ನಿತ್ಯ ಭವಿಷ್ಯ ಸೆಪ್ಟೆಂಬರ್ 12, 2017 (ಮಂಗಳವಾರ)

0
630

ಸೆಪ್ಟೆಂಬರ್ 12, 2017 (ಮಂಗಳವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಕೃತ್ತಿಕೆ ನಕ್ಷತ್ರ,

ಮೇಷ

01-Mesha

ಹಿಂದಿನ ಕೆಲವು ಅನುಭವಗಳು ಪ್ರಸ್ತುತ ಸಂದರ್ಭದಲ್ಲಿ ಸಹಾಯಕ್ಕೆ ಬರುವುದು. ಇದರಿಂದ ಈ ದಿನದ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು. ಹಣಕಾಸಿನ ಪರಿಸ್ಥಿತಿಯು ಸುಧಾರಣೆ ಆಗುವುದು.

ವೃಷಭ

02-Vrishabha

ಗತಿಸಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಈ ದಿನ ವೈಫಲ್ಯ ಕಳೆದು ಹೊಸ ಸಂಭ್ರಮಕ್ಕೆ ದಾರಿ ಸಿಗುವುದು. ಮಗನ ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುತ್ತಿದೆ ಎಂಬ ವಾರ್ತೆಯೇ ನಿಮಗೆ ಅತ್ಯಂತ ಸಂತಸ ನೀಡುವುದು.

ಮಿಥುನ

03-Mithuna

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶಾಲಾ-ಕಾಲೇಜಿನ ಕಾರ್ಯ ಕ್ಷೇತ್ರಗಳಲ್ಲಿ ಅವರು ಪಾರಿತೋಷಕ ತರುವರು. ಇದರಿಂದ ಮಕ್ಕಳ ಮೇಲೆ ಮಮತೆ ಹೆಚ್ಚಾಗುವುದು. ಈ ದಿನದ ಖರ್ಚಿಗೆ ತಕ್ಕಷ್ಟು ಹಣ ಸಂದಾಯವಾಗುವುದು.

ಕಟಕ

04-Kataka

ದ್ವಿತೀಯ ಧನಸ್ಥಾನದ ರಾಹು ಆರ್ಥಿಕ ಮುಗ್ಗಟ್ಟನ್ನು ತರುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಿರಿ. ಮಾತೃವರ್ಗದವರಿಗೆ ಉತ್ತಮ ಫಲ ದೊರೆಯುವುದು. ಮಾತಿನಲ್ಲಿ ಹಿಡಿತವಿರಲಿ.

ಸಿಂಹ

05-Simha

ಮಿತ್ರರಿಂದ ಕೆಲವು ಉತ್ತಮ ವಿಚಾರಗಳು ತಿಳಿದು ಬರುವುದು. ಎಲ್ಲಾ ಕಡೆಯಿಂದಲೂ ಧನಾತ್ಮಕ ಚಿಂತನೆಯೂ ಹರಿದು ಬರಲಿ ಎಂಬು ಉದಾತ್ತ ಧೈರ್ಯವು ನಿಮ್ಮ ಮನಸ್ಥಿತಿ ಆಗಿರುತ್ತದೆ. ಇದರಿಂದ ನೀವು ಗೌರವಿಸಲ್ಪಡುವಿರಿ.

ಕನ್ಯಾ

06-Kanya

ಹೊಸಗಾಳಿಯು ಬೀಸುತ್ತಿದೆ. ಅದರ ಜೊತೆಯಲ್ಲಿ ಸಾಗುವುದರಿಂದ ನಿಮಗೆ ಒಳಿತಾಗುವುದು. ಬುದ್ಧಿವಂತರ ಜೊತೆ ಒಡನಾಟ ಹೆಚ್ಚಾಗುವುದು. ನಿಮ್ಮ ತಿಳುವಳಿಕೆಯ ಮಟ್ಟವು ಹೆಚ್ಚಾಗುವುದು. ನಿಂತ ನೀರಿಗಿಂತ ಹರಿವ ನೀರು ಶ್ರೇಷ್ಠ. ಸಮಾಜಮುಖಿಗಳಾಗುವಿರಿ.

ತುಲಾ

07-Tula

ಕೆಲಸ ಕಾರ್ಯದಲ್ಲಿ ಇನ್ನೊಬ್ಬರ ಸಲಹೆ ಪಡೆಯುವುದು ತಪ್ಪಲ್ಲ. ಆದರೆ ಎಲ್ಲರ ಸಲಹೆಯನ್ನು ಕಾರ್ಯರೂಪಕ್ಕೆ ತರಲಾಗುವುದಿಲ್ಲ. ಸಲಹೆಗಳು ಇತರೆಯವರದು. ತೀರ್ಮಾನ ಮಾತ್ರ ನಿಮ್ಮದಾಗಿರಬೇಕು. ಈ ದಿಶೆಯಲ್ಲಿ ಚಿಂತನೆ ನಡೆಸಿರಿ.

ವೃಶ್ಚಿಕ

08-Vrishika

ಸಂಸಾರದಲ್ಲಿನ ಏಕತಾನತೆಯಿಂದ ಬಸವಳಿಯುವಿರಿ. ಹಾಗಾಗಿ ವಾರಾಂತ್ಯ ದಿನವಾದ ಇಂದು ಮಡದಿ ಮತ್ತು ಮಕ್ಕಳೊಂದಿಗೆ ಎಲ್ಲಾದರೂ ಸುತ್ತಾಡಿಕೊಂಡು ಬನ್ನಿರಿ. ಹಾಗಂತ ಸಿನಿಮಾಕ್ಕೆ ಹೋಗಬೇಡಿ. ಅಲ್ಲಿಯೂ ನಿಮ್ಮ ಮನೆಯ ಕಥೆಯೆ ಇರಬಹುದು.

ಧನು

09-Dhanussu

ಎಷ್ಟೇ ಯೋಜನಬದ್ಧವಾಗಿ ಕಾರ್ಯ ಹಮ್ಮಿಕೊಂಡರೂ ಯಾವುದರಲ್ಲೂ ಯಶಸ್ಸು ಕಾಣುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಇಂದು ಕಾಡುವುದು. ನಿರಾಶರಾಗದಿರಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದೆ ಇರುವುದಿಲ್ಲ.

ಮಕರ

10-Makara

ಮನೆಯ ಹಿರಿಯರ ಹಿತವಚನವನ್ನು ಪಾಲಿಸುವುದರಿಂದ ಈ ದಿನ ಹೆಚ್ಚಿನ ಯಶಸ್ಸನ್ನು ಹೊಂದಬಹುದಾಗಿದೆ. ದೂರದ ಪ್ರವಾಸವು ಹರ್ಷದಾಯಕವಾಗಿರುತ್ತದೆ. ನಿಮ್ಮ ಸಂತೋಷಕ್ಕೆ ಮಕ್ಕಳ ಪ್ರಗತಿಯು ಕಾರಣವಾಗುವುದು.

ಕುಂಭ

11-Kumbha

ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವಂತೆ ಈ ದಿನ ನೀವು ಕೂಡಿಟ್ಟ ಹಣ ಪರರ ಪಾಲಾಗುವುದು. ಸಿಟಿಬಸ್‌ನಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ಇರಲಿ. ನಿಮ್ಮ ಹಣ ಪಿಕ್‌ ಪಾಕೆಟ್‌ ಆಗುವ ಸಾಧ್ಯತೆ ಇರುತ್ತದೆ.

ಮೀನ

12-Meena

ನೀವು ಯೋಚಿಸಿದ ಕಾರ್ಯಗಳನ್ನು ಸ್ನೇಹಿತರ ಮುಂದೆ ಹೇಳಿಕೊಳ್ಳಿರಿ. ಅದಕ್ಕಾಗಿ ಅವರು ಸುಲಭ ಮಾರ್ಗಗಳನ್ನು ತೋರಿಸಿಕೊಡುವರು. ಇದರಿಂದ ನಿಮ್ಮ ಕಾರ್ಯವು ಸುಲಲಿತವಾಗುವುದು. ಮತ್ತು ಹಣವೂ ಕೈಸೇರುವುದು.