ಪತ್ನಿಗೆ ಏಟಿಎಂ ಮೂಲಕ ನಾವು ಜೀವಂತವಾಗಿದ್ದೇನೆ ಎನ್ನುವ ಸೂಚನೆ ನೀಡುತ್ತಿರುವ ಯೋಧ; ಈ ಭಾವನಾತ್ಮಕ ವಿಷಯ ಕೇಳುಗರಿಗೆ ಕಣ್ಣಿರು ತರಿಸುತ್ತಿದೆ.!

0
118

ದೇಶ ಕಾಯುವ ಯೋಧರಿಗೆ ಯಾವ ಸಮಯದಲ್ಲಿ ಏನಾಗುತ್ತೋ ಎನ್ನುವ ಭಯದಲ್ಲಿ ಜೀವನ ಮಾಡುತ್ತಾರೆ. ಅದೇ ಭಯದಲ್ಲಿ ಮನೆಯವರೂ ಕೂಡ ಇರುತ್ತಾರೆ. ರಜೆಯಲ್ಲಿ ಮನೆಗೆ ಬಂದು ಹೋದ ಯೋಧ ಮತ್ತೆ ಮನೆಗೆ ಬಂದ ಮೆಲಿಯೇ ಮಗ ಬಂದ ಎನ್ನುತ್ತಾರೆ, ಇಂತಹ ಪರಿಸ್ಥಿಯಲ್ಲಿರುವ ಯೋಧರಿಗೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ತಮ್ಮ ಮನೆಗೆ ನಾವು ಬದುಕ್ಕಿದ್ದೇವೆ ಎನ್ನುವ ವಿಚಾರ ತಿಳಿಸುವುದು ಕೂಡ ಕಷ್ಟವಾಗಿದೆ. ಅದಕ್ಕಾಗಿ ಯೋಧ ರೊಬ್ಬರು ಏಟಿಎಂ ಮೂಲಕ ನಾನು ಜೀವಂತವಾಗಿದ್ದೇನೆ ಎನ್ನುವ ವಿಚಾರ ತಿಳಿಸುತ್ತಿರುವ ಭಾವನಾತ್ಮಕ ವಿಷಯ ಕಣ್ಣಿರು ತರಿಸಿದೆ.

Also read: ಕಷ್ಟದಲ್ಲಿರುವ ಮನೆ ಕೆಲಸದವಳಿಗೆ ಸಹಾಯ ಮಾಡಲು ರಸ್ತೆಬದಿ ಉಪಾಹಾರ ಮಾರುತ್ತಿದ್ದಾರೆ ಉನ್ನತ ಹುದ್ದೆಯಲ್ಲಿರುವ ದಂಪತಿಗಳು.!

ಹೌದು 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಕಾಶ್ಮೀರದ ಪ್ರದೇಶದಲ್ಲಿ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರಿಂದ ಕಾಶ್ಮೀರದಲ್ಲಿರುವ ಸೈನಿಕರು ಹಾಗೂ ಸಾಮಾನ್ಯ ಜನರು ತಮ್ಮ ಕುಟುಂಬದ ಜೊತೆ ಮಾತನಾಡಲು ಆಗುತ್ತಿಲ್ಲ. ಅಲ್ಲದೆ ತಮ್ಮ ಕುಟುಂಬಸ್ಥರ ಜೊತೆ ಮಾತನಾಡಲು ಸೈನಿಕರು ಸೇರಿದಂತೆ ಅಲ್ಲಿನ ಜನರು ಟೆಲಿಫೋನ್ ಬೂತ್‍ನಲ್ಲಿ ಸಾಲಾಗಿ ನಿಲ್ಲುತ್ತಿದ್ದಾರೆ. ಹೀಗಿರುವಾಗ ಸೈನಿಕರೊಬ್ಬರು ಪ್ರತಿದಿನ ಸಾಲಿನಲ್ಲಿ ನಿಂತು ಎಟಿಎಂನಿಂದ 100 ರೂ. ಹಣ ಡ್ರಾ ಮಾಡುತ್ತಿದ್ದಾರೆ.

ಕಾಶ್ಮೀರದ ಬಾರಾಮುಲ್ಲಾದಲ್ಲಿ ನೇಮಕವಾದ. ಖವಾಜಾ ಬಾಗ್‍ನ ಎಟಿಎಂನಲ್ಲಿ ಯೋಧ ಪ್ರತಿದಿನ 100 ರೂ. ಡ್ರಾ ಮಾಡುತ್ತಿದ್ದರು. ಬಳಿಕ ಆ 100ರೂ. ಅನ್ನು ತನ್ನ ಪರ್ಸ್ ನಲ್ಲಿಟ್ಟು ಅಲ್ಲಿಂದ ಹೊರಟು ಹೋಗುತ್ತಿದ್ದರು. ಮಾರನೇ ದಿನ ಮತ್ತೆ ಎಟಿಎಂನ ಹೊರಗೆ ಸಾಲಿನಲ್ಲಿ ನಿಂತು 100 ರೂ. ಡ್ರಾ ಮಾಡಿದ್ದರು. ಯೋಧ ಪ್ರತಿದಿನ 100 ರೂ. ಡ್ರಾ ಮಾಡುತ್ತಿರುವುದನ್ನು ಸೆಕ್ಯೂರಿಟಿ ಗಾರ್ಡ್ ಗಮನಿಸಿದ್ದಾನೆ. ಅಲ್ಲದೆ ಈ ಬಗ್ಗೆ ಯೋಧನ ಬಳಿ “ಸರ್ ನೀವು ಪ್ರತಿದಿನ 100 ರೂ. ಏಕೆ ಡ್ರಾ ಮಾಡುತ್ತೀರಾ? ನೀವು ಪ್ರತಿದಿನ ಇಲ್ಲಿಗೆ ಬರಲು ಏಕೆ ಇಷ್ಟು ತೊಂದರೆ ತೆಗೆದುಕೊಳ್ಳುತ್ತೀರಾ. ನೀವು ಒಂದು ವಾರದ ಮಟ್ಟಿಗೆ ಆಗುವ ಹಣವನ್ನು ಡ್ರಾ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಆಗ ಯೋಧ ನನ್ನ ಬ್ಯಾಂಕ್ ಖಾತೆ ನನ್ನ ಪತ್ನಿಯ ಫೋನ್ ನಂಬರ್ ಗೆ ಲಿಂಕ್ ಆಗಿದೆ. ನನ್ನ ಪತ್ನಿ ಮನೆಯಲ್ಲಿ ಇದ್ದಾರೆ. ನಾನು ಎಟಿಎಂನಿಂದ ಹಣ ಡ್ರಾ ಮಾಡಿದಾಗ ಆಕೆಗೆ ಮೆಸೇಜ್ ಹೋಗುತ್ತದೆ. ಈ ಮೂಲಕ ನಾನು ಇನ್ನೂ ಬದುಕಿದ್ದೇನೆ ಎಂದು ಆಕೆ ತಿಳಿದುಕೊಳ್ಳುತ್ತಾಳೆ ಎಂದು ಯೋಧ, ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ ಉತ್ತರಿಸಿದ್ದಾರೆ. ಯೋಧನ ಈ ಉತ್ತರ ಕೇಳಿ ಅಲ್ಲಿಯೇ ಇದ್ದ ಸಾಮಾನ್ಯ ಜನರು ಕೂಡ ಭಾವುಕರಾಗಿದ್ದಾರೆ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ. ಇಂಡಿಯನ್ ಆರ್ಮಿ ಫ್ಯಾನ್ ಫೇಸ್‍ಬುಕ್ ಪೇಜ್ ಅಕ್ಟೋಬರ್ 1ರಂದು ಇದನ್ನು ಪೋಸ್ಟ್ ಮಾಡಿಕೊಂಡಿದೆ. ಈ ಪೋಸ್ಟ್ ನೋಡಿದ ಪ್ರತಿಯೊಬ್ಬರೂ ಭಾವುಕರಾಗಿದ್ದಾರೆ.

ಏನೇ ಇರಲಿ ದೇಶದ ಜನರು ಹಬ್ಬದ ಸಂಭ್ರಮದಲ್ಲಿದ್ದಾರೆ ಆದರೆ ದೇಶವನ್ನು ಕಾಯುವ ಯೋಧ ಮಾತ್ರ ತಾನು ಇನ್ನೂ ಜೀವಂತವಾಗಿದ್ದೇನೆ ಎನ್ನುವುದನ್ನು ಮನೆಯವರಿಗೆ ತಿಳಿಸುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಸೈನಿಕರು ದಿನ ಕಳೆಯುತ್ತಿದ್ದಾರೆ.