ಈರುಳ್ಳಿ ಬೆಲೆ ಗಗನಕ್ಕೇರಿದೆ, ಆದರೆ ಅದರಿಂದ ರೈತರಿಗೂ ಲಾಭ ಆಗುತ್ತಿಲ್ಲ; ಈರುಳ್ಳಿ ಬೆಲೆ ಏರಿಕೆಯ ನೈಜ ಕಾರಣ ಇಲ್ಲಿದೆ ನೋಡಿ!!

0
163

ಅಡುಗೆ ಮನೆಯಲ್ಲಿ ಮುಖ್ಯವಾಗಿ ಇರಲೇಬೇಕಾದ ಈರುಳ್ಳಿ, ಬಡವರಿಗೆ ಅಷ್ಟೆಅಲ್ಲದೆ ಶ್ರೀಮಂತರ ಕಣ್ಣಲ್ಲಿ ನೀರು ತರಿಸಿ ಸುದ್ದಿಯಲ್ಲಿರುವ ಈರುಳ್ಳಿ ಪ್ರತಿದಿನ ಒಂದೊಂದು ಪ್ರಕರಣವನ್ನು ಹುಟ್ಟಾಕ್ಕಿ ಪ್ರತಿಕೆಯ ಮುಖ್ಯಪುಟದಲ್ಲಿ ಎದ್ದು ಕಾಣುತ್ತಿದೆ. ಬೆಂಗಳೂರಿನಲ್ಲಿ ಒಂದು ಕಿಲೋಗ್ರಾಂಗೆ ಈಗ ಈರುಳ್ಳಿಯ ಬೆಲೆ 200 ರೂ.ಗಳಷ್ಟು ಹೆಚ್ಚಾಗಿದೆ, ಇದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸುತ್ತದೆ. ಅಷ್ಟೇ ಅಲ್ಲದೆ ಆಘಾತಕಾರಿ ಬೆಲೆಯೊಂದಿಗೆ, ದೇಶಾದ್ಯಂತ ವಿಲಕ್ಷಣ ಘಟನೆಗಳು ವರದಿಯಾಗಿವೆ. ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ, ಕಳ್ಳರು ಹಣ ತುಂಬಿದ ಗಲ್ಲೇ ಪೆಟ್ಟಿಗೆ ಬಿಟ್ಟು 50,000 ಮೌಲ್ಯದ ಈರುಳ್ಳಿಯನ್ನು ಕಳ್ಳತನ ಮಾಡಿದ್ದಾರೆ.

Also read: ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಕುಟುಂಬಕ್ಕೆ ಸೇರಿದವಳು, ಹೀಗಾಗಿ ಬೆಲೆ ಏರಿಕೆಯ ಚಿಂತೆಯಿಲ್ಲ; ನಿರ್ಮಲಾ ಸೀತಾರಾಮನ್ ಉತ್ತರಕ್ಕೆ ತಬ್ಬಿಬ್ಬಾದ ಲೋಕಸಭೆ ಕಲಾಪ.!

ಮತ್ತೊಂದು ಘಟನೆ ಎಂದರೆ ಮಹಾರಾಷ್ಟ್ರದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಈರುಳ್ಳಿ ತುಂಬಿದ 22 ಲಕ್ಷ ಮೌಲ್ಯದ ಈರುಳ್ಳಿಯನ್ನು ಸಾರಿಗೆ ಟ್ರಕ್‌ನಿಂದ ಕಳ್ಳತನ ಮಾಡಿದ್ದಾರೆ. ತನಿಖೆಯ ನಂತರ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡರು, ಆದರೆ ಈರುಳ್ಳಿ ಕಾಣೆಯಾಗಿದೆ. ಅದರಂತೆ ವಿಚಿತ್ರವಾದ ರೀತಿಯಲ್ಲಿ, ಬಿಹಾರ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಯೂನಿಯನ್ ಲಿಮಿಟೆಡ್‌ನ ಅಧಿಕಾರಿಗಳು ಈರುಳ್ಳಿಯನ್ನು ಪ್ರತಿ ಕೆಜಿಗೆ ರೂ. 35 ರಂತೆ ಮಾರಾಟ ಮಾಡುವಾಗ ಹೆಲ್ಮೆಟ್ ಧರಿಸಿದ್ದರು. ಹೆಲ್ಮೆಟ್ ಧರಿಸುವುದರ ಹಿಂದಿನ ಕಾರಣ ತಿಳಿದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿ ಕೇಳಿದಾಗ ಮಾರಾಟದ ವೇಳೆ ಮುದ್ರೆ ಮತ್ತು ಕಲ್ಲು ತೂರಾಟದಿಂದ ತಪ್ಪಿಸಲು ಹೆಲ್ಮೆಟ್ ಧರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ಲೋಕಸಭೆಯಲ್ಲಿವು ಕೂಡ ಈರುಳ್ಳಿಗೆ ಸಂಬಂಧಿಸಿ ಹಲವು ವಾದಗಳು ನಡೆದವು.

ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಪೂರೈಕೆ ಇಲ್ಲ

ಇಡೀ ದೇಶದ ಶೇ.45ರಷ್ಟು ಭಾಗಕ್ಕೆ ಭಾರತೀಯ ಆಹಾರದ ಅವಿಭಾಜ್ಯ ಅಂಗವಾಗಿರುವ ಈರುಳ್ಳಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತದೆ. ಈ ಎರಡೂ ರಾಜ್ಯಗಳಲ್ಲಿ ಈರುಳ್ಳಿ ಉತ್ಪಾದನೆ ಕುಂಠಿತವಾದರೆ ಇಡೀ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡುಬರುತ್ತದೆ. ಪ್ರಸ್ತುತ ವರ್ಷ ಮಹಾರಾಷ್ಟ್ರದಲ್ಲಿ ಈರುಳ್ಳಿ ಇಳುವರಿಯಲ್ಲಿ ಭಾರೀ ಇಳಿಕೆ ಕಂಡುಬರಲಿದೆ. ಇಲ್ಲಿಂದಲೇ ದೇಶದ ಶೇ.25ರಷ್ಟು ಈರುಳ್ಳಿ ಪೂರೈಕೆಯಾಗುತ್ತದೆ. ಇನ್ನು ಮಹಾರಾಷ್ಟ್ರದಲ್ಲೇ ಉತ್ಪಾದನೆ ಕುಂಠಿತವಾದರೆ ಸಹಜವಾಗಿ ಇಡೀ ದೇಶಕ್ಕೆ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಈರುಳ್ಳಿ ಬೆಲೆ ಏರಿಕೆ.

ಅಕಾಲಿಕ ಮಳೆಯಿಂದ ರಬಿ ಬೆಳೆಯೂ ಹಾಳು

ಇದಕ್ಕೂ ಮೊದಲು ಮಾರ್ಚ್ ನಿಂದ ಮೇವರೆಗೆ ಬೇಸಿಗೆಯಲ್ಲಿ ಕೂಡ ಅಕಾಲಿಕ ಮಳೆಯಿಂದಾಗಿ ಬೇಸಿಗೆ ಬೆಳೆ ಅಥವಾ ರಬಿ ಕ್ರಾಪ್ ಹಾಳಾಗಿದ್ದರಿಂದ ಈರುಳ್ಳಿ ಪೂರೈಕೆಯಲ್ಲಿ ಕೊರತೆ ಕಂಡುಬಂದಿತ್ತು. ದೇಶದ ಶೇ.50ರಷ್ಟು ಭಾಗ ಈರುಳ್ಳಿಯ ಬೇಸಿಗೆ ಬೆಳೆಯನ್ನು ಅವಲಂಬಿಸಿದೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ಈರುಳ್ಳಿ ಬೆಳೆ ಅಷ್ಟಾಗಿ ಇರುವುದಿಲ್ಲ. ಆದರೆ, ಬೇಸಿಗೆ ಬೆಳೆಯಿಂದಾಗಿ ಅಷ್ಟಾಗಿ ಈರುಳ್ಳಿ ಕೊರತೆ ಕಂಡುಬರುವುದಿಲ್ಲ. ಆದರೆ, ದೇಶದೆಲ್ಲೆಡೆ ಸುರಿದ ಭಾರೀ ಮಳೆಯಿಂದಾಗಿ ಸೆಪ್ಟೆಂಬರ್ ಕೊನೆಗೆ ಬರಬೇಕಿದ್ದ ಈರುಳ್ಳಿ ಬರದಿದ್ದರಿಂದ ಭಾರೀ ಹೊಡೆತ ಬಿದ್ದಿದೆ.

ಸರ್ಕಾರ ತೆಗೆದುಕೊಂಡ ಕ್ರಮವೇನು?

ರಾಷ್ಟ್ರದಲ್ಲಿ ಈರುಳ್ಳಿ ಬೆಲೆಯನ್ನು ತಗ್ಗಿಸಲು ಟರ್ಕಿಯಿಂದ 11,000 ಟನ್ ಪ್ರಧಾನ ತರಕಾರಿಗಳನ್ನು ಆಮದು ಮಾಡಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಡಿಸೆಂಬರ್ 1 ರಂದು ಘೋಷಿಸಿತು. ಮೆಟಲ್ಸ್ ಮತ್ತು ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಂಎಂಟಿಸಿ) ದೇಶೀಯ ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ಏರುತ್ತಿರುವ ಬೆಲೆಗಳನ್ನು ಹೆಚ್ಚಿಸಲು ಈರುಳ್ಳಿಯನ್ನು ಆಮದು ಮಾಡಿಕೊಳ್ಳುವುದು ಇದು ಎರಡನೇ ಬಾರಿ. ಅದರಂತೆ ಸಾರ್ವಜನಿಕ ವಲಯದ ಸಂಸ್ಥೆ ಈಗಾಗಲೇ ಈಜಿಪ್ಟ್‌ನಿಂದ 6,090 ಟನ್ ಆಮದು ಮಾಡಿಕೊಳ್ಳುತ್ತಿದೆ. ಈಜಿಪ್ಟ್‌ನಿಂದ ಈರುಳ್ಳಿ ಡಿಸೆಂಬರ್ ಮಧ್ಯದಲ್ಲಿ ಭಾರತಕ್ಕೆ ಬರಲಿದೆ. ಅದಕ್ಕಾಗಿ ಕಳೆದ ತಿಂಗಳು, ಕೇಂದ್ರ ಸಚಿವ ಸಂಪುಟವು 1.2 ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿತು, ದೇಶೀಯ ಪೂರೈಕೆ ಮತ್ತು ನಿಯಂತ್ರಣ ಬೆಲೆಗಳನ್ನು ಸುಧಾರಿಸಲು ಈಗ ಪ್ರಮುಖ ನಗರಗಳಲ್ಲಿ ಪ್ರತಿ ಕೆಜಿಗೆ 75-120 ರೂ. ರಫ್ತಿಗೆ ಕಡಿವಾಣ ಹಾಕಿದೆ ಮತ್ತು ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಅನಿರ್ದಿಷ್ಟ ಅವಧಿಗೆ ಸ್ಟಾಕ್ ಹೋಲ್ಡಿಂಗ್ ಮಿತಿಯನ್ನು ವಿಧಿಸಿದೆ.

Also read: ಇಡಿ ದೇಶವೇ ಈರುಳ್ಳಿ ಕಣ್ಣಿರಲ್ಲಿ; ಕೆ.ಜಿಗೆ 200 ರೂ. ದಾಟಲಿದೆ ಈರುಳ್ಳಿ, ಬಂಗಾರದ ರೀತಿಯಲ್ಲಿ ಲೋಕಾಯುಕ್ತದಿಂದ ಈರುಳ್ಳಿ ದಾಸ್ತಾನು ಪರಿಶೀಲನೆ.!