ಅಶ್ವತ್ಥ ಮರದ ಮಹತ್ವ ಎನೆಂದು ಗೊತ್ತಾ ನಿಮಗೆ.

0
1620

ಧಾರ್ಮಿಕ ಪಾವಿತ್ರ್ಯ

ಮಹಾಬೋಧಿ ದೇವಾಲಯ ನಲ್ಲಿ ಬೋಧಿ ಮರ. ಪ್ರತಿಯಾಗಿ ಈ ಸ್ಥಳ ಮೂಲ ಬೋಧಿ ಮರ ಹುಟ್ಟುವ ಇದು ಶ್ರೀ ಮಹಾ ಭೋದಿ, ಹುಟ್ಟುವ. 288 ಬಿಸಿಇ ಒಂದು ವರ್ಷ ಮನುಷ್ಯರು ಹಾಕಿದ ಹಳೆಯ ಮರದ ಎಂದು ನಂಬಲಾಗಿದೆ ಇದು ಅನುರಾಧಪುರ ಶ್ರೀಲಂಕಾ ನಲ್ಲಿ ಬೋಧಿ ಮರ.ಈ ಮರ ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಅನುಯಾಯಿಗಳು ಪವಿತ್ರವೆನಿಸಿದೆ.

ದಾಂಪತ್ಯ ಸುಖ

ಅರಳೀ ಮರದ ಒಳ ತಿರುಳು, ಪತ್ರೆ, ಕಾಯಿ ಮತ್ತು ಬೇರು ಸಮತೂಕ ನೆರಳಲ್ಲಿ ಒಣಗಿಸಿ, ನುಣ್ಣಗೆ ಅರೆದು ವಸ್ತ್ರಗಾಳಿತ ಚೂರ್ಣ ಮಾಡುವುದು. ರಾತ್ರಿ ಮಲಗುವಗ ಸುಮಾರು 5 ಗ್ರಾಂ ಚೂರ್ಣವನ್ನು ಕಾಯಿಸಿದ ಹಸುವಿನ ಹಾಲು ಹಾಗೂ ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಈ ಚೂರ್ಣವು ಶಕ್ತಿದಾಯಕವು ಮತ್ತು ದಾಂಪತ್ಯ ಸುಖವನ್ನು ಕೊಡುವಂತಹುದು ಆಗಿದೆ.

ಮಲೇರಿಯ ಜ್ವರದಲ್ಲಿ

100ಗ್ರಾಂ ಅರಳೀಮರದ ತೊಗಟೆಯನ್ನು ಸುಟ್ಟು ಬೂದಿಯನ್ನು ಒಂದು ಲೀಟರ್ ನೀರನಲ್ಲಿ ಕದಡಿ, ಸ್ವಲ್ಪ ಹೊತ್ತು ಹಾಗೆ ಇಟ್ಟಿರುವುದು. ಅನಂತರ ತಿಳಿಯಾದ ನೀರನ್ನು ಬಸೆದು, ಒಣಮಡಿಕೆಯಲ್ಲಿಡುವುದು. ಮಲೇರಿಯ ಜ್ವರ ಪೀಡಿತರು ಆಗಾಗ ವಾಂತಿ ಮಾಡುತ್ತಿದ್ದರೆ, ಬಿಕ್ಕಳಿಕೆ ಬಾಯಾರಿಕೆಯಿಂದ ಬಹಳ ನಿಶ್ಯಕ್ತರಾದರೆ ಈ ನೀರನ್ನು 5-6 ಟೀ ಚಮಚ ಆಗಾಗ ಕುಡಿಸುತ್ತಿರುವುದು.

ಗಾಯಗಳಿಗೆ

ಎಳೆಯ ಅರಳೀ ಎಲೆಗಳಿಗೆ ಹಸುವಿನ ತುಪ್ಪವನ್ನು ಸವರಿ, ಬಿಸಿ ಮಾಡಿ, ಗಾಯಗಳು ಮಾಗಿ, ಒಡೆಯುವುವು ಮತ್ತು ಕೀವು ಸುರಿದು ಹೋಗಿ ಬಹುಬೇಗನೆ ವಾಸಿಯಾಗುವುವು. ಸುಟ್ಟು ಗಾಯಗಳಿಗೆ ಅರಳೀಮರದ ತೊಗಟೆಯ ನಯವಾದ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಹುಚ್ಚುವುದು. ಅಥಾವ ಅರಳೀ ಮರದ ಎಲೆಗಳನ್ನು ಸುಟ್ಟು ಭಸ್ಮ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಲೇಪಿಸುವುದು.

ನೇತ್ರ ವ್ಯಾಧಿಯಲ್ಲಿ

ಅರಳೀ ಮರದ ಎಲೆಗಳನ್ನು ಮುರಿದಾಗ ಬರುವ ಹಾಲನ್ನು ಕಣ್ಣುಗಳಿಗೆ ಹಾಕುವುದರಿಂದ, ಕಣ್ಣು ನೋವು, ಕಣ್ಣು ಕೆಂಪಾಗಿರುವುದು ವಾಸಿಯಾಗುವುದು.

ಕಾಲಿನ ಹಿಮ್ಮಡಿಗಳು ಒಡೆದಿದ್ದರೆ

ಅರಳೀ ಮರದ ಎಲೆಗಳನ್ನು ಮುರಿದಾಗ ಬರುವ ಹಾಲನ್ನು ಹಿಮ್ಮಡಿಯ ಸೀಳುಗಳಲ್ಲಿ ತುಂಬುವುದು. ಇದರಿಂದ ನೋವು ಶಮನವಾಗಿ, ಹಿಮ್ಮಡಿಯ ಸೀಳುಗಳನ್ನು ಕೂಡಿಕೊಳ್ಳುವುವು.

ಮೂತ್ರವ್ಯಾಧಿಯಲ್ಲಿ

ಅರಳೀ ಮರದ ಒಳತೊಗಟೆಯ ಕಷಾಯ ಮಾಡಿ, ಜೇನು ಸೇರಿಸಿ ಸೇವಿಸುವುದರಿಂದ ಮೂತ್ರತಡೆ, ಉರಿ, ಅರಿಶಿಣ ವರ್ಣದ ಮೂತ್ರವು ವಾಸಿಯಾಗುವುದು.

ಮೂಲವ್ಯಾಧಿಯಲ್ಲಿ

ಅರಳೀ ಮರದ ತೊಗಟೆಯ ನಯವಾದ ಚೂರ್ಣವನ್ನು ಪನ್ನೀರಿನಲ್ಲಿ ಕಲಿಸಿ ಮೂಲದ ಮೊಳೆಗಳಿಗೆ ಹಚ್ಚುವುದು.

ಹಿಸ್ಟೀರಿಯ(ಸ್ತ್ರೀಯರ ಅಪಸ್ಮಾರ)

ಚೆನ್ನಾಗಿ ಪಕ್ವವಾದ 250 ಗ್ರಾಂ ಅರಳೀಮರದ ಕಾಯಿಗಳನ್ನು ತಂದು, ನೆರಳಲ್ಲಿ ಒಣಗಿಸಿ, ನಯವಾದ ಚೂರ್ಣ ಮಾಡಿಟ್ಟುಕೊಳ್ಳುವುದು, 40 ಗ್ರಾಂ ಚೂರ್ಣಕ್ಕೆ ಜಾಯಿಪತ್ರೆ, ಜಟಮಾಂಷಿ 20 ಗ್ರಾಂ ಸೇರಿಸಿ, ಕಲ್ಪತ್ತಿನಲ್ಲಿ ಹಾಕಿ, ನೀರನ್ನು ಚುಮುಕಿಸಿ, ನಯವಾಗಿ ಅರೆಯುವುದು, ಇದಕ್ಕೆ 20 ಗ್ರಾಂ ಉತ್ತಮವಾದ ಕಸ್ತೂರಿಯನ್ನು ಸೇರಿಸಿ ಮತ್ತೊಮ್ಮೆ ನಯವಾಗಿ ಅರೆದು, ಗುಲಗಂಜಿ ಗಾತ್ರದ ಮಾತ್ರೆಗಳನ್ನು ಮಾಡಿ, ನೆರಳಲ್ಲಿ ಒಣಗಿಸಿ ಶೇಖರಿಸುವುದು. ಅಪಸ್ಮಾರದಿಂದ ನರಳುವ ಸ್ತ್ರೀಯರಿಗೆ 2ರಿಂದ 3 ಮಾತ್ರೆಗಳನ್ನು ನೀರಿನೊಂದಿಗೆ ಕೊಡುವುದು, ಒಂದು ತಾಸು ಆದ ನಂತರ ಕಾದಾರಿದ ಹಸುವಿನ ಹಾಲನ್ನು ಕುಡಿಸುವುದು.

ಅತಿಯಾದ ಜ್ವರ ಮತ್ತು ಬಿಕ್ಕಳಿಕೆ

ಅರಳೀಮರದ ಚೆಕ್ಕೆಯನ್ನು ಹೊತ್ತಿಸಿ, ಉರಿಯುತ್ತಿರುವ ಕೊಳ್ಳಿಯನ್ನು ತಣ್ಣಿರಿನಲ್ಲಿ ಅದ್ದುವುದು ನೀರು ತಣ್ಣಗಾದ ಮೇಲೆ ಬಟ್ಟೆಯಲ್ಲಿ ಸೋಸಿ, ಎರಡೆರಡು ಟೀ ಚಮಚ ಕುಡಿಸುವುವುದು, ಬರೇ ಬಿಕ್ಕಳಿಕೆಯಲ್ಲಿ ಸಹ ಈ ರೀತಿಯ ಔಷಧಿಯನ್ನು ಉಪಯೊಗಿಸಬಹುದು. ಬೆಂಕಿ, ಎಣ್ಣೆ ಮತ್ತು ನೀರುಗಳಿಂದಾದ ಸುಟ್ಟ ಗಾಯಗಳಿಗೆ ಅರಳೀ ಮರದ ತೊಗಟೆಯ ನಯವಾದ ಚೂರ್ಣವನ್ನು ಗಾಯಗಳ ಮೇಲೆ ಸಿಂಪಡಿಸುವುದು.