ನಿತ್ಯ ಭವಿಷ್ಯ ಸೆಪ್ಟೆಂಬರ್ 18, 2017 (ಸೋಮವಾರ)

0
562

ಸೆಪ್ಟೆಂಬರ್ 18, 2017 (ಸೋಮವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ತ್ರಯೋದಶೀ ತಿಥಿ,
ಮಖೆ ನಕ್ಷತ್ರ,

ಮೇಷ

01-Mesha

ಅಜ್ಜ ನೆಟ್ಟ ಆಲದ ಮರ ಎಂದು ಅದಕ್ಕೆ ಜೋತು ಬೀಳುವುದು ತರವಲ್ಲ. ಇಂದು ವಿಜ್ಞಾನ ಬಹಳಷ್ಟು ಮುಂದುವರೆದಿದೆ. ಅಂತೆಯೇ ನಿಮ್ಮ ವಿದ್ವತ್‌ಗೆ ಇಂದು ಬೆಲೆ ಸಿಗದಿರಬಹುದು. ಆದರೆ ಮುಂದೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ.

ವೃಷಭ

02-Vrishabha

ಎಲ್ಲಾ ಕಾರ್ಯಗಳು ನಿಮ್ಮ ಅನಿಸಿಕೆಯಂತೆ ಆಗುತ್ತಿರುವುದರಿಂದ ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲನ್ನು ಏರುವಿರಿ. ಈ ಯಶಸ್ಸಿನಲ್ಲಿ ನಿಮ್ಮ ಸಂಗಾತಿಯ ಪಾಲು ಇರುವುದನ್ನು ಮರೆಯದಿರಿ.

ಮಿಥುನ

03-Mithuna

ಯಾವುದೋ ಸಹಜವಾದ ಮಾತು ಎದುರಾಳಿಯನ್ನು ಕೆರಳಿಸಬಹುದು. ಅದಕ್ಕಾಗಿ ನೀವು ಆತನನ್ನು ಪರಿಪರಿಯಾಗಿ ಒಪ್ಪಿಸಬೇಕಾಗುವುದು. ಸ್ನೇಹಿತನ ಮಧ್ಯಸ್ಥಿಕೆಯಿಂದ ಭಿನ್ನಾಭಿಪ್ರಾಯ ಶಮನ ಆಗುವುದು.

ಕಟಕ

04-Kataka

ಗ್ರಹಗಳ ಅಶುಭ ಸಂಚಾರದಿಂದಾಗಿ ನೀವು ದೃಢವಾದ ನಿರ್ಧಾರ ತಳೆಯಲಾರಿರಿ. ಹಾಗಾಗಿ ಇಚ್ಛಿತ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಜಗನ್ಮಾತೆಯಾದ ದುರ್ಗೆಯನ್ನು ಆರಾಧಿಸಿ ಇಂದಿನ ಸಂಕಷ್ಟದಿಂದ ಪಾರಾಗಿರಿ.

ಸಿಂಹ

05-Simha

ಎಲ್ಲರೂ ನಿಮ್ಮ ಕಡೆ ಬೊಟ್ಟು ಮಾಡಿ ತೋರಿಸುತ್ತಾ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವರು. ಅದಕ್ಕೆ ಅಂಜದಿರಿ. ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಇದೆಲ್ಲವೂ ಸಹಜ. ನಿಮ್ಮ ದೃಢ ನಿಲುವಿನಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ.

ಕನ್ಯಾ

06-Kanya

ಎಲ್ಲಾ ದಿನಗಳೂ ವಸಂತಕಾಲವಾಗಿರಲು ಸಾಧ್ಯವಿಲ್ಲ. ಅಂತೆಯೇ ಪ್ರತಿನಿತ್ಯವೂ ನಿಮ್ಮ ಮಾತಿಗೆ ಎಲ್ಲರೂ ತಲೆಬಾಗಬೇಕೆಂಬ ಅಲಿಖಿತ ಮನೋಭಾವನೆಯಿಂದ ಹೊರಬನ್ನಿರಿ. ಈ ದಿನ ಸೋತು ಗೆಲ್ಲುವುದು ಉತ್ತಮ.

ತುಲಾ

07-Tula

ಹಳೆಯ ಸ್ನೇಹಿತನಿಂದ ಹಲವು ನಿಟ್ಟಿನ ಮಾರ್ಗದರ್ಶನ ದೊರಯುವುದು. ಮತ್ತು ಈದಿನ ನಿಮಗೆ ಬರಬೇಕಾಗಿದ್ದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಭಾಗ ನಿಮ್ಮ ಕೈಸೇರುವುದರಿಂದ ಸ್ವಲ್ಪಮಟ್ಟಿನ ಸಮಸ್ಯೆ ತಗ್ಗುವುದು.

ವೃಶ್ಚಿಕ

08-Vrishika

ಯಶಸ್ಸಿನ ಏಣಿ ಏರುವಿರಿ. ಇದಕ್ಕೆ ಗುರು ಜನರು ಸಹಾಯಕ್ಕೆ ನಿಲ್ಲುವರು. ಇಂದು ನೀವು ಕೈಗೊಳ್ಳುವ ನಿರ್ಧಾರದ ಮೇಲೆ ನಿಮ್ಮ ಬೆಂಬಲಿಗರು ಸಹಾಯಹಸ್ತ ನೀಡಲು ಕಾದಿರುವರು. ಈ ದಿನ ಮಹತ್ತರವಾದ ದಿನ.

ಧನು

09-Dhanussu

ಸದ್ಯಕ್ಕೆ ಸ್ಥಿರಾಸ್ಥಿ ಮೇಲೆ ಹೂಡಿದ ಹಣ ವಾಪಸ್ಸು ಬರದೆ ಇರುವುದು ನಿಮ್ಮ ಆತಂಕಕ್ಕೆ ಕಾರಣವಾಗಿದೆ. ಈ ಆತಂಕವು ರಿಯಲ್‌ ದಂಧೆ ಮಾಡುವ ಎಲ್ಲರ ಪರಿಸ್ಥಿತಿಯು ಇದೆ ಆಗಿದೆ. ಸ್ವಲ್ಪ ದಿನ ಕಾದು ನೋಡಿ ಒಳಿತಾಗುವುದು.

ಮಕರ

10-Makara

ಮಾತುಗಾರಿಕೆಯ ಪ್ರಭಾವದಿಂದ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುವಿರಿ. ಈ ದಿನ ನಿಮ್ಮ ಮಾತಿಗೆ ಎಲ್ಲೆಡೆ ಗೌರವ ಲಭಿಸುವುದು. ಅಂತೆಯೆ ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದರಿಂದ ಕೌಟುಂಬಿಕ ಜೀವನಕ್ಕೆ ಧಕ್ಕೆ ಇರುವುದಿಲ್ಲ.

ಕುಂಭ

11-Kumbha

ಕಠಿಣ ದುಡಿಮೆ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂದರು ಹಿರಿಯರು. ಹಾಗಾಗಿ ಈ ದಿನ ನಿಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಮತ್ತು ಮೇಲಧಿಕಾರಿಗಳ ಪ್ರಶಂಸೆಗೆ ಕಾರಣರಾಗುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ಮೀನ

12-Meena

ನವಮ ಭಾಗ್ಯದ ಶನಿಯು ಈ ದಿನ ನಿಮ್ಮ ಭಾಗ್ಯಹರಣ ಮಾಡುವ ಹವಣಿಕೆಯಲ್ಲಿರುವರು. ಹಾಗಾಗಿ ಮಹತ್ತರ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಉತ್ತಮ ಆರೋಗ್ಯ ಈ ದಿನದ ವಿಶೇಷತೆ ಎನಿಸುವುದು.