ವಿಶ್ವದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅರುಂಧತಿ ಭಟ್ಟಾಚಾರ್ಯ

0
501

ವಾಷಿಂಗ್ಟನ್: ಭಾರತದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಂಬ ಖ್ಯಾತಿಗಳಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿ ಗಳಿಸಿದ್ದ ಅರುಂಧತಿ ಭಟ್ಟಾಚಾರ್ಯ ಅವರು ಇದೀಗ ಫಾರ್ಚ್ಯೂನ್ ಮ್ಯಾಗಜಿನ್ ನ  ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ.

ವಿಶ್ವ ಪರಿವರ್ತನೆ ಸಾಮರ್ಥ್ಯ ಹಾಗೂ ಇತರರ ಮೇಲೆ ಪ್ರಭಾವ ಬೀರುವ ವಿಶ್ವದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ ದೊರೆತಿದೆ.

ಖ್ಯಾತ ಅಂತಾರಾಷ್ಟ್ರೀಯ ಮ್ಯಾಗಜಿನ್  ಫಾರ್ಚ್ಯೂನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಎಸ್ ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹಾಗೂ ಲೈಬೀರಿಯಾದಲ್ಲಿ ಲಾಸ್ಟ್ ಮೈಲ್ ಆರೋಗ್ಯ ಕೇಂದ್ರ ಸ್ಥಾಪಿಸಿರುವ ಭಾರತೀಯ  ಮೂಲದ ವೈದ್ಯ ರಾಜ್ ಪಂಜಾಬಿ ಸ್ಥಾನ ಗಳಿಸಿದ್ದಾರೆ. ಅರುಂಧತಿ ಭಟ್ಟಾಚಾರ್ಯ ಅವರು 26ನೇ ಸ್ಥಾನದಲ್ಲಿದ್ದರೆ, ರಾಜ್ ಪಂಜಾಬಿ 28ನೇ ಸ್ಥಾನ ಗಳಿಸಿದ್ದಾರೆ.

ಇನ್ನು ಚಿಕಾಗೋದ ಬೇಸ್ ಬಾಲ್ ಸಂಸ್ಥೆ ಅಧ್ಯಕ್ಷ ಥಿಯೋ ಎಪ್ ಸ್ಟೇಯ್ನ್ ಅವರು ಅಗ್ರ ಸ್ಥಾನದಲ್ಲಿದ್ದು, ಆಲಿಬಾಬಾ ಸಂಸ್ಥೆಯ ಅಧ್ಯಕ್ಷ ಜಾಕ್ ಮಾ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಪೋಪ್ ಫ್ರಾನ್ಸಿಸ್ 3,  ಮಿಲಂಡಾ ಗೇಟ್ಸ್ 4  ಮತ್ತು ಅಮೇಜಾನ್ ಸಿಇಒ ಜೆಫ್ ಬೆಜೋಸ್ 5ನೇ ಸ್ಥಾನದಲ್ಲಿದ್ದಾರೆ.

ಭಾರತದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಂಬ ಖ್ಯಾತಿಗಳಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿ ಗಳಿಸಿದ್ದ ಅರುಂಧತಿ ಭಟ್ಟಾಚಾರ್ಯ ಅವರು ಇದೀಗ ಫಾರ್ಚ್ಯೂನ್ ಮ್ಯಾಗಜಿನ್ ನ  ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ.