ನಿತ್ಯ ಭವಿಷ್ಯ 01 ಡಿಸೆಂಬರ್ 2017

0
681
ದಿನ ಭವಿಷ್ಯ

ಮೇಷರಾಶಿ:-

ಆರ್ಥಿಕ ಅಭಿವದ್ಧಿ ನಿಧಾನವಾದರೂ ಸಂತಪ್ತಿ ಬದುಕು ನಿಮ್ಮದಾಗುವುದು. ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಿ ಮನಸ್ಸು ಶಾಂತಿಯ ನೆಲೆವೀಡಾಗುವುದು.

ವೃಷಭ :-

ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಮಿತ್ರರ ಸಹಕಾರವೂ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಇಂದು ನೂತನ ಪಾಠ ಕಲಿಯುವಿರಿ. ಹಣದ ವಿಷಯದಲ್ಲಿ ಜಾಗ್ರತೆ ಅಗತ್ಯ.

ಮಿಥುನ:-

ಕೆಲವು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಕುಟುಂಬದಲ್ಲಿ ಉತ್ತಮ ಪ್ರಗತಿ. ಕಚೇರಿಯಲ್ಲಿ ಬಿಕ್ಕಟ್ಟು ನಿವಾರಣೆ ಆಗಲಿದೆ. ಮುಂದೆ ಹಮ್ಮಿಕೊಳ್ಳುವ ಯೋಜನೆಗಳ ವಿಚಾರದಲ್ಲಿ ಹಿತಚಿಂತಕರೊಡನೆ ಸಮಾಲೋಚನೆ.

ಕಟಕ:-

ಕೌಟುಂಬಿಕವಾಗಿ ನೆಮ್ಮದಿಯ, ಸಂತಸದ ದಿನ. ಆರೋಗ್ಯ ವದ್ಧಿ. ರೈತರಿಗೆ ತಮ್ಮ ಬೆಳೆದ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ದೊರೆಯುವುದು. ಕೆಲವರ ಮನೆಯಲ್ಲಿ ಮಕ್ಕಳ ಕಲರವವುಂಟಾಗುವುದು.

ಸಿಂಹ:-

ಮನಸ್ಸು ಸಂತಸದಿಂದ ಕೂಡಿರುವುದು. ಇದಕ್ಕೆ ಮನೆ-ಮಂದಿಯ ಸಹಕಾರವೇ ಕಾರಣ. ಅವರಿಗೊಂದು ಧನ್ಯವಾದವನ್ನು ಹೇಳಿರಿ. ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವುದು. ಆರ್ಥಿಕ ಸ್ಥಿತಿ ಆಶಾದಾಯಕವಾಗಿರುತ್ತದೆ.

ಕನ್ಯಾ:-

ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಉಂಟಾದರೂ ಸಂಜೆಯ ವೇಳೆಗೆ ಅನುಕೂಲವಾಗುವುದು. ಮನೆಯ ವಿದ್ಯುತ್ ಉಪಕರಣಗಳ ರಿಪೇರಿಗೆ ಖರ್ಚು ಮಾಡಬೇಕಾಗುವುದು. ಪ್ರಯಾಣದಲ್ಲಿ ಎಚ್ಚರ.

ತುಲಾ:-

ವಂಶೋದ್ಧಾರಕನ ಆಟ-ಪಾಠಗಳು ಮನಸ್ಸಿಗೆ ಮುದ ನೀಡುತ್ತವೆ. ಕೆಲವು ಮಕ್ಕಳು ನೂತನವಾಗಿ ಶಾಲೆಗೆ ಸೇರಿದ ಸಂಭ್ರಮವನ್ನು ಆನುಭವಿಸುವರು. ಇದರಿಂದ ತಂದೆ-ತಾಯಿಯರಿಗೂ ಖುಷಿ. ಆಂಜನೇಯ ಸ್ತೋತ್ರ ಪಠಿಸಿರಿ.

ವಶ್ಚಿಕ:-

ನಿಮ್ಮ ಕಾರ್ಯಗಳನ್ನು ಎದುರಿಗೆ ಹೊಗಳಿ ಹಿಂದುಗಡೆ ತೆಗಳುವ ಮಂದಿಯಿಂದ ದೂರವಿರಿ. ಆಂಜನೇಯ ಸ್ತೋತ್ರ, ಶನೇಶ್ಚರ ದೇವಸ್ಥಾನಕ್ಕೆ ಹೋಗಿ ಬನ್ನಿರಿ. ಮನಸ್ಸಿನ ತುಮುಲಗಳು ಕಡಿಮೆ ಆಗುವುದು.

ಧನಸ್ಸು:-

ಕೌಟುಂಬಿಕ ಸದಸ್ಯರ ಮನವೊಲಿಸುವುದು. ಕಷ್ಠ ಆದಾಗ್ಯೂ ಈದಿನ ಅವರನ್ನು ಸಂತೈಸಬೇಕು. ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.

ಮಕರ:-

ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಬರುವುದು. ಕೋರ್ಟು ಕಚೇರಿ ವ್ಯವಹಾರಗಳು ನಿಮ್ಮಂತೆಯೇ ಆಗುವುದು. ಗುರುವಿನ ಸ್ತೋತ್ರ ಪಠಿಸಿರಿ. ಗುರುವಿನ ಆಶೀರ್ವಾದ ಪಡೆಯಿರಿ.

ಕುಂಭ:-

ಗುರಿ ಸಾಧಿಸುವುದರಲ್ಲಿ ಸಫಲರಾಗುತ್ತೀರಿ. ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸನ್ನು ಹೊಂದುವಿರಿ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸಲ್ಲದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಮೀನ:-

ಜನಪ್ರಿಯತೆ ಹೆಚ್ಚಾಗುವುದು. ವ್ಯಾಪಾರ ವ್ಯವಹಾರಗಳು ನಿರೀಕ್ಷೆ ತಕ್ಕಷ್ಠು ವರಮಾನವಿರುತ್ತದೆ. ಬಂಧುಬಾಂಧವರ ಅಥವಾ ಸರಕಾರದಿಂದ ಮಾನಸಿಕ ಕಿರಿಕಿರಿ ಆಗುವುದು.