ಶೂನ್ಯ ಮಾಸ ಯಾವಾಗ ಬರುತ್ತೆ ಇದು ಬಂದ್ರೆ ನಿಮಗೆಷ್ಟು ಲಾಭ ನಷ್ಟ ಇಲ್ಲಿದೆ ನೋಡಿ..!

0
1826

ಪುಷ್ಯ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ. ಏಕೆಂದರೆ ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫಲಿತಾಂಶ ಶೂನ್ಯವಾಗಿರುತ್ತದೆ ಎಂಬ ನಂಬಿಕೆಯಿದೆ. ಶೂನ್ಯಮಾಸ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳು ಬಂದು ಹೋಗುತ್ತದೆ. ಅದನ್ನು ಆಷಾಢ ಮಾಸವೆಂದು ಸಹ ಕರೆಯುತ್ತಾರೆ. ಆಷಾಢದಿಂದ ಉತ್ತರಾಯಣ ಪುಣ್ಯಕಾಲ ಮುಗಿದು, ದಕ್ಷಿಣಾಯನ ಪುಣ್ಯಕಾಲಕ್ಕೆ ಕಾಲಿಡುತ್ತೇವೆ.

Related image

ಧನುಷಿ ಧನುರಾಕಾರಃ ಮಕರೇ ಕುಂಡಲಾಕೃತೀಃ ಎಂಬ ಉಕ್ಕಿಗನುಸಾರವಾಗಿ ಚಳಿಯಿಂದ ತಪ್ಪಿಸಿಕೊಳ್ಳಲು ಮನುಷ್ಯನು ಬಿಲ್ಲಿನಂತೆ ಬಾಗಿ, ಕೈಕಾಲ ಮುದುಡಿಕೊಂಡಿರಲು ಇಷ್ಟಪಡುತ್ತಾನೆ. ಈ ವಾತಾವರಣದ ಫಲವಾಗಿ ಮಾನವನ `ದೈನಂದಿನ ಕ್ರಿಯೆಗಳಾದ ವಿಸರ್ಜನಾಂಗಗಳ ಪ್ರಕ್ರಿಯೆಯಲ್ಲೂ ವೈಪರೀತ್ಯಗಳು ಕಂಡು ಬರುವುದು ಸಹಜವೆಂದು ವೈದ್ಯವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದನ್ನೇ `ಸಾಮಾಯಿಕ ಬಾಧೆ’ (ಸೀಸನಿಕ್ ಅಲರ್ಜಿ) ಎನ್ನಬಹುದು. ಇದರ ನಿವಾರಣೆಗಾಗಿ ನಮ್ಮ ಪ್ರಾಚೀನರು ಧನುರ್ಮಾಸದಲ್ಲಿ ಅರುಣೋದಯದ ಹೊತ್ತಿಗೆ ಸ್ನಾನಾದಿಗಳು ಮುಗಿದಿರಬೇಕು ಎಂದರು.

Image result for ashada masa

ನಂತರದ ಹೊತ್ತಿಗೆ ಕುಳಿರ್ಗಾಳಿ ಹೆಚ್ಚಾಗಿ ಚರ್ಮವು ಶುಷ್ಕತೆಯನ್ನು ಪಡೆಯುವ ಸಾಧ್ಯತೆ ಹೆಚ್ಚು. ಆದುದರಿಂದ ಆ ಕುಳಿರ್ಗಾಳಿ ಆರಂಭವಾಗುವ ಮುನ್ನ ಸ್ನಾನಾದಿಗಳನ್ನು ಮುಗಿಸಿ ವಸ್ತ್ರದಿಂದ ದೇಹವನ್ನು ಮುಚ್ಚುವ ಯತ್ನವಿದಾಗಿರಬಹುದು. ಈ ಸಮಯದಲ್ಲಿ ಸೇವಿಸುವ ಆಹಾರಗಳಲ್ಲಿ ಮುಖ್ಯವಾದುದು ಹುಗ್ಗಿ. ಇದರ ಸಿದ್ಧತೆಗೆ ಬಳಸುವ ಕಡಲೇಬೀಜ, ಅವರೇಕಾಳು, ಜೀರಿಗೆ, ಮೆಣಸು, ಲವಂಗಗಳು, ದೇಹದಲ್ಲಿ ಆಂತರಿಕವಾಗಿ ಉಷ್ಣತೆಯನ್ನು ಹೆಚ್ಚಿಸುವುದರೊಂದಿಗೆ ನೈಮಿತ್ತಿಕ ಬಾಧೆಗಳನ್ನು ತಡೆಯುತ್ತವೆ. ದೈನಂದಿನ ವಿಸರ್ಜನಾಂಗಗಳ ಕ್ರಿಯೆ ಸಹಜವಾಗಿ ನಡೆಯುವಂತೆ ಮಾಡುತ್ತವೆ. ಹೀಗೆ ಆಹಾರ, ಆಚಾರಗಳೆರಡೂ ನಮ್ಮ ಜೀವನ ಸುಖವಾಗಿ ಇರುವಂತೆ ಮಾಡುವುದಕ್ಕಾಗಿಯೇ ಇರುವ ಧನುರ್ಮಾಸದವೆಂದು ಆಚರಣೆ ಮಾಡಿದರೆ ಎಲ್ಲರಿಗೂ ಒಳಿತಾಗುತ್ತದೆ.