ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಲಗ್ನ ಭಾವದಲ್ಲಿ ಗ್ರಹಗಳ ಫಲ!!

0
2301

ಜನ್ಮ ಕುಂಡಲಿಯಲ್ಲಿ ನಿಮಗೆ ತಿಳಿದಿರುವಾಗೆ ಮೇಷದಿಂದ ಮೀನ ರಾಶಿಯವರೆಗೆ 12 ಮನೆಗಳು ಇರುತ್ತದೆ.ಮನೆಯನ್ನೇ ಭಾವಗಳೆಂದು ಕರೆಯುತ್ತಾರೆ. ಕುಂಡಲಿಯಲ್ಲಿ ‘ ಲಗ್ನ ‘ ಎಂದು ಗುರುತಿಸಿರುತ್ತಾರೆ.

ಲಗ್ನವೇ ಜಾತುಕನ ಮೊದಲನೆಯ ಭಾವ ಅದನ್ನು ತನು ಭಾವವೆಂದು ಕರೆಯುತ್ತಾರೆ.
ಲಗ್ನದಿಂದ ಜಾತುಕನ ಸ್ವಭಾವ, ಶರೀರ, ಸುಖ, ಆರೋಗ್ಯ, ಗುಣಧರ್ಮಗಳನ್ನು ತಿಳಿಯ ಬಹುದು.ಲಗ್ನದಲ್ಲಿ ಯಾವ ಗ್ರಹಗಳು ಇದ್ದರೆ ಏನು ಫಲ ಎನ್ನುವುದು ತಿಳಿಯೋಣ.

ಲಗ್ನದಲ್ಲಿ ರವಿ ಇದ್ದರೆ ಶರೀರವು ಬಲಿಷ್ಠವಾಗಿರುತ್ತದೆ, ಧೈರ್ಯವಂತನು, ಬುದ್ದಿವಂತ, ಕಾರ್ಯದಲ್ಲಿ ನೈಪುಣ್ಯತೆ, ರಾಜನಂತೆ ವರ್ತನೆ, ತೀಕ್ಷ್ಣಸ್ವಭಾವ, ಅಧಿಕಾರನಾಗುವರು, ಸಹನೆ, ದಯೆ ಇಲ್ಲದಿರುವರು.

ಗ್ನದಲ್ಲಿ ಚಂದ್ರ ಇದ್ದರೆ ಸುಂದರ ಮುಖ, ಆಕರ್ಷಣ ಶಕ್ತಿ, ಒಳ್ಳೆಯ ಮನಸ್ಸು, ಎಲ್ಲರನ್ನು ತಾಯಿಯಂತೆ ನೋಡಿಕೊಳ್ಳುವರು, ಹೆಚ್ಚು ಯೋಚಿಸುವರು.

ಲಗ್ನದಲ್ಲಿ ಕುಜ ಇದ್ದರೆ ದಷ್ಟಪುಷ್ಟ ಶರೀರ, ರಕ್ತದಂತೆ ದೇಹಕಾಂತಿ, ಎಲ್ಲರನ್ನು ಗೌರವಿಸುವ ರಕ್ಷಿಸುವ ಸ್ವಭಾವ, ನಿತ್ಯ ಯೌವನ.

ಲಗ್ನದಲ್ಲಿ ಬುಧ ಇದ್ದರೆ ಬಹಳ ಸುಂದರ, ಬುದ್ಧಿವಂತರು, ಮೃದು ಶರೀರ, ಮಿತ ಭಾಷೆ, ವ್ಯಾಪರದಲ್ಲಿ ಆಸಕ್ತಿ, ಸಂಕೋಚ ಪ್ರವೃತ್ತಿ.

ಲಗ್ನದಲ್ಲಿ ಗುರು ಇದ್ದರೆ ಆರೋಗ್ಯ ವಂತರು, ಹೆಚ್ಚು ಜ್ಞಾನ, ಧಾರ್ಮಿಕತೆಯಲ್ಲಿ ಆಸಕ್ತಿ, ಅಗಲವಾದ ದೇಹ, ಎಲ್ಲರನ್ನು ಗೌರವ ಮರ್ಯಾದೆಯಿಂದ ಮಾತಾಡುವುದು, ಸಾತ್ವಿಕ ಗುಣದವರು.

ಲಗ್ನದಲ್ಲಿ ಶುಕ್ರ ಇದ್ದರೆ ಅತ್ಯಂತ ಸುಂದರವಾದ ಮುಖ ದೇಹ, ಸುಖಕರ ಜೀವನ, ಶ್ರೀಮಂತ, ಕಲೆಯಲ್ಲಿ ಆಸಕ್ತಿ, ಸ್ತ್ರೀಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿಸುವುದು.

ಲಗ್ನದಲ್ಲಿ ಶನಿ ಇದ್ದರೆ ಕೃಶವಾದ ದೇಹ,
ಶಿಸ್ತಿನ ಸಿಪಾಯಿ, ದಯೆ ಕರುಣೆ ಇಲ್ಲದವರು, ನ್ಯಾಯ ನೀತಿ ಧರ್ಮದಂತೆ ಎಲ್ಲರನ್ನು ಸಮನಾಗಿ ನೋಡಿಕೊಳ್ಳುತ್ತಾರೆ.

ಲಗ್ನದಲ್ಲಿ ರಾಹು ಇದ್ದರೆ ತುಂಬಾ ಗಟ್ಟಿಯಾದ ದೇಹ, ಆಶೌಚ್ಯ, ಹೆಚ್ಚು ಯೋಚನೆ, ಸಾಹಸಗಳು ಮಾಡುವರು.

ಲಗ್ನದಲ್ಲಿ ಕೇತು ಇದ್ದರೆ ದೃಡವಾದ ದೇಹ, ಹೆಚ್ಚು ಭಯದಿಂದ ಕೂಡಿರುತ್ತಾರೆ, ಅನಾರೋಗ್ಯ ಸಮಸ್ಸೆ, ಭ್ರಮೆ, ಸನ್ಯಾಸತ್ವದಲ್ಲಿ ಆಸಕ್ತಿ.

Also read: ಜ್ಯೋತಿಷ್ಯ ಶಾಸ್ತ್ರದ ವಿವಾಹ ವಿಚಾರದ ಬಗ್ಗೆ ತಿಳಿದುಕೊಳ್ಳಿ!!