ಜ್ಯೋತಿಷ್ಯ ಶಾಸ್ತ್ರ : ನಿಮ್ಮ ರಾಶಿಯ ತತ್ವ ಮತ್ತು ಫಲ ತಿಳಿದುಕೊಳ್ಳಿ!!!

0
751

ರಾಶಿಗಳ ತತ್ವಗಳು

ರಾಶಿಗಳ ಗುಣಗಳು ಬೇರೆ ಬೇರೆ ರೀತಿ ಇರುತ್ತದೆ, ಜಲ, ಅಗ್ನಿ, ಭೂ, ವಾಯು ತತ್ವಗಳನ್ನ 12 ರಾಶಿಗಳಿಗೆ ವಿಂಗಡಿಸಿದ್ದಾರೆ.

ಮೇಷ, ಸಿಂಹ, ಧನಸ್ಸು ರಾಶಿಗೆ- ಅಗ್ನಿ ತತ್ವ ಬರುತ್ತದೆ.

ಮಿಥುನ, ತುಲ, ಕುಂಭ ರಾಶಿಗೆ-ವಾಯು ತತ್ವ ಬರುತ್ತದೆ.

ಕರ್ಕಾಟಕ, ವೃಶ್ಚಿಕ, ಮೀನರಾಶಿಗೆ- ಜಲ ತತ್ವ ಬರುತ್ತದೆ.

ವೃಷಭ, ಕನ್ಯಾ, ಮಕರ ರಾಶಿಗೆ- ಭೂ ತತ್ವ ಬರುತ್ತದೆ.

Image result for astrology

ಅಗ್ನಿ ತತ್ವದ ರಾಶಿಯವರ ಫಲ:
ಕ್ರೀಯಾತ್ಮಕ ಗುಣಗಳನ್ನು ತೋರಿಸುತ್ತಾರೆ, ಸಾಮಾನ್ಯ ಎತ್ತರ, ದಿಟ್ಟರು, ದೈರ್ಯವಂತರು, ಪಿತ್ತ ಸ್ವಭಾವ, ಅಗಲವಾದ ಹಣೆ, ಇವರದೇ ಆದ ಉದ್ದೇಶ ನೀತಿ ಇರುತ್ತದೆ, ಸ್ವಲ್ಪ ದೈವತ್ವವಿರುತ್ತದೆ.
( ಕಣ್ಣು, ರೂಪ, ಪಾದ, ವ್ಯಾನ, ದಾಹ, ಬೆವರು, ಆಲಸ್ಯ, ನಿದ್ರೆ, ತೇಜಸ್ಸು, ಮೂರ್ಛೆ ಇತ್ಯಾದಿ)

ಭೂ ತತ್ವದ ರಾಶಿಯವರ ಫಲ:
ಪ್ರಯೋಗಾತ್ಮಕ ಗುಣ, ವಿವೇಚನೆಯುಳ್ಳವರು, ನಿಧಾನವೇ ಪ್ರಧಾನವೇನ್ನುವರು, ಲೆಕ್ಕಚಾರದಿಂದ ವೆಚ್ಚ ಮಾಡುವವರು, ಕ್ರಮಬದ್ದರು.
(ಗಂಧ, ಪರಿಮಳ, ಮೂಗು, ಪ್ರಾಣಶಕ್ತಿ,
ಪ್ರಾಣವಾಯು, ಅನ್ನಮಯಕೋಶ, ಇತ್ಯಾದಿ)

Image result for five elements of nature

ವಾಯು ತತ್ವದ ರಾಶಿಯವರ ಫಲ:
ಮಿತಭಾಷೆ, ಮೇದಾವಿಗಳು, ದೇಹ ಶ್ರಮ ಕಡಿಮೆ, ಹೆಚ್ಚು ಸಂಗ್ರಹ ಶಕ್ತಿ, ಅತಿ ಮರೆವು, ಉತ್ಸಾಹ ಕಡಿಮೆ.
(ಗಾಳಿ, ಸ್ಪರ್ಶೇಂದ್ರಿಯ, ಧರ್ಮ, ಕೈಗಳು, ಉದಾನ, ಕೋಶ, ಶರೀರ ಕ್ರಿಯೆ ಇತ್ಯಾದಿ)

ಜಲ ತತ್ವದ ರಾಶಿಯವರ ಫಲ:
ಅದ್ವೇಗಕ್ಕೆ ಬೇಗ ಒಳಗಾಗುತ್ತಾರೆ, ಶರೀರ ಕೃಶ, ಗುಪ್ತ ವ್ಯವಹಾರ, ಹೆದರಿಕೆ, ಜೀರ್ಣಶಕ್ತಿ ಕಡಿಮೆ.
(ರಸ, ನಾಲಿಗೆ, ಅಪಾನ, ಪ್ರಾಣಮಯ ಕೋಸ, ರಕ್ತ, ಮೂತ್ರ, ಶುಕ್ಲ ಇತ್ಯಾದಿ)