ನಿತ್ಯ ಭವಿಷ್ಯ ಸೆಪ್ಟೆಂಬರ್ 14, 2017 (ಗುರುವಾರ)

0
527

ಸೆಪ್ಟೆಂಬರ್ 15, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಆರ್ದ್ರೆ ನಕ್ಷತ್ರ,

ಮೇಷ

01-Mesha

ಎಲ್ಲರಂತೆ ನೀವು ಸಹ ಮದುವೆಗಾಗಿ ಇಷ್ಟಪಡುತ್ತಿದ್ದೀರಿ. ಆದರೆ ಸದ್ಯದ ಗ್ರಹಸ್ಥಿತಿಯು ಇನ್ನು ಸಹ ನಿಮ್ಮ ಮೇಲೆ ಕೃಪೆ ಮಾಡಿರುವುದಿಲ್ಲ. ಭಗವಂತನ ಒಲುಮೆ ಆಗುವವರೆಗೂ ಅರಿತು ಸುಮ್ಮನಿರುವುದು ಲೇಸು.

ವೃಷಭ

02-Vrishabha

ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಮಾತೇ ಅಂತಿಮ. ನಿಮಗೆ ಎದುರು ಮಾತನಾಡುವ ಶಕ್ತಿ ಇತರರಿಗೆ ಇರುವುದಿಲ್ಲ. ನಿಮ್ಮ ಬಾಳಸಂಗಾತಿಯೂ ಕೂಡಾ ನಿಮ್ಮ ಅಣತಿಯಂತೆ ನಡೆಯುವುದರಿಂದ ಸಹಜವಾಗಿ ಈ ದಿನ ನೀವು ಬೀಗುವಿರಿ.

ಮಿಥುನ

03-Mithuna

ಆರ್ಥಿಕವಾದ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಯೋಜನೆಗಳನ್ನು ಭದ್ರವಾಗಿ ರೂಪಿಸಿಕೊಳ್ಳುವುದು ಈ ದಿನದ ತುರ್ತು ಕೆಲಸವಾಗಿರುತ್ತದೆ. ಈ ದಿನದ ಕೆಲಸವನ್ನು ಮುಂದೂಡದೆ ಸರಿಯಾದ ಸಮಯಕ್ಕೆ ಕೆಲಸ ಮಾಡಿ ಮುಗಿಸಿರಿ.

ಕಟಕ

04-Kataka

ಕಾಲ ಶ್ರೇಷ್ಠವಾದದ್ದು, ಮುತ್ತು ಒಡೆದರೆ ಹೋಯಿತು, ಹೊತ್ತು ಹೋದರೆ ಮುಗಿಯಿತು ಎಂಬಂತೆ ಈ ದಿನದ ಮಹತ್ತರ ಕೆಲಸಗಳನ್ನು ಇಂದೇ ಮಾಡಿ ಮುಗಿಸಿರಿ. ಇದರಿಂದ ಹೆಚ್ಚಿನ ತಲೆಭಾರ ಕಡಿಮೆ ಆಗುವುದು. ಈ ದಿಶೆಯಲ್ಲಿ ಸ್ನೇಹಿತರ ಬೆಂಬಲ ಪಡೆಯಿರಿ.

ಸಿಂಹ

05-Simha

ಒಳಿತನ್ನು ಹೇಳಲು ಹೋದರೂ ಅಪಾರ್ಥ ಮಾಡಿಕೊಳ್ಳುವ ಸಂದರ್ಭವಿದೆ. ಅದಕ್ಕೆ ಕಾರಣ ಈ ಹಿಂದಿನ ನಿಮ್ಮ ಸಾಮಾಜಿಕ ನಿಲುವು. ಆಪ್ತರಲ್ಲಿ ಮತ್ತು ಗಣ್ಯವ್ಯಕ್ತಿಗಳ ಜೊತೆಯಲ್ಲಿ ವ್ಯವಹಾರ ಮಾಡುವಾಗ ಉಡಾಫೆ ಮಾತು ಸಲ್ಲದು.

ಕನ್ಯಾ

06-Kanya

ಕೆಲವು ಸಲ ಹುಲ್ಲುಕಡ್ಡಿಯ ಸಹಾಯವನ್ನು ಕೂಡಾ ಪಡೆಯಬೇಕಾಗುತ್ತದೆ. ಹಾಗಾಗಿ ಈ ದಿನ ಯಾರನ್ನು ಕಡೆಗಣಿಸದಿರಿ. ಕಡೆಗಣಿಸಿದ ವ್ಯಕ್ತಿಯ ಮುಂದೆ ನಿಮಗೆ ಸಹಾಯ ಮಾಡುವ ಪರಿಸ್ಥಿತಿ ಎದುರಾಗುವುದು.

ತುಲಾ

07-Tula

ಬಾಳಸಂಗಾತಿಯ ಮಾತುಗಳಿಂದ ಘಾಸಿಗೊಳ್ಳುವಿರಿ. ಸಾಡೇಸಾತಿ ಶನಿಯ ಕಾಡಾಟದ ಕೊನೆಯ ಹಂತದಲ್ಲಿದ್ದೀರಿ. ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಎಲ್ಲವೂ ಒಳಿತಾಗುವುದು. ಬರುವ ವರ್ಷದಿಂದ ಹೆಚ್ಚಿನ ಅನುಕೂಲ ಕಂಡುಬರುವುದು.

ವೃಶ್ಚಿಕ

08-Vrishika

ಮಹತ್ತರವಾದ ಕೆಲಸವೊಂದು ಗುರುವಿನ ಅನುಗ್ರಹದಿಂದ ನೆರವೇರುವುದು. ಇದರಿಂದಾಗಿ ಸಮಾಜದಲ್ಲಿ ಮಾನಮನ್ನಣೆಗಳು ಉಂಟಾಗುವುದು. ಉಷ್ಣ ಸಂಬಂಧದಿಂದ ಉಂಟಾಗುವ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಧನು

09-Dhanussu

ಕೆಲವೊಮ್ಮೆ ನೀವಾಡುವ ಮಾತಿನಿಂದ ಪೇಚಿಗೆ ಸಿಲುಕಿಕೊಳ್ಳುವಿರಿ. ಕೆಲವರಿಗೆ ಇದರಿಂದ ಲಾಭವೂ ಉಂಟಾಗುವ ಸಾಧ್ಯತೆ. ಸರ್ಕಾರಿ ನೌಕರರಿಗೆ ಬಡ್ತಿ ಯೋಗವಿದ್ದು ಇರುವ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಹೋಗಲು ಸೂಚನೆ ಸಿಗುವುದು.

ಮಕರ

10-Makara

ವಿಶೇಷವಾದ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಪದೋನ್ನತಿಗೆ ಹೆಚ್ಚಿನದಾದ ಅವಕಾಶ ಕೂಡಿಬರುವುದು. ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ನಿರ್ವಹಿಸಿದಲ್ಲಿ ಇನ್ನು ಹೆಚ್ಚಿನ ಅವಕಾಶಗಳು ನಿಮಗೆ ದೊರೆಯುವುದು.

ಕುಂಭ

11-Kumbha

ದೂರದ ಊರಿನ ಸಂಬಂಧಿಗಳು ಬಂದು ಅಶಾಂತಿ ನಿರ್ಮಿಸುವ ಸಾಧ್ಯತೆ ಅಧಿಕವಿದೆ. ಹಾಗಾಗಿ ಈ ದಿನ ಮೌನವ್ರತ ತಾಳುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಮೀನ

12-Meena

ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೀತಿಯ ಒತ್ತಡ ಬರಬಹುದು. ಹಾಗಾಗಿ ಅದನ್ನು ತಿರಸ್ಕರಿಸದಿರಿ. ಹೊಸ ವಾತಾವರಣದಲ್ಲಿ ನೂತನ ಜನರ ಪರಿಚಯವು ನಿಮಗೆ ಹೆಚ್ಚಿನ ಉತ್ಸಾಹ ನೀಡುವುದು.