ಇಂಗು ಬರಿ ಅಡುಗೆಯ ಸುವಾಸನೆ ಅಷ್ಟೇ ಅಲ್ಲ ಆರೋಗ್ಯವನ್ನು ವೃದ್ಧಿಸುತ್ತದೆ…

0
1519
 • ಆಹಾರದಲ್ಲಿ ಹಿಂಗು ಬಳಸುವುದರಿಂದ ಜೀರ್ಣಶಕ್ತಿ ಹೆಚ್ಚಾಗಿ ಜಠರದಲ್ಲಿ ಗಾಳಿ ತುಂಬಿಕೊಳ್ಳುವುದಿಲ್ಲ.

 • ಎದೆ ಹಾಲು ಉತ್ಪತ್ತಿಯಾಗಲು;
  ಶಿಶು ಜನನದ ನಂತರ ಒಂದು ಟೀ. ಚಮಚ ಲವಂಗ ಕಷಾಯಕ್ಕೆ ಸ್ವಲ್ಪ ಹಿಂಗು ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸುತ್ತಿದ್ದರೆ ಎದೆ ಹಾಲು ಹೆಚ್ಚಾಗುವುದು.

 • ಹಿಂಗಿನ ವಾಸನೆ ಸೇವಿಸುತ್ತಿದ್ದರೆ ಹಿಸ್ಟೀರಿಯಾ ರೋಗ ಉಲ್ಬಣಿಸುವುದಿಲ್ಲ.

 

 • ಹಿಂಗು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸಿ ನಪುಂಸಕತೆಯನ್ನು ನಿವಾರಿಸುತ್ತದೆ.

 • ನಾಯಿಕೆಮ್ಮು, ಉಬ್ಬಸ ಇರುವ ರೋಗಿಗಳಿಗೆ ಒಂದು ಟೀ ಚಮಚ ವೀಳೇದೆಲೆ ರಸ,ಕಾಲು ಟೀ ಚಮಚ ಈರುಳ್ಳಿ ರಸ ಮತ್ತು ಎರಡು ಟೀ ಚಮಚ ಜೇನುತುಪ್ಪದೊಂದಿಗೆ ಸ್ವಲ್ಪ ಹಿಂಗನ್ನು ತೇದು ದಿನಕ್ಕೆ ಮೂರು ಸಲ ಸೇವಿಸಿದರೆ ಗುಣ ಕಂಡುಬರುತ್ತದೆ.

 • ಸಂಧಿವಾತ ಮತ್ತು ಕೀಲುನೋವಿಗೆ:
  • ಸಂಧಿವಾತದಿಂದ ಬಳಲುತ್ತಿದ್ದರೆ ಕೊಬ್ಬರಿ ಎಣ್ಣೆಯಳ್ಳಿ ಹಿಂಗನ್ನು ತೇದು ನೋವಿರುವ ಭಾಗಕ್ಕೆ ಲೇಪಿಸಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಸಂಧಿವಾತ ಮತ್ತು ಕೀಲುನೋವಿಗೆ ಹಸಿ ಶುಂಠಿ,ಬೆಳ್ಳುಳ್ಳಿ ಮತ್ತು ಹಿಂಗು ಇವುಗಳನ್ನು ಜಜ್ಜಿ ಎಳ್ಳೆಣ್ಣೆಯಲ್ಲಿ ಹಾಕಿ , ಎಣ್ಣೆಯನ್ನು ಚೆನ್ನಾಗಿ ಕಾಯಿಸಿ ಶೋಧಿಸಿ ಆ ಎಣ್ಣೆಯಲ್ಲಿ ಮಾಲೀಸು ಮಾಡುವುದರಿಂದ ಶಮನವಾಗುತ್ತದೆ.

 • ಬಾಣಂತಿಯ ಕಿವಿಗಳಲ್ಲಿ ಹಿಂಗನ್ನು ಹತ್ತಿಯಲ್ಲಿ ಸುತ್ತಿ ಇಡುವುದರಿಂದ ಶೀತವಾಗುವ ಭಯವಿರುವುದಿಲ್ಲ.

 • ಮೊಡವೆಗಳು ಮತ್ತು ಬೊಕ್ಕೆಗಳಿಗೆ ಹಿಂಗನ್ನು ನೀರಿನಲ್ಲಿ ತೇದು ಹಚ್ಚಿದ್ದಲ್ಲಿ ಇಂಗಿ ಹೋಗುತ್ತದೆ.

 • ಚೇಳು ಕಡಿತದ ಭಾದೆ ಶಾಂತವಾಗುವುದಕ್ಕೆ ಹಿಂಗನ್ನು ಎಕ್ಕದ ಹಾಲಿನಲ್ಲಿ ತೇದು ಅದಕ್ಕೆ ಅರಿಶಿನ ಬೆರೆಸಿ ಹಚ್ಚಬೇಕು.