ಜನಪ್ರಿಯ ಜೋಡಿಗಳಾದ ನರೇಂದ್ರ ಮೋದಿ-ಅಮಿತ್ ಶಾ 370 ಕಲಂ ರದ್ದು ಮಾಡಿರುವುದಕ್ಕೆ ಈ ಐದು ಕಾರಣಗಳು ಮುಖ್ಯವಂತೆ

0
337

ಇಡಿ ದೇಶವೆ ಒಂದು ಎನ್ನುವ ಹೆಗ್ಗಳಿಕೆಯನ್ನು ನೀಡಿದ ಕೇಂದ್ರ ಸರ್ಕಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟು ದಿನ ಪಾಕ್ ಆಕ್ರಮಿತ ಕಾಶ್ಮೀರ ಎನ್ನುವ ಹಣೆಪಟ್ಟಿಯನ್ನು ಕಳಚಿ ಒಂದೇ ಭಾರತ ಎನ್ನುವಂತಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯ ಅನ್ವಯ ಚುನಾವಣಾ ಆಯೋಗ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಕ್ರಮ ಕೈಗೊಳ್ಳುವುದನ್ನು ಕಡ್ಡಾಯಪಡಿಸಿದೆ. ಉಭಯ ಸದನಗಳಲ್ಲಿ ಇದು ಆಂಗೀಕಾರವಾದ ತಕ್ಷಣ ಈ ಕಾರ್ಯವನ್ನು ಆಯೋಗ ಕೈಗೆತ್ತಿಕೊಳ್ಳಲಿದೆ. ಆದರೆ ಇಡಿ ದೇಶದ ತುಂಬೆಲ್ಲ ಹುಟ್ಟಿದ ಒಂದೇ ಒಂದು ಪ್ರಶ್ನೆ ಎಂದರೆ ಪರಿಚ್ಛೇದ 370 ರದ್ದು ಮಾಡಿದ್ದೇಕೆ?

Also read: ಕೇಂದ್ರಾಡಳಿತ ಪ್ರದೇಶವಾಗಲಿದೆ ಜಮ್ಮು-ಕಾಶ್ಮೀರ; ವಿಶೇಷ ಅಧಿಕಾರ, ಸ್ಥಾನಮಾನ ರದ್ದು, ಏನೇನು ಬದಲಾಗುತ್ತೆ? ಇಲ್ಲಿದೆ ನೋಡಿ ರೋಚಕ ಮಾಹಿತಿ!!

ಹೌದು ನಿನ್ನೆಯಿಂದ ಹುಟ್ಟಿಕೊಂಡಿದ ಪ್ರಶ್ನೆಗೆ ಹಲವು ಉತ್ತರಗಳು ಸಿಕ್ಕಿವೆ. ಅದಕ್ಕೆ ಮೋದಿ ಸರ್ಕಾರ ಈ ಐತಿಹಾಸಿಕ ವಿಧೇಯಕ ಮಂಡನೆಗೆ ಮುಂದಾಗುವ ಮುನ್ನ ಭಾರಿ ಸಿದ್ಧತೆ ನಡೆಸಿಕೊಂಡಿದ್ದು ಸುಳ್ಳಲ್ಲ. ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ, ಚರ್ಚೆ, ಕಣಿವೆ ರಾಜ್ಯದಲ್ಲಿ ಯಾವ ರೀತಿ ವ್ಯವಸ್ಥೆಯಾಗಿರಬೇಕು ಎಂಬುದೆಲ್ಲವನ್ನು ಮೋದಿ-ಅಮಿತ್ ಶಾ-ಅಜಿತ್ ದೋವಲ್ ಚರ್ಚಿಸಿ ವಿನ್ಯಾಸಗೊಳಿಸಿ ಅದರಂತೆ ಕಾರ್ಯಗತಗೊಳಿಸಿದ್ದಾರೆ. ಇದರ ಮೊದಲು ತ್ರಿವಳಿ ತಲಾಖ್ ನಂತರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕವನ್ನು ಮಂಡಿಸಿ ಮೋದಿ ಸರ್ಕಾರ ಗೆದ್ದುಕೊಂಡಿದೆ. ಈಗ 370 ರದ್ದು ಮಾಡಿ ಮತ್ತೊಂದು ಹೇಳುವು ಸಿಕ್ಕಿದೆ.

370 ರದ್ದು ಮಾಡಲು 5 ಕಾರಣಗಳು?

1. ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯ.
2. ಸಾಮಾಜಿಕ ಭದ್ರತೆ, ಸಮಾನತೆ ಒದಗಿಸುವ ಮೂಲಕ, ಅಸಹಿಷ್ಣುತೆ ಹತ್ತಿಕ್ಕಿ, ಭಯೋತ್ಪಾದನೆ ಭೀತಿ ನಿರ್ಮೂಲನೆ.
3. ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿ, ದೇಶ- ವಿದೇಶಕ್ಕೆ ಅಲ್ಲಿನ, ಕಲೆ, ಸಂಸ್ಕೃತಿ, ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಲು ಸುರಕ್ಷಿತ ತಾಣವನ್ನಾಗಿಸುವುದು.
4. ಅಂತಾರಾಷ್ಟ್ರೀಯ ಗಡಿ ವಿವಾದ, ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಪಾಕಿಸ್ತಾನದ ಜೊತೆ ದ್ವಿಪಕ್ಷೀಯ, ರಾಜತಾಂತ್ರಿಕ ಮಾತುಕತೆ ನಡೆಸಲು ಸೂಕ್ತ ಅವಕಾಶ.
5. ಅಭಿವೃದ್ಧಿಯೇ ಮೂಲ ಮಂತ್ರವಾಗಿರುವುದರಿಂದ ಬಿಜೆಪಿಯಷ್ಟೇ ಅಲ್ಲ, ಕರ್ನಾಟಕದ ಜೆಡಿಎಸ್, ಬಿಎಸ್ಪಿ ಅಥವಾ ಯಾವುದೇ ಪಕ್ಷದವರು ತಮ್ಮ ಅಭ್ಯರ್ಥಿಗಳನ್ನು ಕಾಶ್ಮೀರದಲ್ಲಿ ನಿಲ್ಲಿಸಿ ಗೆಲ್ಲಿಸಿ, ಆಡಳಿತ ನಡೆಸಬಹುದು.

Also read: ಬಿಗ್ ಬ್ರೇಕಿಂಗ್ ಜಮ್ಮು-ಕಾಶ್ಮೀರದಲ್ಲಿ ಯುದ್ದದ ವಾತಾವರಣ; 370 ವಿಶೇಷ ಸ್ಥಾನಮಾನಕ್ಕೆ ಅಂತಿಮ?ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ..

ಮೋದಿ ಸರ್ಕಾರದ ಮುಂದಿನ ನಡೆ?

“ಈಗ ಮೋದಿ ಅಲೆಯಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಬಹುದು, ಇದರಿಂದ ದೇಶಕ್ಕೆ ದೇಶದ ಜನರಿಗೆ ಅನುಕೂಲವಾಗಲಿದೆ, ತ್ರಿವಳಿ ತಲಾಖ್ ನಂತರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕವನ್ನು ಮಂಡಿಸಿ ಗೆದ್ದಿದೆ. ಈಗ ಮೋದಿ ಹಾಗೂ ಅಮಿತ್ ಶಾ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತು ಭಾರತೀಯ ಜನತಾ ಪಕ್ಷ ದಶಕಗಳಿಂದ ಆಸಕ್ತಿ ತೋರುತ್ತಾ ಬಂದಿದೆ. ಆದರೆ, ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪ್ರತಿ ಪಕ್ಷಗಳು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ.

ಪ್ರಸ್ತುತ ವಿಧಾನಸಭೆ 111 ಸದಸ್ಯರನ್ನು ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ. ಈ ಪೈಕಿ 87 ಮಂದಿ ಚುನಾಯಿತ ಸದಸ್ಯರಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ 24 ಸ್ಥಾನಗಳನ್ನು ಖಾಲಿ ಬಿಡಲಾಗಿದೆ. 87 ಸ್ಥಾನಗಳ ಪೈಕಿ 46 ಸ್ಥಾನಗಳು ಕಾಶ್ಮೀರದಲ್ಲಿದ್ದು, ಜಮ್ಮುವಿನಲ್ಲಿ 37 ಹಾಗೂ ಲಡಾಖ್ ಪ್ರದೇಶದಲ್ಲಿ ನಾಲ್ಕು ಸ್ಥಾನಗಳಿವೆ. 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ.