ಈ ಆಯುರ್ವೇದ ವೈದ್ಯರನ್ನೊಮ್ಮೆ ಭೇಟಿ ಮಾಡಿ, ನಿಮಗಿರುವ ಆಸ್ಥಮ ಖಂಡಿತಾ ದೂರವಾಗುತ್ತೆ!!

0
2040

ದೂರವಾದ ಅಸ್ತಮ; ಧನ್ಯವಾದ ಆಯುರ್ವೇದ

ಕೆಲವೊಮ್ಮೆ ಹಳೆಯ ರದ್ದಿ ಪತ್ರಿಕೆಗಳು ಬದುಕನ್ನು ಪುನಃ ಬಂಗಾರವಾಗಿಸಬಹುದು.ಹೌದು ನನಗೂ ಹಾಗೆ ಆಯಿತು.ನಾನು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಬಸವರಾಜ, ಈಗೆರಡು ವರ್ಷಗಳಿಂದ ಅಸ್ತಮಾ ರೋಗದಿಂದ ಪಾರಾದ ಭಾಗ್ಯವಂತ.

ಕಳೆದ 10 ವರ್ಷಗಳ ಹಿಂದೆ ನನಗೆ ಕೇವಲ ಪದೇ ಪದೇ ತಂಡಿ ನೆಗಡಿಯಾಗುವುದು,ಆಗಾಗ ಕೆಮ್ಮು,ಕಫದ ತೊಂದರೆಯಾಗುವುದು ಆಗುತ್ತಿತ್ತು.ಸ್ಥಳೀಯ ವೈದ್ಯರಲ್ಲಿ ತೋರಿಸಿ ಐದತ್ತುದಿನದ ಚಿಕಿತ್ಸೆಯಿಂದ ಸಮಸ್ಯೆ ಸುಧಾರಿಸಿದರೂ ಮತ್ತೆಮತ್ತೆ ತೊಂದರೆ ಮರುಕಳಿಸುತ್ತಿತ್ತು.

ಆದರೆ ಎರಡು ವರ್ಷಗಳಲ್ಲಿ ಅದು ನಿಧಾನವಾಗಿ ಉಬ್ಬಸ ಅಸ್ತಮಾದ ಕಡೆಗೆ ತಿರುಗಿತು.ನನಗೆ ತಿಳಿದ ಮನೆಮದ್ದುಗಳು,ಹೋಮಿಯೋಪತಿ, ಇಂಗ್ಲಿಷ್, ಆಯುರ್ವೇದ ಎಲ್ಲಾ ತರಹದ ಚಿಕಿತ್ಸೆಗಳು, ತಿಂಗಳಿಗೊಂದೆರಡು ಬಾರಿ ಆಸ್ಪತ್ರೆ ಸೇರುವುದು, ನೆಬಿಲೈಸಿಂಗ್ ಮಾಡಿಸುವುದು, ಇದು ಒಂದು ರೀತಿಯಲ್ಲಿ ಜೀವನವೇ ಸಾಕೆನ್ನುವಷ್ಟುರ ಮಟ್ಟಿಗೆ ಕಾಡಲಾರಂಭಿಸಿತು.

ಹಾಗಿರಲು ಒಂದು ದಿನ ಸಂಜೆ ನಾನು ಮನೆಗೆ ಬರುತ್ತಿದ್ದಂತೇ ನನ್ನ ಹೆಂಡತಿ ಹಳೆಯ ಉದಯವಾಣಿ ಪತ್ರಿಕೆಯಲ್ಲಿ ಬಂದಿದ್ದ ಒಂದು ಲೇಖನ, ಅದರಲ್ಲಿ ತಿಳಿಸಿದ ಅಸ್ತಮಾ ವೈದ್ಯ ಡಾ.ಡಿ.ಎಸ್ ಭಟ್ಟರ ವಿವರಗಳನ್ನು ತೋರಿಸಿ,ಕಂಡು ಕೇಳರಿಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆಯ ಭಟ್ಟರನ್ನು ಭೇಟಿಯಾಗಲು ಒತ್ತಾಯಿಸಿದಳು. ನನಗಾದರೋ ಈ ಹಿಂದೆ ಮಾಡಿದ ಹಲವು ಚಿಕಿತ್ಸೆಗಳ ಅನುಭವದಿಂದಾಗಿ ಅದೇನೋ ತೀರಾ ಆಸಕ್ತಿದಾಯಕ ವಿಷಯವಾಗಿ ಕಾಣಲಿಲ್ಲ.

ಆದರೆ ಮನೆಯವರ ತಡೆಯಿರದ ಒತ್ತಡಕ್ಕೆ ಮಣಿದು ಇರ್ದೆ ಡಾಕ್ಟರಲ್ಲಿಗೆ ಹೋಗಲು ತೀರ್ಮಾನಿಸಿದೆ.2015 ಸೆಪ್ಟೆಂಬರ್ ತಿಂಗಳಲ್ಲಿ ಪುತ್ತೂರು ಇರ್ದೆಯ ಡಾಕ್ಟರನ್ನರಸುತ್ತಾ ಪುತ್ತೂರಿಗೆ ಹೋಗಿ ಅಲ್ಲಿಂದ ಪಾಣಾಜೆ ಖಾಸಗಿ ಬಸ್ಸಿನಲ್ಲಿ ಸುಮಾರು ಅರ್ಧ ಗಂಟೆ ಪಯಣದ ಇರ್ದೆ ಹಾಲಿನ ಸೊಸೈಟಿ ಬಳಿ ಡಾ.ಡಿ.ಎಸ್. ಭಟ್ಟರ ಎಸ್.ಎಸ್.ಫಾರ್ಮಸಿ ಚಿಕಿತ್ಸಾಲಯಕ್ಕೆ ಮಧ್ಯಾಹ್ನ 3ಗಂಟೆಗೆ ತಲುಪಿದೆ.ಆರೇಳು ಜನ ಹೊರಗಡೆ ಕಾಯುತ್ತಿದ್ದರು.ಡಾಕ್ಟರ್ ಯಾರೋ ರೋಗಿಗಳೊಡನೆ ಸಮಾಲೋಚನೆಯಲ್ಲಿ ನಿರತರಾಗಿದ್ದರು.ಸುಮಾರು ಮುಕ್ಕಾಲು ಗಂಟೆ ಕಾದರೂ ಒಳಗಿದ್ದವರು ಹೊರ ಬರಲೇ ಇಲ್ಲ.

ನಾನು ಅಲ್ಲಿದ್ದ ಬೇರೆ ಬೇರೆ ರೋಗಿಗಳನ್ನು ಮಾತನಾಡಿಸಿದರೆ ಅವರ್ಯಾರೂ ಅಸ್ತಮಾ ರೋಗಿಗಳಲ್ಲ,ಮೂಲವ್ಯಾಧಿ,ಕಿಡ್ನಿ ವೈಫಲ್ಯ,ಕಿಡ್ನಿಸ್ಟೋನ್,ಪ್ರಾಸ್ಟೇಟ್,ಮಧುಮೇಹ ಹೀಗೆ ಹಲವು.ಹಾಗಾದರೆ ಇವರು ಅಸ್ತಮಾ ತಜ್ಞರಲ್ಲವೇ ಎಂದು ಕೇಳಿದ್ರೆ, ಅವರು ಡಾಕ್ಟರ್ ಡಿ.ಎಸ್.ಭಟ್ಟರ ಮಗ ಗವ್ಯಸಿದ್ಧ ಡಾ.ಶಶಿಶೇಖರ ಭಟ್ಟರು. ಪಂಚಗವ್ಯದಲ್ಲಿ ಎಂ.ಡಿ. ಮಾಡಿದ್ದಾರೆ.ಹೆಚ್ಚಿನ ಎಲ್ಲಾ ಗಂಭೀರ ಕಾಯಿಲೆಗಳನ್ನು ನೋಡುತ್ತಾರೆ ಆದರೆ ಬಹಳ ನಿಧಾನ ಎಂಬ ಉತ್ತರ.

ಕೊನೆಗೆ ನನ್ನ ಸರದಿ ಬಂದಾಗ ಸಂಜೆ 6.30 ಗಂಟೆ.ಅಲ್ಲಿ ಬಂದವರೆಲ್ಲರೂ ಎಪಾಯಿಂಟ್ಮೆಂಟ್ ಪಡೆದವರು. ನಾನು ಹುಡುಕಿ ಬಂದವನು. ಡಾ||ಶಶಿಶೇಖರ ಭಟ್ಟರಲ್ಲಿ ನನ್ನ ತೊಂದರೆಗಳನ್ನೆಲ್ಲಾ ವಿವರಿಸಿದೆ. ಡಾಕ್ಟರ್ ನಾಡಿ ಪರೀಕ್ಷೆ ಮಾಡಿ ನನ್ನಲ್ಲಿ ಬೇರೆ ಬೇರೆ ಪ್ರಶ್ನೆ ಕೇಳಿದರು.ನಾಡಿಯ ಮೂಲಕವೇ ನನ್ನ ಸ್ವಭಾವವನ್ನು ಕರಾರುವಾಕ್ಕಾಗಿ ಹೇಳಿದರಲ್ಲದೇ ಮೈಯಲ್ಲಿ ತುರಿಕೆ, ಕಡಿತ ಇದೆಯಾ ಎಂದು ಪ್ರಶ್ನಿಸಿದರು.ಕೊನೆಗೆ ಸುಮಾರು ಒಂದು ಗಂಟೆಗಳ ಕಾಲ ಅಸ್ತಮಾ ಬಂದಿದ್ದು ಹೇಗೆ? ಅದರ ಚಿಕಿತ್ಸೆ, ಮುಂದೆ ಅದು ಪುನಃ ಬಾರದಿರಲು ಜೀವನ ಶೈಲಿ ಹೇಗಿರಬೇಕು ಎಂಬುದಾಗಿ ಸವಿಸ್ತಾರವಾಗಿ ಪಾಠ ಮಾಡಿದರು.ಮತ್ತು ಸುಮಾರು ಮೂರರಿಂದ ಆರು ತಿಂಗಳ ಚಿಕಿತ್ಸೆ ಬೇಕು, ಫೋಲೋ ಅಪ್ ಚಿಕಿತ್ಸೆಗೆ ಕೊರಿಯರ್ ಮೂಲಕ ಕಳಿಸಬಹುದು ಎಂದು ಹೇಳಿದರು. ಪೂರ್ತಿ ವಾಸಿಯಾಗಿ ಒಂದುವರೆ ತಿಂಗಳು ಚಿಕಿತ್ಸೆ ಮುಂದುವರಿಸಲೇಬೇಕೆಂದು ಕಡ್ಡಾಯವಾಗಿ ತಿಳಿಸಿದರು.
ಡಾಕ್ಟರ ಸಲಹೆಯಂತೆ 2ತಿಂಗಳ ಔಷಧಿ ಪಡೆದು ಊರಿಗೆ ಬಂದೆ. ಯಥಾವತ್ತಾಗಿ ನಿಯಮಗಳನ್ನು ಪಾಲಿಸಿದೆ ಹೆಚ್ಚಿನ ಪಥ್ಯಗಳೇನು ಇರಲಿಲ್ಲ.ಶುರುವಿನ ಒಂದುವರೆ ತಿಂಗಳು ಡಾಕ್ಟರ್ ಮೊದಲೇ ತಿಳಿಸಿದಂತೆ ಸ್ವಲ್ಪ ಅಸ್ತಮಾದ ತೊಂದರೆ ಹೆಚ್ಚಾಯಿತು, ಕ್ರಮೇಣ 3 ತಿಂಗಳಲ್ಲಿ ಎಲ್ಲಾ ಇಂಗ್ಲಿಷ್ ಔಷಧಿಗಳನ್ನು ಬಿಟ್ಟೆ.ನಾಲ್ಕು ತಿಂಗಳಲ್ಲಿ ಅಸ್ತಮಾದ ಯಾವ ಕುರುಹುಗಳು ಇಲ್ಲದಂತಾಯಿತು ನಂತರದ ಒಂದುವರೆ ತಿಂಗಳು ಔಷಧಿ ಮಾಡಿದೆ.

ಈಗ ಕಳೆದೆರಡು ವರ್ಷಗಳಿಂದ ಯಾವ ರೀತಿಯ ಉಸಿರಾಟದ ತೊಂದರೆಯೂ ಇಲ್ಲ. ಈ ವರ್ಷದ ವಿಪರೀತ ಮಳೆಗೂ ನಾನು ಸೋತಿಲ್ಲ. ನಿಜ ಆ ಹಳೆ ಪತ್ರಿಕೆ ನನ್ನ ಬದುಕು ಹಸನು ಮಾಡಿತು.

ಇಂತಿ- ಬಸವರಾಜ,ಕಡೂರು
ಡಾಕ್ಟರ್ ವಿಳಾಸ:-ಡಾ.ಶಶಿಶೇಖರ ಭಟ್, ಎಸ್.ಎಸ್.ಫಾರ್ಮ, ಇರ್ದೆ ಹಾಲು ಉತ್ಪಾದಕರ ಸಂಘದ ಸಮೀಪ, ಇರ್ದೆ ಗ್ರಾಮ, ಪಾಣಾಜೆ ರಸ್ತೆ,ಪುತ್ತೂರು-574259, ದಕ್ಷಿಣ ಕನ್ನಡ ಜಿಲ್ಲೆ.
ಡಾಕ್ಟರ್ ಮೊಬೈಲ್ ನಂ:9448239525 (ರಾತ್ರಿ 7PMಯಿಂದ10PM ಮಧ್ಯೆ ಕರೆಮಾಡಬಹುದು)
ಡಾಕ್ಟರ್ ಕ್ಲಿನಿಕ್ ನಂ:9448960385 (ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯೊಳಗೆ ಕರೆಮಾಡಿ) (ಮೊದಲೇ ಅಪಾಯಿಂಟ್ಮೆಂಟ್ ಪಡೆಯದಿದ್ದರೆ ತುಂಬಾ ಕಾಯಬೇಕಾದೀತು).

TheNewsism.com advises it’s readers to consider the medical risks when considering alternative medicine. TheNewsism doesn’t own the responsibility of any medical negligence hereinafter.. TheNewsism.com also clearly states that this is a paid endorsement and TheNewsism.com would neither endorse nor have independently verified the claims on the above piece.