ನಿತ್ಯ ಭವಿಷ್ಯ ಆಗಸ್ಟ್ 31, 2017 (ಗುರುವಾರ)

0
635

ಆಗಸ್ಟ್ 31, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮೂಲ ನಕ್ಷತ್ರ,

ಮೇಷ

01-Mesha

ಇಂದು ನಿಮ್ಮ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ. ನೀವು ಕಲಿತಿರುವುದನ್ನು ಹೆಮ್ಮೆಯಿಂದ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಸುತ್ತಮುತ್ತಲಿನ ನಿಮ್ಮ ಸ್ನೇಹಿತರು ಮತ್ತು ಬಂಧುಬಾಂಧವರು ಇದರಿಂದ ಖುಷಿಯಾಗುವರು.

ವೃಷಭ

02-Vrishabha

ಭರವಸೆಯ ವ್ಯವಹಾರದ ಅವಕಾಶವೊಂದರಿಂದ ಉತ್ತೇಜಿತರಾಗುತ್ತೀರಿ. ಮನೆಯಲ್ಲಿ ಕೆಟ್ಟು ನಿಂತ ಎಲೆಕ್ಟ್ರಾನಿಕ್‌ ಉಪಕರಣ ಸರಿಹೋಗುವುದು. ಇದರಿಂದ ಹೊಸ ಖರೀದಿಯ ಯೋಜನೆಗೆ ಅಡ್ಡಗಾಲು ಆಗುವುದು.

ಮಿಥುನ

03-Mithuna

ಒಳ್ಳೆಯ ಯೋಜನೆಗಳಿಗೆ ಯಾವತ್ತು ಬೆಲೆ ಇದೆ. ದೈವಕೃಪೆಯಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಅವಿವಾಹಿತರಿಗೆ ವಿವಾಹಯೋಗ, ಸಮಾಜದಲ್ಲಿ ಉನ್ನತ ಪದವಿ ಪ್ರಾಪ್ತಿ ಯೋಗವಿದೆ. ಆರ್ಥಿಕ ಸ್ಥಿತಿ ಉತ್ತಮ.

ಕಟಕ

04-Kataka

ಉಪಾಧ್ಯಾಯರಿಗೆ ಹೆಚ್ಚಿನ ಒತ್ತಡ ಎದುರಾಗುವುದು. ಸರ್ಕಾರದ ಇಬ್ಬಂದಿಯ ಹೇಳಿಕೆಗಳು ಗೊಂದಲವನ್ನುಂಟು ಮಾಡುವುದು. ಪಾಠ ಮಾಡುವ ಕಡೆಗೆ ಗಮನ ಕೊಡಬೇಕೋ, ಮಕ್ಕಳ ಹಾಜರಾತಿ ಕಡೆಗೆ ಗಮನ ಕೊಡಬೇಕೋ ತಿಳಿಯದಾಗುವುದು.

ಸಿಂಹ

05-Simha

ಮನೆ ಎಂದ ಮೇಲೆ ಸಣ್ಣಪುಟ್ಟ ವಾದ-ವಿವಾದಗಳು ಇದ್ದದ್ದೆ. ಆದರೆ ಅದನ್ನೆ ದೊಡ್ಡದು ಮಾಡಿಕೊಳ್ಳುವುದು ಜಾಣರ ಲಕ್ಷ ಣವಲ್ಲ. ಸ್ನೇಹಿತರ ಸಕಾಲಿಕ ಸಲಹೆಯಿಂದ ಮನಸ್ಸು ಶಾಂತವಾಗುವುದು. ಆರೋಗ್ಯದಲ್ಲಿ ಉತ್ತಮ.

ಕನ್ಯಾ

06-Kanya

ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುವುದು. ಸಂಘದ ಸದಸ್ಯರ ಆಶಯದಂತೆ ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುವಿರಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ತುಲಾ

07-Tula

ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಚಿಂತಿಸಿ. ಮನೆಯ ಜವಾಬ್ದಾರಿ ಮತ್ತು ಕಚೇರಿಯ ಕೆಲಸ ಕಾರ್ಯಗಳ ಒತ್ತಡದ ಮಧ್ಯೆ ಸಂಗಾತಿಯ ಬಿರು ನುಡಿಗಳು ನಿಮ್ಮ ಅಂತಃಕಲಹವನ್ನು ಹೀರಿಬಿಡುವ ಸಾಧ್ಯತೆಯಿದೆ.

ವೃಶ್ಚಿಕ

08-Vrishika

ಗೃಹೋಪಕರಣಗಳ ಖರೀದಿ ಸಂಭವ. ಹಮ್ಮಿಕೊಂಡ ಕಾರ್ಯಗಳು ಸಾಡೇಸಾತ್‌ ಶನಿಯ ಪ್ರಭಾವದಿಂದ ಅರ್ಧಕ್ಕೆ ನಿಲ್ಲುವ ಸಂಭವ. ದೀನದಲಿತರಿಗೆ ಆಹಾರವನ್ನು ನೀಡಿರಿ. ಹಣವನ್ನು ಮತ್ತು ನೀರನ್ನು ಮಿತವಾಗಿ ಬಳಸಿರಿ.

ಧನು

09-Dhanussu

ಜಗತ್ತಿನಲ್ಲಿ ಸೋಲು-ಗೆಲುವು ಇದ್ದದ್ದೆ. ಅದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಿರಿ. ಹಿಂದೆ ಆಗಿ ಹೋದ ಕೆಟ್ಟ ಘಟನೆಗಳನ್ನು ಮೆಲುಕು ಹಾಕುವುದು ತರವಲ್ಲ. ಸದಾ ಧನಾತ್ಮಕ ಚಿಂತನೆಯನ್ನು ಮಾಡಿರಿ. ಧನ್ಯತೆಯನ್ನು ಹೊಂದಿರಿ.

ಮಕರ

10-Makara

ಇಂದಿನ ಸಮಯವು ಸುಸಮಯವಾಗಿದೆ. ಆಪ್ತಮಿತ್ರನ ಭೇಟಿ ಆಗುವಿರಿ. ಹಲವು ವರ್ಷಗಳ ಸ್ನೇಹಕ್ಕೆ ಪುನರ್ಜೀವ ಬಂದಂತೆ ಆಗುವುದು. ಹರ್ಷದಾಯಕ ಮತ್ತು ಉಲ್ಲಾಸದ ದಿನ. ಸ್ನೇಹಿತನನ್ನು ಖುಷಿ ಪಡಿಸುವಿರಿ.

ಕುಂಭ

11-Kumbha

ಸಮಾಜದ ಹಸಿವನ್ನು ನೀಗಿಸುವ ಪುಟ್ಟ ಪ್ರಯತ್ನವು ಮಹತ್ತರ ಪರಿಣಾಮವನ್ನು ಉಂಟು ಮಾಡುವುದು. ನಿಮ್ಮ ಅಗಾಧವಾದ ಬುದ್ಧಿಶಕ್ತಿಯ ಪ್ರದರ್ಶನ ತೋರ್ಪಡಿಸುವಿರಿ. ಇದರಿಂದ ಸ್ನೇಹಿತರು ಹೆಮ್ಮೆ ಪಡುವರು.

ಮೀನ

12-Meena

ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಆದರೂ ಅದು ಉತ್ತಮ ಕಾರ್ಯಕ್ಕಾಗಿ ಮಾಡಿದ ಖರ್ಚಾದ್ದರಿಂದ ಮನಸ್ಸಿಗೆ ನೆಮ್ಮದಿ ನೀಡುವುದು. ಕೌಟುಂಬಿಕವಾಗಿ ಉತ್ತಮ ದಿನ. ಆರ್ಥಿಕ ಅಭಿವೃದ್ಧಿಯುಂಟಾಗುವುದು.