ಅಷ್ಟಲಕ್ಷ್ಮೀ ಸ್ವರೂಪ

0
1407

ಲಕ್ಷ್ಮೀ ದೇವಿಯು 100 ರೂಪಗಳಲ್ಲಿ ಸ್ಥಿತಳಾಗಿದ್ದಾಳೆ, ಇವಳ ಎಂಟು ಪ್ರಧಾನ ರೂಪಗಳು ‘ಅಷ್ಟಲಕ್ಷ್ಮೀ’ ಎಂದೇ ಪ್ರಸಿದ್ದವಾಗಿವೆ. ಲಕ್ಷ್ಮೀದೇವಿಯ ಚೈತನ್ಯ ವಿಶ್ವದಲ್ಲಿ ಅಧಿಕವಾಗಿರುವುದರಿಂದ ದಿನ ಲಕ್ಷ್ಮೀ ಪೂಜೆ ನಡೆಸಿದರೆ ಪೂರ್ಣ ಫಲ ದೊರೆಯುತ್ತದೆ ಎಂಬುದೊಂದು ಜನಶ್ರುತಿ, ಲಕ್ಷ್ಮೀ ಪಂಚಾಯತನ ಪೂಜೆ- ಅಂದರೆ, ವಿಷ್ಣು (ಆನಂದದ ಅಧಿಪತಿ), ಕುಬೇರ (ಸಂಪತ್ತಿನ ಅಧಿಪತಿ), ಗಜೇಂದ್ರ (ಸಂಪತ್ತಿನ ವಾಹನ) ಹಾಗೂ ಲಕ್ಷ್ಮೀದೇವಿ (ಸರ್ವಶಕ್ತಿ, ಸ್ವರೂಪಿಣಿ) ಹೀಗೆ ಪಂಚದೈವಗಳ ಪೂಜೆಯನ್ನು ಸಂದರ್ಭದಲ್ಲಿ ನೆರೆವೇರಿಸುತ್ತಾರೆ.

1).ಅದಲಕ್ಷ್ಮೀ – ಈಕೆ ಕ್ಷೀರಸಾಗರ ಸಂಭೂತೆ..

2).ಧಾನ್ಯಲಕ್ಷ್ಮೀ – ಆಹಾರ, ಧಾನ್ಯಗಳ ಸಂಪತ್ತಿಗೆ ಒಡತಿ.

3).ಧೈರ್ಯಲಕ್ಷ್ಮೀ – ಸಂಕಟಗಳ ಸರಮಾಲೆಯಿದ್ದರೂ ಧರ್ಯ, ಆತ್ಮಸ್ಥೈರ್ಯ ನೀಡಿ ಕಾಪಾಡುವಳು.

4).ಗಜಲಕ್ಷ್ಮೀ – ಎಂಟು ದಳಗಳ ಕಮಲದ ಮೇಲೆ ಮಿಂತಿರುವ, ಪಕ್ಕದಲ್ಲಿ ಎರಡು ಗಜಗಳಿಂದ ಶೋಭಿತಳಾದವಳು.

5)ಸಂತಾನಲಕ್ಷ್ಮೀ – ದಾಂಪತ್ಯ, ಸಂತುಷ್ಟಿ ಹಾಗೂ ಸಂತಾನಕಾರಕಗಳು.

6).ವಿಜಯಲಕ್ಷ್ಮೀ – ಯಶಸ್ಸು, ಜಯ ದಯಪಾಲಿಸುವವಳು.

7).ವಿದ್ಯಾಲಕ್ಷ್ಮೀ – ವಿದ್ಯೆ, ಜ್ಞಾನ ನೀಡಿ ಬೆಳಗುವವಳು.

8).ಧನಲಕ್ಷ್ಮೀ – ಧನ. ಚಿನ್ನ, ಕೀರ್ತಿ ಮುಂತಾದ ಆಷ್ಟೈಶ್ವರ್ಯಗಳನ್ನು ನೀಡುವವಳು.

lakshmi-pooje2
source: pinterest.com

ಮಹಾಲಕ್ಷ್ಮೀಯು ಚರಾಚರಗಳಲ್ಲಿ ನೆಲೆನಿಂತ ಪರಮ ಮಂಗಲ ದೇವಿಯಾಗಿದ್ದಾಳೆ. ಶ್ರೀಮನ್ಮಹಾವಿಷ್ಣುವು ಯಾವುದೇ ಜೀವಕ್ಕೆ ಮೋಕ್ಷವನ್ನು ಕರುಣಿಸಬೇಕಾದರೂ ಲಕ್ಷ್ಮೀಯ ಒಪ್ಪಿಗೆ ಅಗತ್ಯವೆಂಬುದು ಸಾರ್ವತ್ರಿಕ ನಂಬಿಕೆ, ‘ಲಕ್ಷ್ಮೀ’ ಪದದ ಉತ್ಪತ್ತಿ ‘ಲಕ್ಷ್’ನಿಂದ ಆಗಿದೆ. ಲಕ್ಷ್ಮೀ ಐಶ್ವರ್ಯದ ಅಧಿದೇವತೆ ಮಾತ್ರವಲ್ಲ. ನಮ್ಮ ಜೀವನದ ಲೌಕಿಕ, ಪಾರಮಾರ್ಥಿಕ ಗುರಿ ಸಾಧನೆಗೂ ಈಕೆಯ ಕೃಪೆ ಅತ್ಯಗತ್ಯವಾಗಿದೆ.