ನಿಮ್ಮ ಮಕ್ಕಳಿಗೆ ಆಸ್ತಮಾ ಮತ್ತು ಮೂಗಿನ ಅಲರ್ಜಿ ಸಮಸ್ಯೆಗಳನ್ನು ತಡೆಯಲು ಕೆಳಗಿನ ನಿಯಮಗಳನ್ನು ಪಾಲಿಸಿ!!

0
1125

Kannada News | Health tips in kannada

ನಿಮ್ಮ ಮಕ್ಕಳಿಗೆ ಆಸ್ತಮಾ ಮತ್ತು ಮೂಗಿನ ಅಲರ್ಜಿ ಸಮಸ್ಯೆಗಳನ್ನು ತಡೆಯಲು ಕೆಳಗಿನ ನಿಯಮಗಳನ್ನು ಪಾಲಿಸಿ

1. ಅಲರ್ಜಿ ಮದ್ದುಗಳನ್ನ ಮತ್ತು ಇನ್ಫ್ಲುಯೆಂಜಾ ಚುಚ್ಚುಮದ್ದು ಡಾಕ್ಟರರ ಸಲಹೆಯಂತೆ ತೆಗೆದುಕೊಳ್ಳಿ.

2. ಮಕ್ಕಳು ಮನೆಯೊಳಗೇ ನೆಲೆಸಲಿ, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿರಿ.

3. ಮಕ್ಕಳ ಕೋಣೆ ಗಳನ್ನು ಧೂಳು ರಹಿತ ಗೊಳಿಸಿ.

4. ಕರ್ಟನ್ ಗಳು, ಕಾರ್ಪೆಟ್ಗಳು, ಪ್ರಾಣಿಜನ್ಯ ವಸ್ತುಗಳನ್ನು ಬಳಸಿ ತಯಾರಿಸಿದ ದಿಂಬು ಮತ್ತು ಹೊದಿಕೆಗಳನ್ನು ಬಳಸದಿರಿ.

5. ಹೊದಿಕೆಗಳು, ಕರ್ಟನ್ ಗಳು ಮತ್ತು ಮಕ್ಕಳ ಬಟ್ಟೆಗಳಲ್ಲಿರುವ ಧೂಳಿನಲ್ಲಿರುವ ಕ್ರಿಮಿ ಗಳನ್ನು ನಾಶಪಡಿಸಲು ಬಿಸಿ ನೀರಿನಲ್ಲಿ ಒಗೆಯಿರಿ.

6. ಬೈಕ್ ನಲ್ಲಿ ಪ್ರಯಾಣಿಸುವಾಗ ಮಾಸ್ಕ್ ಬಳಸಿರಿ ಮತ್ತು ಕಾರು, ಬಸ್ ನಲ್ಲಿ ಪ್ರಯಾಣಿಸುವಾಗ ಕಿಟಕಿ ಮುಚ್ಚಿರಲಿ.

7. ಒಗೆದ ಬಟ್ಟೆಗಳನ್ನು ಒಣಗಿಸಲು ಬಟ್ಟೆ ಒಣಗಿಸುವ ಮಷೀನ್ ಬಳಸಿ ಇಲ್ಲವೇ ಮನೆಯ ಒಳಗೆ ಬಟ್ಟೆಗಳನ್ನು ಒಣಗಿಸಿ.

8. ಮನೆಯಲ್ಲಿ ಮತ್ತು ಕೋಣೆಗಳಲ್ಲಿ ತೇವಾಂಶವಿದ್ದರೆ ಡಿಹೂಮಿಡಿಫೈರ್ ಯಂತ್ರ ಬಳಸಿ, ನಿಯಮಿತವಾಗಿ ಯಂತ್ರವನ್ನು ಸ್ವಚ್ಛಗೊಳಿಸಲು ಮರೆಯದಿರಿ.

9. ವಾತಾವರಣದಲ್ಲಿ ಪರಾಗ (ಪುಷ್ಪ ರೇಣು)ದಟ್ಟವಾಗಿರುವ ವಸಂತ ಋತು ಮತ್ತು ಮಳೆಗಾಲದಲ್ಲಿ ಮಕ್ಕಳು ಮನೆಯ ಹೊರಗೆ ಆಟವಾಡುವಾಗ ಮಾಸ್ಕ್ ಧರಿಸಲಿ.

watch :

10. ಋತುಗಳಲ್ಲಿ ಅಲರ್ಜಿಯಿರುವವರು ಒಂದೆರಡು ವಾರ ಮುಂಚಿತವಾಗಿ ಅಲರ್ಜಿ ನಿರೋಧಕ ಮದ್ದುಗಳನ್ನ ತೆಗೆದುಕೊಳ್ಳಲು ಶುರುಮಾಡಿ.

11. ಮನೆಯ ಒಳಗೆ ಅಗರಬತ್ತಿ, ಸಾಂಬ್ರಾಣಿ ಬಳಸದಿರಿ, ಅಡುಗೆ ಮನೆ ಒಗ್ಗರಣೆ ಮತ್ತು ಸ್ನಾನದ ಮನೆಯಲ್ಲಿ ಹೋಗೆ ನಿಯಂತ್ರಿಸಲು ಎಕ್ಸಾಸ್ಟ್ ಫ್ಯಾನ್ ಬಳಸಿ. ಸ್ನಾನಕ್ಕೆ ನೀರು ಕಾಯಿಸಲು ಸೋಲಾರ್ ಯಂತ್ರಗಳನ್ನು ಬಳಸಿ.

12. ಕೊನೆಯದಾಗಿ ಅಲರ್ಜಿ ತಡೆಯುವುದು ಚಿಕಿತ್ಸೆಗಿಂತ ಸುಲಭ ಮತ್ತು ಪರಿಣಾಮಕಾರಿ.

Author :-

Tips-For-Asthma-Kids
Dr Mohan
M.D., DCH, MRCPI (Ireland)

Also read: ತುಳಸಿ ನೀರಿನಲ್ಲಿರುವ ಔಷಧೀಯ ಅಂಶ ಹಲವಾರು ರೋಗ ರುಜಿನಗಳನ್ನು ದೂರಮಾಡುತ್ತದೆ !! ಇದೆ ಕಾರಣಕ್ಕೆ ನಮ್ಮ ಹಿರಿಯರು ನಿತ್ಯ ತುಳಸಿ ತೀರ್ಥವನ್ನು ಸೇವಿಸುತಿದ್ದಿದ್ದು!!