ಸರ್ಕಾರದಿಂದ ಜನತೆಗೆ ಭರ್ಜರಿ ಕೊಡುಗೆ ಘೋಷಣೆ; 200 ಯೂನಿಟ್’ವರೆಗೆ ಉಚಿತ ವಿದ್ಯುತ್, ಏನಿದು ಕೊಡುಗೆ??

0
389

ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗೆ ಹತ್ತಿರ ಬರುತ್ತಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಭರ್ಜರಿ ಕೊಡುಗೆ ನೀಡುತ್ತಿದೆ. 200 ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವ ಎಲ್ಲಾ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅಲ್ಲದೆ 201 ರಿಂದ 400 ಯುನಿಟ್ ವಿದ್ಯುತ್ ಬಳಸುವವರಿಗೆ ಶೇ 50 ರಷ್ಟು ಸಹಾಯಧನ ನೀಡುವುದಾಗಿಯೂ ಹೇಳಿದ್ದಾರೆ. ಇದೆಲ್ಲವೂ ಚುನಾವಣೆಯ ಗಿಮಿಕ್ ಆಗಿದ್ದು, ದೆಹಲಿಯ ಜನರ ಮನ ಗೆಲ್ಲಲು ಈ ಕೊಡುಗೆಯನ್ನು ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಹಾಲು ಕುಡಿಯುವ ಮುನ್ನ ಎಚ್ಚರ; ಶಾಂಪೂ, ಯೂರಿಯಾದಿಂದ ಹಾಲು ತಯಾರಿಸಿ ಕೋಟ್ಯಾಧಿಪತಿಗಳಾದ 10 ಡೈರಿ ಮಾಲೀಕರ ಜಾಲ ಪತ್ತೆ!!

ಹೌದು ಈಗಾಗಲೇ ಬಸ್, ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿದ್ಯುತ್ ಉಚಿತ ನೀಡಿ ಜನರಿಗೆ ಸಂತಸ ತಂದಿದ್ದಾರೆ. ಈ ಕುರಿತು ಮಾತನಾಡಿದ ಅವರು ವಿದ್ಯುತ್ ಕಂಪನಿಗಳು ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವುದರಿಂದ ಮತ್ತು ಮೂಲಸೌಕರ್ಯಗಳು ಸುಧಾರಿಸಿರುವುದರಿಂದ ವಿದ್ಯುತ್ ದರದಲ್ಲಿ ಇಳಿಕೆ ಕಂಡುಬಂದಿದೆ ಎಂದು ಕೇಜ್ರಿವಾಲ್ ಹೇಳಿದರು. “ದೆಹಲಿಯು ಭಾರತದಲ್ಲಿ ಅಗ್ಗದ ವಿದ್ಯುತ್ ಪಡೆಯುತ್ತದೆ. ದೆಹಲಿಯ ಜನರಿಗೆ 24 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

Also read: ಇನ್ಮುಂದೆ ರಸ್ತೆ ಗುಂಡಿ ಅಪಘಾತ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ಕೊಡಬೇಕು; ಹೈ ಕೋರ್ಟ್ ಮಹತ್ವದ ತೀರ್ಪು.!!

ಈ ಹಿಂದೆವೂ ಕೂಡ ಕ್ರೇಜಿವಾಲ್ ಬಸ್ಸು ಹಾಗೂ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಘೋಷಣೆ ಮಾಡಿ. ಪ್ರತಿದಿನ ದೆಹಲಿ ಮೆಟ್ರೋದ ಹಾಗೂ ಬಸ್ ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಬಗ್ಗೆ ಹೊಸದಾಗಿ ಸಮೀಕ್ಷೆ ಮಾಡಿಸಿದ್ದರೂ ದೆಹಲಿ ಸರ್ಕಾರ ಮಹಿಳೆಯ ಪ್ರಯಾಣಕ್ಕೆ ಅನುಕೂಲವಾಗಲಿ ಎಂದು ಈ ಯೋಜನೆಯನ್ನು ಹಾಕಿಕೊಂಡಿತ್ತು. ಅದರಂತೆ ರಾಷ್ಟ್ರ ರಾಜಧಾನಿ ಜನರು ರೈಲಿಗಿಂತಲೂ ಹೆಚ್ಚಾಗಿ ಬಸ್ಸುನ್ನು ಬಳಸುತ್ತಾರೆ. ಸುಮಾರು 42 ಲಕ್ಷ ಪ್ರಯಾಣಿಕರು ಬಸ್ಸಿನಲ್ಲಿಯೇ ಸಂಚರಿಸುತ್ತಾರೆ. ಆದರೆ, ಬಸ್ಸಿನಲ್ಲಿ ತೆರಳುವ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.20ಕ್ಕಿಂತ ಹೆಚ್ಚಿರುವುದಿಲ್ಲ ಎಂದು ದೆಹಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದರು.

Also read: ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ; 7 ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು! ವ್ಯೆದ್ಯ ಲೋಕವೇ ಅಚ್ಚರಿ..

ಯುರೋಪಿಯನ್ ರಾಷ್ಟ್ರವಾದ ಲಕ್ಸೆಂಬರ್ಗ್ ನಲ್ಲಿ ಸಾರ್ವಜನಿಕ ಬಸ್ ಬಳಸುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಬಸ್ ದರವನ್ನು ರದ್ದುಪಡಿಸಲು ಚಿಂತನೆ ನಡೆಸಲಾಗಿದೆ. ಫ್ರಾನ್ಸಿನ ಡಾಂಕಿರ್ಕ್ ಮತ್ತು ಇಸ್ತೊನಿಯಾದ ತಾಲ್ಲಿನ್ ಸೇರಿದಂತೆ ಯುರೋಪಿನ ಕೆಲ ನಗರಗಳಲ್ಲಿ ಈಗಾಗಲೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದನ್ನೇ ದೇಹಲಿ ಸರ್ಕಾರ ಕೈಗೊಂಡಿದೆ ಎಂದು ಹೇಳಿತ್ತು ಈಗ ಅಂತಹದೇ ಕೊಡುಗೆಯನ್ನು ನೀಡಿದ್ದು. ಈಗ 200 ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವ ಎಲ್ಲಾ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವುದಾಗಿ ಹೇಳಿದ್ದಾರೆ.