ಸಾಮಾಜಿಕ ಜಾಲತಾಣದ ಮೊರೆ ಹೋದರೆ ಶಿಕ್ಷೆ: ಯೋಧರಿಗೆ ಸೇನಾ ಮುಖ್ಯಸ್ಥ ಬಿಪಿನ್‍ ರಾವತ್‍ ಎಚ್ಚರಿಕೆ

0
689

ತಮ್ಮ ಸಮಸ್ಯೆ ಹಾಗೂ ದೂರುಗಳಿಗಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋದರೆ ಸೇನೆಯ ನೈತಿಕತೆ ಕಾಪಾಡಲು ಅವರನ್ನು ಶಿಕ್ಷಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್‍ ರಾವತ್‍ ಯೋಧರಿಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಯೋಧರು ತಮ್ಮ ಸಮಸ್ಯೆಗಳನ್ನು ದೂರು ಪೆಟ್ಟಿಗೆಯಲ್ಲಿ ಹಾಕಿದರೆ ಖುದ್ದು ಗಮನಿಸಿ ಪರಿಹರಿಸುತ್ತೇನೆ. ಒಂದು ವೇಳೆ ಸಮಾಧಾನವಾಗದಿದ್ದರೆ ನಿಮ್ಮಿಷ್ಟದಂತೆ ಮಾಡಿ ಎಂದು ಹೇಳಿಕೆ ನೀಡಿದ ಮಾರನೇ ದಿನವೇ ಬಿಪಿನ್‍ ರಾವತ್‍ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಹಳೆ ಪೋಸ್ಟ್ ನೋಡಿ :

1)‘ನಾನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ’ ಫೇಸ್’ಬುಕ್’ನಲ್ಲಿ ಹಿರಿಯ ಅಧಿಕಾರಿಗಳ ಕರಾಳ ಸತ್ಯ ಬಿಚ್ಚಿಟ್ಟ BSF ಯೋಧ

2)ವೈರಲ್ ಆಯ್ತು ಮತ್ತೊಬ್ಬ ಯೋಧನ ಅಳಲು

ದೆಹಲಿಯಲ್ಲಿ ಭಾನುವಾರ ನಡೆದ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಧರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗಿದೆ. ಒಂದು ವೇಳೆ ಸಮಾಧಾನ ಆಗದಿದ್ದರೆ ನೇರವಾಗಿ ನನ್ನನ್ನು ಭೇಟಿ ಮಾಡಬಹುದು ಎಂದು ರಾವತ್‍ ಹೇಳಿದರು.

ಸಾಮಾಜಿಕ ಜಾಲತಾಣಗಳ ಮೊರೆ ಹೋಗುವ ಮೂಲಕ ನೀವು ನಿಯಮಗಳನ್ನು ಮೀರುತ್ತಿದ್ದೀರಿ. ಅದು ಶಿಕ್ಷಾರ್ಹ ಅಪರಾಧ ಎಂಬುದು ನಿಮಗೆ ನೆನಪಿರಲಿ. ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡುವುದರಿಂದ ಸೇನೆಯ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಆಗುತ್ತದೆ. ಇದು ದೇಶಕ್ಕಾಗಿ ಪ್ರಾಣ ಪಣವಿಟ್ಟು ಹೋರಾಡುತ್ತಿರುವ ಯೋಧರ ಆತ್ಮವಿಶ್ವಾಸ ಕುಂದಿಸುತ್ತದೆ ಎಂದು ರಾವತ್‍ ನುಡಿದರು.