕಣ್ಣೀರು ಹರಿಯುತ್ತಲೇ ಇದೆ. ನಮ್ಮನ್ನು (ಯೋಧರನ್ನು) ಮದುವೆ ಆದರೆ ಆಕೆ ಮದುವೆ ಆದಂತೆಯೂ ಅಲ್ಲ, ಮದುವೆ ಆಗದಂತೆಯೂ ಅಲ್ಲ ಎಂದು ಸೈನಿಕ ಹಾಡಿನಲ್ಲಿ ಹೇಳಿದ್ದಾರೆ.

ರಾಜಕಾರಣಿಗಳು ಸೇನೆಯಲ್ಲಿನ ಯುವಕರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದೇ ಇಲ್ಲ ಎಂದು ಹೇಳಿರುವ ಸೈನಿಕ, ನಮಗೆ ಶುಭರಾತ್ರಿ ಕೋರಿ ಅವರು ಮಲಗುತ್ತಾರೆ. ನಾವು ದೀಪಾವಳಿಯಲ್ಲಿ ಗಡಿಯಲ್ಲಿ ಆಚರಿಸುತ್ತೇವೆ ಎಂದಿದ್ದಾರೆ.