ಅಹಂಕಾರದಿಂದ ಹಸಿವಿನ ಜೋಳಿಗೆ ತುಂಬುವುದಿಲ್ಲ

0
1851

ಒಬ್ಬ ರಾಜನು ದಾನ ಧರ್ಮಗಳಿಂದ ಖ್ಯಾತನಾಗಿದ್ದ. ಅವನ ಬಳಿ ಹೋದವರು ಯಾರೂ ನಿರಾಶೆಯಿಂದ ಹಿಂದಿರುಗುತ್ತಿರಲಿಲ್ಲ.

ಒಂದು ದಿನ ಒಬ್ಬ ಭಿಕ್ಷುಕನು ರಾಜನಲ್ಲಿ ಬಂದು ‘ಮಹಾರಾಜನೇ, ನನ್ನಲ್ಲಿರುವ ಈ ಭಿಕ್ಷೆಯ ಜೋಳಿಗೆಯಲ್ಲಿ ಒಂದು ಬಂಗಾರದ ನಾಣ್ಯವನ್ನು ಭಿಕ್ಷೆಯಾಗಿ ಹಾಕುವಿರಾ?’ ಎಂದು ವಿನಂತಿಸಿಕೊಂಡನು.

“ಈ ಭಿಕ್ಷುಕನಿಗೆ ಎಷ್ಟು ಧೈರ್ಯ ‘ಅಂದುಕೊಂಡ ರಾಜನು ಅಹಂಕಾರದಿಂದ, “ಏ ಭಿಕ್ಷುಕ, ಒಣಕಲು ದೇಹವನ್ನು ಹೊಂದಿರುವೆ/ ನಿನಗೇಕೆ ಬೇಕು ಬಂಗಾರದ ನಾಣ್ಯ?

ಅದರ ಬದಲಾ ನಿನ್ನ ಜೋಳಿಗೆಯ ತುಂಬ ಆಹಾರವನ್ನು ಹಾಕುವೆ. ಹೊಟ್ಟೆ ತುಂಬ ತಿಂದು ಬದುಕಬಹುದು’ ಎಂದು ಹೇಳಿದ.

ಭಿಕ್ಷುಕನಿಗೆ ರಾಜನ ಅಹಂಕಾರ ತಿಳಿದುಹೋಯಿತು. ಆ ರಾಜನಿಗೆ ಪಾಠ ಕಲಿಸಬೇಕೆಂದು ಭಿಕ್ಷುಕನು ತನ್ನ ಜೋಳಿಗೆಯನ್ನು ಇನ್ನಷ್ಟು ಉದ್ದಮಾಡಿ ಕೆಳಗೆ ಬಿಟ್ಟನು.

ರಾಜನ ಸೇವರು ಆಹಾರ ತುಂಬಿದ ಪಾತ್ರೆಗಳನ್ನು ತಂದು ಅದರಲ್ಲಿ ಸುರುವಿದರು. ಏನಚ್ಚರಿ..! ಎರಡು, ನಾಲ್ಕು, ಆರು ಎಷ್ಟೇ ಪಾತ್ರೆಗಳಿಂದ ಆಹಾರ ತುಂಬಿದರೂ ಜೋಳಿಗೆ ತುಂಬಲೇ ಇಲ್ಲ.

ರಾಜನಿಗೆ ಮರ್ಯಾದೆಯ ಪ್ರಶ್ನೆಯಾಯಿತು. ಆಗ ರಾಜನ ಅಧಿಕಾರಿಗಳು, “ಮಹಾರಾಜ ಈ ಭಿಕ್ಷುಕ ಮಂತ್ರವಾದಿಯಾಗಿರಬೇಕು..’ ಎಂದು ಹೇಳಿದರು.

ಅದಕ್ಕೆ ಪ್ರತ್ಯುತ್ತರವಾಗಿ ಭಿಕ್ಷುಕನು, ” ಇಲ್ಲ ಮಹಾರಾಜ. ನಾನೊಬ್ಬ ಸಾಮಾನ್ಯ ಭಿಕ್ಷುಕ. ಮಂತ್ರವಾದಿ ಅಲ್ಲ.

ಈ ಜೋಳಿಗೆ ಬಡವನ ಹಸಿವನ್ನು ನೀಗಿಸುತ್ತದೆ. ಜೋಳಿಗೆಯಲ್ಲಿ ಒಂದು ತುಣುಕು ರೊಟ್ಟಿ ಇದ್ದರೂ ಬದುಕುವ ಆಸೆ ಬರುತ್ತದೆ’ ಎಂದು ವಿನಮ್ರವಾಗಿ ಹೇಳಿದ ಭಿಕ್ಷುಕ..

ಮಹಾರಾಜನಿಗೆ ಜ್ಞಾನೋದಯವಾಯಿತು. “ಹೌದಪ್ಪ, ನಿನ್ನ ಜೋಳಿಗೆ ನ್ಯಾಯ, ಧರ್ಮ,ಹಸಿವಿನ ಕಾರಣಕ್ಕೆ ಖಾಲಿಯಿದೆ. ಮನುಷ್ಯ ಮಾತ್ರನಾದ ನನಗೆ ಅದನ್ನು ತುಂಬಲು ಸಾಧ್ಯವಿಲ್ಲ.

ಆದರೆ ನಾನು ಅಹಂಕಾರದಿಂದ ನಿನ್ನ ಜೋಳಿಗೆ ತುಂಬುವ ಪ್ರಯತ್ನವನ್ನೂ ಮಾಡಿಲ್ಲ. ನೀನಿನ್ನು ಭಿಕ್ಷ ಬೇಡಬೇಕಿಲ್ಲ. ನನ್ನ ಆಸ್ಥಾನದಲ್ಲಿರು’ ಎಂದನು.