ಜ್ಯೋತಿಷ್ಯ ಶಾಸ್ತ್ರದ ಪಂಚಮಹಾ ಯೋಗಗಳು ನಿಮ್ಮ ಜೀವನವನ್ನೇ ಬದಲಾಯಿಸಬಲ್ಲವು!!

0
2471

ಪಂಚಮಹಾಪುರುಷ ಯೋಗಗಳು

ಮನಷ್ಯನ ಜೀವಿತ ಕಾಲದಲ್ಲಿ ಸುಖ ದುಃಖ ಲಾಭ ನಷ್ಟಗಳು ಈ ಯೋಗಗಳಿಂದಳೇ ನಿರ್ದರಿಸಬಹುದು. ಜಾತಕದಲ್ಲಿ ಲಗ್ನ, ರಾಶಿ, ರಾಶಿಯ ಸ್ಥಾನಗಳು, ಸ್ಥಿತರಾಗಿರುವ ಗ್ರಹಗಳು ಜಾತಕನ ಕೆಲವು ಶುಭ ಅಶುಭ ಫಲಗಳನ್ನು ತಿಳಿಸುತ್ತದೆ. ಈ ರೀತಿಯೂಗಿ ಕೋಡುವ ಫಲಗಳಿಗೆ ಯೋಗಗಳೆಂದು ಕರೆಯುತ್ತೇವೆ.    ಜ್ಯೋತಿಷ್ಯ ಶಾಸ್ತ್ರದಲ್ಲಿ 128000 ಅಧಿಕ ಯೋಗಗಳು ಇವೆ. ಅದರಲ್ಲಿಯೂ ಪಂಚಮಹಾಪುರುಷ ಯೋಗಗಳು ಅತಿ ಮುಖ್ಯವಾದವು.

ಪಂಚಮಹಾಪುರುಷ ಯೋಗಗಳನ್ನು ಕುಜ, ಬುಧ, ಗುರು, ಶುಕ್ರ, ಶನಿಯಿಂದ ನೋಡಬೇಕು.

1. ರುಚಕ ಯೋಗ– ಇದು ಕುಜನಿಂದ ಉಂಟಾಗುವ ಯೋಗ ಕುಜನು ಸ್ವಕ್ಷೇತ್ರ, ಉಚ್ಚಕ್ಷೇತ್ರ, ಮೇಷ, ಮಕರ, ವೃಶ್ಚಿಕದಲ್ಲಿ ಇದ್ದರೆ ರುಚಕ ಯೋಗ ಉಂಟಾಗುತ್ತದೆ.
ಈ ಯೋಗದ ಫಲ ಸಾಪ್ರದಾಯಿಕ ಆಚಾರಉಳ್ಳವರು, ಯುದ್ದಗಳಲ್ಲಿ ಜಯ, ಶಕ್ತಿವಂತರು, ಶ್ರೀಮಂತರು, ಶಾಸ್ತ್ರಗಳಲ್ಲಿ ಆಸಕ್ತಿ, ಸಂಘಟನಕಾರರು,

2. ಭದ್ರಯೋಗ– ಇದು ಬುಧನಿಂದ ಉಂಟಾಗುವ ಯೋಗ ಬುಧನು ಸ್ವಕ್ಷೇತ್ರ, ಉಚ್ಚಕ್ಷೇತ್ರ, ಮಿಥುನ, ಕನ್ಯಾದಲ್ಲಿ ಇದ್ದರೆ ಭದ್ರ ಯೋಗ ಉಂಟಾಗುಕ್ತದೆ.
ಈ ಯೋಗದ ಫಲ ವಿದ್ಯಾವಂತರು, ಮಿತಭಾಷೆ, ವಾಕ್ ಚತುರರು, ಜ್ಯೋತಿಷಿಗಳು, ಸಾಹಿತಿಗಳು, ವಕೀಲರು ಆಗುವರು ಬಂಧುಗಳಿಂದ ಸಹಾಯ ಪಡೆಯುವಂತರು.

3. ಹಂಸಯೋಗ– ಇದು ಗುರುವಿನಿಂದ
ಉಂಟಾಗುವ ಯೋಗ ಗುರುವು ಸ್ವಕ್ಷೇತ್ರ, ಉಚ್ಚಕ್ಷೇತ್ರ, ಧನಸ್ಸು, ಮೀನ, ಕಟಕದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ.
ಈ ಯೋಗದ ಫಲ ಸುಂದರ ಶರೀರ, ಉತ್ತಮ ಆಹಾರ, ಉನ್ನತ ಅಧಿಕಾರ, ಸನ್ಮಾನ, ಅಂತಸ್ತು, ಧಾರ್ಮಿಕ ಪ್ರವೃತ್ತಿ,
ಪರಿಶುದ್ದ ಮನಸ್ಸು.

4. ಶಶಯೋಗ- ಇದು ಶನಿಯಿಂದ ಉಂಟಾಗುವ ಯೋಗ ಶನಿಯು ಸ್ವಕ್ಷೇತ್ರ, ಉಚ್ಚಕ್ಷೇತ, ಮಕರ, ಕುಂಭ, ತುಲಾದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ.
ಈ ಯೋಗದ ಫಲ ಒಳ್ಳೆ ಸೇವಕರಿರುತ್ತಾರೆ, ಒಂದು ಊರಿನ ಮುಕಂಡ ಅಥವಾ ಮುಖ್ಯಸ್ಥನಾಗಿ ಇಲ್ಲವೇ ರಾಜನೇ ಆಗಿರಬಹುದು, ಐಶ್ವರ್ಯವಂತರು, ಸುಖ ಸಂತೋಷದಿಂದ ಇರುತ್ತಾರೆ.

5. ಮಾಳವ್ಯಯೋಗ– ಇದು ಶುಕ್ರನಿಂದ ಉಂಟಾಗುವ ಯೋಗ ಶುಕ್ರನು ಸ್ವಕ್ಷೇತ್ರ, ಉಚ್ಚಕ್ಷೇತ, ವೃಷಭ, ತುಲಾ, ಮೀನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ.
ಈ ಯೋಗದ ಫಲ ಸುಖ, ಸಂಪತ್ತು, ಪತ್ನೀಪುತ್ರಾದಗಳಿಂದ ಕೂಡಿ ಉತ್ತಮ ವಾಹನ ಸೌಕರ್ಯ, ಉತ್ತಮ ವಸ್ತ್ರ, ವೈಭವ ಜೀವನ, ದಷ್ಟಪುಷ್ಟವಾದ ದೇಹ, ಸುಖೋಪಭೋಗ ಕೊಡುತ್ತದೆ.