ನಿತ್ಯ ಭವಿಷ್ಯ ಸೆಪ್ಟೆಂಬರ್ 19, 2017 (ಮಂಗಳವಾರ)

0
488

ಸೆಪ್ಟೆಂಬರ್ 19, 2017 (ಮಂಗಳವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಪುಬ್ಬೆ ನಕ್ಷತ್ರ,

ಮೇಷ

01-Mesha

ಸದ್ಯದ ಪರಿಸ್ಥಿತಿಯಲ್ಲಿ ತಗ್ಗಿ-ಬಗ್ಗೆ ನಡೆಯುವುದು ಕ್ಷೇಮ. ಅಟ್ಟಹಾಸದಿಂದ ಮೆರೆದವರೆಲ್ಲರೂ ಸೋತು ಇತಿಹಾಸ ಸೇರಿದ್ದಾರೆ. ಹಾಗಾಗಿ ಈದಿನ ತಾಳ್ಮೆಯ ಜತೆಗೆ ಸೌಜನ್ಯವನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಕಾರ್ಯ ಕೈಗೂಡುವುದು.

ವೃಷಭ

02-Vrishabha

ಶುಭದಾಯಕ ಗಳಿಗೆಗೆ ಇಂದು ರಹದಾರಿ ಆಗುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಗುರು ಹಿರಿಯರ ಆಶೀರ್ವಾದವು ನಿಮ್ಮ ಮೇಲಿರುವುದರಿಂದ ಹೆಚ್ಚಿನ ತೊಂದರೆ ಇರುವುದಿಲ್ಲ.

ಮಿಥುನ

03-Mithuna

ಇತರರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಸೋಲು ಉಂಟಾಗುವುದು. ಹಣದ ವಿಚಾರದಲ್ಲಿ ಜಾಗ್ರತೆ ಇರಲಿ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.

ಕಟಕ

04-Kataka

ಗ್ರಹಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳುತ್ತಿರುವುದರಿಂದ ಮೇಲಧಿಕಾರಿಗಳು ನಿಮ್ಮ ಕಾರ‍್ಯವೈಖರಿಯ ಬಗ್ಗೆ ಕೂಗಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಕೈ ಕೆಳಗಿನ ಕೆಲಸಗಾರರು ನಿಮಗೆ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಈ ಪರಿಸ್ಥಿತಿ ಉಂಟಾಗುವುದು.

ಸಿಂಹ

05-Simha

ಮನಸ್ಸೇ ನಿಮ್ಮ ಆಪ್ತಮಿತ್ರ. ಮಿಂಚಿನ ಯೋಚನೆಯೊಂದಿಗೆ ಹೊಯ್ದಾಟದ ವರ್ತಮಾನ ಸ್ಥಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಸಮಾಧಾನವನ್ನು ಹೊಂದಿ. ಗುರುವಿನ ಬೆಂಬಲವಿದ್ದು ನಿಮ್ಮ ಕಾರ್ಯಗಳು ಯಶಸ್ಸಿನತ್ತ ಸಾಗುವುದು.

ಕನ್ಯಾ

06-Kanya

ಉತ್ತಮವಾದ ಯಶಸ್ಸಿಗೆ ಈದಿನ ಸಾಕ್ಷಿಯಾಗುವುದು. ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಕೇಳಿಬರುವುದು. ಧಾರ್ಮಿಕ ಕಾರ್ಯಗಳಿಗಾಗಿ ಧನ ಸಹಾಯ ಮಾಡುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ತೋರುವರು.

ತುಲಾ

07-Tula

ನಿಮ್ಮ ಮಾತಿನಲ್ಲಿನ ಅರ್ಥಪೂರ್ಣ ವಿನಯದಿಂದ ಗೆಲುವಿದೆ. ವಿನಯಶಾಲಿಯೇ ವಿಜಯಶಾಲಿ ಎಂಬುದು ನಿಮಗೆ ಮನದಟ್ಟಾಗುವುದು. ಇದು ಎಲ್ಲ ರಂಗದಲ್ಲಿರುವವರಿಗೂ ಅನ್ವಯಿಸುವಂತಹ ಮಾತಾಗಿರುತ್ತದೆ. ಹಣದ ಸಹಾಯ ಸಕಾಲದಲ್ಲಿ ದೊರೆಯುವುದು.

ವೃಶ್ಚಿಕ

08-Vrishika

ನಡೆಯುವ ವ್ಯಕ್ತಿ ಎಡುವುದು ಸಹಜ. ಹಾಗಂತ ಮನೆಯಲ್ಲಿಯೇ ಕುಳಿತಿರಲು ಆಗುವುದಿಲ್ಲ. ಆದರೆ ಪ್ರಯಾಣಿಸುವಾಗ ಶ್ರೀ ಲಕ್ಷ್ಮೀನಾರಸಿಂಹ ದೇವರನ್ನು ನೆನೆಯಿರಿ. ಗುರುವಿನ ಶ್ರೀರಕ್ಷೆ ಇರುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.

ಧನು

09-Dhanussu

ಸ್ವಜನರ ಚುಚ್ಚು ಮಾತುಗಳಿಂದ ಮನಸ್ಸಿಗೆ ಘಾಸಿ ಆಗುವುದು. ವಾಕ್‌ಸ್ಥಾನದ ಶನಿಯು ವ್ಯಯ ಸ್ಥಾನದಲ್ಲಿರುವುದರಿಂದ ನೀವಿಂದು ಆಡುವ ಮಾತುಗಳು ಅಪಾರ್ಥಕ್ಕೆ ಎಡೆ ಮಾಡಿಕೊಡುವುದು. ಎರಡು ಬಾರಿ ಚಿಂತಿಸಿ ಮಾತನಾಡಿ.

ಮಕರ

10-Makara

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎನ್ನುವಂತೆ ಈದಿನ ಗುಣವಂತ ಜನರ ಸಂಪರ್ಕ ಏರ್ಪಡುವುದು. ಹೊಸ ಹೊಸ ವಿಷಯಗಳನ್ನು ಅರಿಯುವಿರಿ. ಮನೆಯ ಸದಸ್ಯರು ನಿಮ್ಮ ಕಾರ್ಯಗಳಿಗೆ ಸಹಕಾರಿಯಾಗಿ ನಿಲ್ಲುವರು.

ಕುಂಭ

11-Kumbha

ಮಾಡಿದವರ ಪಾಪ ಆಡಿದವರ ಮೇಲೆ ಎನ್ನುವಂತೆ ನಿಮಗೆ ಸಂಬಂಧ ಪಡದವರ ವಿಚಾರವಾಗಿ ಮಾತನಾಡದಿರಿ. ಇದರಿಂದ ಈದಿನ ಎಲ್ಲರ ಎದುರು ಇರಸು-ಮುರಸಿಗೆ ಒಳಗಾಗುವಿರಿ. ನಿಮ್ಮ ಧಾರ್ಮಿಕ ನಿಷ್ಠೆ ನಿಮ್ಮನ್ನು ಕಾಪಾಡುವುದು.

ಮೀನ

12-Meena

ವಿದ್ವಾನ್‌ ಸರ್ವತ್ರ ಪೂಜ್ಯತೆ ಎನ್ನುವಂತೆ ವಿದ್ವತ್‌ ಉಳ್ಳ ನಿಮ್ಮನ್ನು ಎಲ್ಲರೂ ಆದರಿಸುವರು ಮತ್ತು ಗೌರವಿಸುವರು. ಹಣಕಾಸು ವಿವಿಧ ಮೂಲಗಳಿಂದ ಹರಿದು ಬರುವುದು.