ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ ನನ್ನದು ಸ್ವಾತಿ ನಕ್ಷತ್ರ ನನಗೆ ದೈವಾನುಗ್ರಹವಿದೆ; ಐಟಿ ಶಾಕ್‌ ನೀಡಲು ಹೋದ್ರೆ ಮಾಡಿಸಿದವ್ರಿಗೇ ಶಾಕ್‌ ತಿರುಗಿ ತಟ್ಟುತ್ತದೆ..

0
283

ಚುನಾವಣೆಯ ರಂಗು ದೇಶದಲ್ಲಿ ಹತ್ತಿಉರಿಯುತ್ತಿದೆ. ಅದರಲ್ಲಿ ಕರ್ನಾಟದಲ್ಲಿ ಅಂತ್ರು ಮಿತಿಮೀರಿದ್ದು, ಮೈತ್ರಿ ಸರ್ಕಾರದ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಚುನಾವಣೆಗೆ ಬೇಕಾದ ಹಣ ಸಂಗ್ರಹಣೆ ಮಾಡುವ ಶಂಕೆ ಮೂಡಿದ್ದು ಜೆಡಿಎಸ್ ಪಕ್ಷದ ಸಚಿವರ ಅಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ ಇದಕ್ಕೆ ಬೇಸತ್ತ ರೇವಣ್ಣ ಮೋದಿಯ ವಿರುದ್ದ ಕಿಡಿಕಾರಿದ್ದು ನಮ್ಮ ಮೇಲೆ ಮಾಟಮಂತ್ರಗಳು ನಡೆಯುತ್ತಿವೆ. ನಂದು ಸ್ವಾತಿ ನಕ್ಷತ್ರ ಆದಕಾರ ನನ್ನ ಮೇಲೆ ಯಾವುದೇ ಕುತ್ರಂತ್ರ ವ್ಯಾಮಾಚಾರ ನಡೆದರು ಅವರಿಗೆ ವಾಪಸ್ ಆಗುತ್ತೆ. ಎಂದು ಹೇಳಿದ ವಿಷಯ ಎಲ್ಲೆಡೆ ವೈರಲ್ ಆಗಿದೆ.


Also read: ಮೈತ್ರಿ ಸರ್ಕಾರಕ್ಕೆ ಐಟಿ ಶಾಕ್; ಸಿಎಂ ಆಪ್ತ ಸಚಿವ ಸಿ.ಎಸ್​. ಪುಟ್ಟರಾಜು ಮನೆ ಸೇರಿದಂತೆ 15 ಕಡೆ ದಾಳಿ; ಮೋದಿ ವಿರುದ್ದ ಎಚ್ ಡಿ ಕುಟುಂಬ ಫುಲ್ ಗರಂ..

ಹೌದು ಜೋತಿಷ್ಯ, ದೇವರು, ಅಂತ್ರ- ತಂತ್ರ ಮೂಡನಂಬಿಕೆಗಳಿಗೆ ಹೆಸರು ವಾಸಿಯಾಗಿರುವ ರೇವಣ್ಣ ತಮ್ಮ ಪಕ್ಷದ ಆಪ್ತರ ಮನೆಯ ಮೇಲೆ ಐಟಿ ದಾಳಿ ನಡೆದಿದ್ದಕ್ಕೆ ಗರಂ ಆಗಿ ದೇವಿ ಪವಾಡವನ್ನು ಹೇಳಿಕೊಂಡಿದ್ದಾರೆ. ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಲೋಕಾಯುಕ್ತ, ಸಿಒಡಿ, ಸಿಬಿಐ ಎಲ್ಲ ತನಿಖೆ ನೋಡಿದೆ. ಯಾವುದಕ್ಕೂ ಹೆದರಿ ಓಡುವುದಿಲ್ಲ. ನಮಗೆ ದೈವಾನುಗ್ರಹವಿದೆ. ಐಟಿ ಶಾಕ್‌ ನೀಡಲು ಹೋದ್ರೆ ಮಾಡಿಸಿದವ್ರಿಗೇ ಶಾಕ್‌ ತಿರುಗಿ ತಟ್ಟುತ್ತದೆ. ಇದು ರಾಷ್ಟ್ರ ರಾಜಕಾರಣದ ತಿರುವಿಗೆ ದಿಕ್ಸೂಚಿ” ಎಂದು ಜಿಲ್ಲಾ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.


Also read: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ; ದೇಶದಲ್ಲೆ ಕರ್ನಾಟಕದಿಂದ ಚುನಾವಣಾ ಆಯೋಗಕ್ಕೆ ಹೆಚ್ಚು ದೂರು..

ಬಿಜೆಪಿಯವರು ನಮ್ಮ ಮನೆ ಸುತ್ತುತ್ತಾರೆ
ತನ್ನ ಆಪ್ತರ ಮನೆ ಮೇಲೆ ದಾಳಿ ನಡೆಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ನಾಚಿಕೆ ಆಗಬೇಕು. 9 ತಿಂಗಳು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಮನೆ ಸುತ್ತಿದ್ದಾರೆ. ಆದರೂ ಸರ್ಕಾರ ಬೀಳಿಸುವ ತಂತ್ರ ಫಲ ನೀಡಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ನನ್ನ ಇಲಾಖೆಯ ಮೇಲೆ ದಾಳಿ ಮಾಡಿದ್ದಾರೆ. ಐಟಿ ಮುಖ್ಯಸ್ಥರು ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಮಗೆ ನಷ್ಟವಿಲ್ಲ, ಚುನಾವಣೆಯಲ್ಲಿ ಶೇ.10ರಷ್ಟು ಹೆಚ್ಚು ಮತಗಳಿಸುತ್ತೇವೆ ಎಂದು ಹೇಳಿದರು. ಭವಿಷ್ಯ ನುಡಿದ ರೇವಣ್ಣ.
ಬಿಜೆಪಿ ಮುಖಂಡರೇ ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮಾಡಿಸುತ್ತೇವೆ ಎನ್ನುತ್ತಿರುವಾಗ ನಾವೇನು ಮಾಡೋಣ. ಹಾಸನ ಹಾಗೂ ರಾಮನಗರದಲ್ಲಿ ಮಾತ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ದೇವೇಗೌಡರು ಹೆದರುವುದಿಲ್ಲ. ದೇಶದಲ್ಲಿ ಏನೇನೆಲ್ಲ ನಡಿತಿದೆ ಎಂದು ಜನ ನೋಡ್ತಿದಾರೆ.


Also read: ಪ್ರಧಾನಿ ಮೋದಿ ಅವರಿಂದ ಮಹತ್ವದ ಮಾಹಿತಿ; ಭಾರತದ ರಕ್ಷಣೆಯಲ್ಲಿ ‘ಮಿಷನ್ ಶಕ್ತಿ’ ಅತ್ಯಂತ ಮಹತ್ವದ ಹಜ್ಜೆ, ಅಂತರಿಕ್ಷ ಸಮರಕ್ಕೆ ಸಿದ್ಧವಾದ ಭಾರತ..

ಬಿಜೆಪಿಯವರು ಚುನಾವಣೆ ಹತ್ತಿರ ಬಂದಾಗ ದುರುದ್ದೇಶದಿಂದ ಹೀಗೆಲ್ಲ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಯಾರು ಆಸ್ತಿ ಮಾಡಿಕೊಂಡಿದ್ದಾರೂ ಅಂಥವರ ಮೇಲೆ ದಾಳಿ ಮಾಡ್ಲಿ ಬಿಡಿ. ಈ ದಾಳಿಗೆ ನಾವೇನು ತಲೆ ಕೆಡಿಸಿಕೊಂಡಿಲ್ಲ, ಅಕ್ರಮ ಹಣ ಇದ್ದರೆ ಹೊತ್ತುಕೊಂಡು ಹೋಗಲಿ. ಅದನ್ನು ಬಿಟ್ಟು ದೇವೇಗೌಡರು ಹಾಗೂ ಮುಖ್ಯಮಂತ್ರಿ ಹಾಗೂ ನನ್ನನ್ನು ಹೆದರಿಸುತ್ತೇವೆ ಎಂದು ಹೊರಟರೆ ಅದು ಸಾಧ್ಯವಿಲ್ಲ. ಇದಕ್ಕೆಲ್ಲ ಚುನಾವಣೆ ಫಲಿತಾಂಶ ಉತ್ತರವಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿಯವರು ರಾಮನ ಜಪಮಾಡಿ ಈಗ ದೇವೇಗೌಡರ ಜಪದಲ್ಲಿ ಬ್ಯುಸಿಯಾಗಿದ್ದಾರೆ. ಟಿವಿಯಲ್ಲಿ ನೋಡಿ ಈಶ್ವರಪ್ಪ, ಯಡಿಯೂರಪ್ಪ ಎಲ್ಲರಿಗೂ ದೇವೇಗೌಡರದ್ದೇ ಜಪ. ಇದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವುದಕ್ಕೆ ನನ್ನ ಕೃತಜ್ಞತೆ ಸಲ್ಲಿಸುತ್ತೆನೆ. ಮೋದಿಯವರ ಸಮಯ ಮುಗಿಯಿತು. ಅವರು ಏನೂ ಕೆಲಸ ಮಾಡಿಲ್ಲ ಅದಕ್ಕೆ ಯುದ್ಧ ಮಾಡಿದ್ವಿ ಎಂದರು ಆದ್ರೆ ಜನರು ಗುರುತಿಸಲಿಲ್ಲ. ಅದಕ್ಕೆ ಈ ರೀತಿ ನಾಟಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.