ನಿತ್ಯ ಭವಿಷ್ಯ ಸೆಪ್ಟೆಂಬರ್ 20, 2017 (ಬುಧವಾರ)

0
1227

ಸೆಪ್ಟೆಂಬರ್ 20, 2017 (ಬುಧವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಉತ್ತರೆ ನಕ್ಷತ್ರ,

ಮೇಷ

01-Mesha

ನಿಮ್ಮ ಪ್ರಾಮಾಣಿಕ ಪ್ರಯತ್ನಗಳೇ ನಿಮ್ಮ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದರೆ ಶುದ್ಧ ಬಂಗಾರದಿಂದ ಒಡವೆಗಳನ್ನು ಮಾಡಲಾಗುವುದಿಲ್ಲ. ಅದಕ್ಕೆ ಸ್ವಲ್ಪವಾದರೂ ತಾಮ್ರದ ಲೇಪ ಬೇಕಾಗುತ್ತದೆ. ಅಂತೆಯೆ ನಿಮ್ಮ ಪ್ರಾಮಾಣಿಕತನಕ್ಕೆ ಸ್ವಲ್ಪ ಅಸತ್ಯದ ಕೊರತೆ ಇದೆ.

ವೃಷಭ

02-Vrishabha

ಭಗವಂತನ ಆರಾಧನೆಯಿಂದ ಈ ಭವದ ಹಂಗನ್ನು ತೊರೆಯಬಹುದು. ಅಂತೆಯೆ ಈ ದಿನದ ಮಾನಸಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಸ್ತುತಿಸಿರಿ. ಸಾಧ್ಯವಾದರೆ ಒಪ್ಪತ್ತು ಊಟ ಮಾಡಿರಿ.

ಮಿಥುನ

03-Mithuna

ನಿಮ್ಮದೇ ಆದ ಕೆಲವು ಯೋಜನೆಗಳನ್ನು ಮಾಡಲು ಹೆಣಗುತ್ತಿರುವಿರಿ. ಗುರು-ಹಿರಿಯರ ಆಶೀರ್ವಾದವಿದ್ದರೆ ಕ್ಲಿಷ್ಟಕರ ಕೆಲಸವೂ ಸರಾಗವಾಗುವುದು. ಈ ದಿನ ಸಕಾರಾತ್ಮಕವಾಗಿ ಚಿಂತಿಸಿ ಸಂಜೀವಿನಿಯನ್ನು ಪಡೆಯಿರಿ.

ಕಟಕ

04-Kataka

ಮಕ್ಕಳ ಅಭಿವೃದ್ಧಿಯಲ್ಲಿ ಪಂಚಮ ಶನಿಯು ಅಡೆತಡೆಯನ್ನು ಉಂಟು ಮಾಡುವರು. ದಶರಥ ಕೃತ ಶನಿಸ್ತೋತ್ರವನ್ನು ಪಠಿಸಿರಿ. ಈ ದಿನ ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ದೀಪವನ್ನು ಹಚ್ಚಿರಿ.

ಸಿಂಹ

05-Simha

ನಿಮ್ಮನ್ನು ರಕ್ಷಿಸುವ ಗ್ರಹಗಳು ಉತ್ತಮ ಸ್ಥಿತಿಯಲ್ಲಿರುವುದರಿಂದ ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ

06-Kanya

ಆರೋಗ್ಯವೇ ಭಾಗ್ಯ ಎಂದರು ಹಿರಿಯರು. ಈ ದಿನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿರಿ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಶಮನಗೊಳ್ಳುವುದು. ಸಂಘ-ಸಂಸ್ಥೆಗಳು ನಿಮ್ಮ ಬುದ್ಧಿಮತ್ತೆಯನ್ನು ಪ್ರಶಂಸಿಸಿ ಗೌರವ ತೋರುವರು.

ತುಲಾ

07-Tula

ಮನಸ್ಸಿನಲ್ಲಿ ನಾನಾ ತರಹದ ಹೊಯ್ದಾಟಗಳು ಕೆಲಸ ಕಾರ್ಯಗಳಲ್ಲಿ ವಿಘ್ನಗಳನ್ನು ತರುತ್ತವೆ. ಕೊನೆ ಹಂತದ ಶನಿಯು ನಿಮ್ಮ ಆತ್ಮಶಕ್ತಿಯನ್ನು ಪರೀಕ್ಷೆ ಮಾಡುತ್ತಿರುವರು. ಗಾಬರಿ ಬೇಡ. ಆಂಜನೇಯ ಸ್ತೋತ್ರ ಪಠಿಸಿ ಧನ್ಯರಾಗಿರಿ.

ವೃಶ್ಚಿಕ

08-Vrishika

ನಿಮ್ಮ ಮೃದು ಮಧುರ ಮಾತುಗಳಿಂದ ಜನರನ್ನು ನಿಮ್ಮತ್ತ ಸೆಳೆಯಲು ಪ್ರಯತ್ನಿಸುವಿರಿ. ಯೋಗ್ಯ ಜನರ ಸಲಹೆಯನ್ನು ಸ್ವೀಕರಿಸಿದಲ್ಲಿ ಈ ದಿನದ ಕಾರ್ಯಗಳಲ್ಲಿ ಅಧಿಕ ಯಶಸ್ಸನ್ನು ಹೊಂದುವಿರಿ.

ಧನು

09-Dhanussu

ಅನುಮಾನಂ ಪೆದ್ದ ರೋಗಂ ಎಂದರು ಹಿರಿಯರು. ಅಂತೆಯೆ ಈ ದಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದಲು ಅನುಮಾನವೇ ಮುಳುವಾಗುವುದು. ಆದಷ್ಟು ದೃಢತೆಯಿಂದ ಹೆಜ್ಜೆ ಹಾಕಿರಿ ಒಳಿತಾಗುವುದು.

ಮಕರ

10-Makara

ಧೈರ್ಯಶಾಲಿಯಾದ ನಿಮಗೆ ಗುರುವಿನ ಶ್ರೀರಕ್ಷೆ ಇರಲು ಬಾಳಿನಲ್ಲಿ ಆನಂದ ಸಂತೋಷ ಹೊಂದುವಿರಿ. ಕೌಟುಂಬಿಕ ಜೀವನದಲ್ಲೂ ಸಂತಸ ಕಂಡುಬರುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ.

ಕುಂಭ

11-Kumbha

ನಿಮ್ಮ ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು. ಕಚೇರಿಯಲ್ಲಿ ಹೊಸತಂತ್ರದ ಪ್ರಯೋಗ ಮಾಡುವಿರಿ. ಮತ್ತು ಅದರಲ್ಲಿ ಯಶಸ್ಸನ್ನು ಹೊಂದುವಿರಿ.

ಮೀನ

12-Meena

ಶಿಸ್ತಿನ ಸಿಪಾಯಿ ಆದ ನೀವು ಇಂದು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಇದು ಜನರಿಗೆ ಮಾದರಿ ಆಗುವುದು. ನಿಮ್ಮ ಜಾಡನ್ನು ಇತರೆಯವರು ಅನುಸರಿಸಿದರೂ ಅವರು ಯಶಸ್ಸು ಕಾಣುವುದಿಲ್ಲ. ದೈವದತ್ತವಾಗಿ ಬಂದ ನಿಮ್ಮ ಗುಣವು ಅನುಕರಣೀಯವಾಗಿರುತ್ತದೆ.