ನಿತ್ಯ ಭವಿಷ್ಯ ಸೆಪ್ಟೆಂಬರ್ 21, 2017 (ಗುರುವಾರ)

0
476

ಸೆಪ್ಟೆಂಬರ್ 21, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಹಸ್ತ ನಕ್ಷತ್ರ,

ಮೇಷ

01-Mesha

ಈ ದಿನ ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ-ಘನತೆಗೆ ಕುಂದುಂಟು ಮಾಡುವವು. ನವಗ್ರಹ ಸ್ತೋತ್ರ ಪಠಿಸಿರಿ.

ವೃಷಭ

02-Vrishabha

ಸರ್ಕಾರದ ಹೊಸ ಆರ್ಥಿಕ ನೀತಿಯು ಕೆಲವರಿಗೆ ಸಂಕಷ್ಟಗಳನ್ನು ತಂದಿರುವುದಾದರೂ ನಿಮ್ಮ ವಿಷಯದಲ್ಲಿ ಒಳಿತೇ ಆಗಿದೆ. ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿಯೇ ನಡೆಯುತ್ತವೆ. ಇದಕ್ಕೆಲ್ಲ ಗುರುವಿನ ಆಶೀರ್ವಾದವೇ ಕಾರಣ.

ಮಿಥುನ

03-Mithuna

ನಾನು ತಿಳಿದಿರುವುದೇ ಸತ್ಯ ಎಂಬ ಮೊಂಡುವಾದವನ್ನು ಮಾಡದಿರಿ. ಎದುರಾಳಿಯ ವಿಚಾರಧಾರೆಗಳನ್ನು ಕಿವಿಗೊಟ್ಟು ಆಲಿಸಿರಿ. ನಿಮ್ಮ ವಿರೋಧಿಗಳಿಗಿಂತ ನಿಮ್ಮ ಆತ್ಮೀಯರೇ ನಿಮಗೆ ಮೋಸ ಮಾಡುವರು.

ಕಟಕ

04-Kataka

ಮುಖ ನೋಡಿ ಮಣೆ ಹಾಕುವ ಮಂದಿಯಿಂದ ಬೇಸರ ಎದುರಾಗುವುದು. ಕಾಲವೇ ಹಾಗೆ. ಅದಕ್ಕಾಗಿ ಬೇಸರ ಮಾಡಿಕೊಳ್ಳದಿರುವುದು ಜಾಣರ ಲಕ್ಷ ಣ. ನಿಮಗೆ ನಿಮ್ಮದೇ ಆದ ವ್ಯಕ್ತಿತ್ವವಿದ್ದು ನಿಮ್ಮನ್ನು ಓಲೈಸುವ ಜನರಿಗಾಗಿ ಸ್ಪಂದಿಸಿರಿ.

ಸಿಂಹ

05-Simha

ಕುತರ್ಕ ಹಾಗೂ ಮುಂಗೋಪಗಳನ್ನು ನಿಯಂತ್ರಿಸಿ. ಇದರಿಂದ ನಿಮಗೆ ಲಾಭವಾಗುವುದು. ಎಲ್ಲಾ ಕಾಲಕ್ಕೂ ನಿಮ್ಮ ಮಾತೇ ನಡೆಯುವುದು ಎಂಬ ಭ್ರಮೆ ಬೇಡ. ಉತ್ತಮ ಸಲಹೆಗಳು ಇದ್ದರೆ ಅನ್ಯರಿಂದಲೂ ಸ್ವೀಕರಿಸುವುದು ತಪ್ಪಲ್ಲ.

ಕನ್ಯಾ

06-Kanya

ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲವಿದೆ. ಅನೇಕ ಉತ್ತಮ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವಿರಿ. ವಿರೋಧಿಗಳು ಸಹಾ ನಿಮ್ಮ ಕರ್ತೃತ್ವ ಶಕ್ತಿಯನ್ನು ಕಂಡು ಬೆರಗಾಗುವರು. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.

ತುಲಾ

07-Tula

ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿವಂದಿಸುವವರ ಸಂಖ್ಯೆ ಇಂದು ಹೆಚ್ಚಾಗುವುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು.

ವೃಶ್ಚಿಕ

08-Vrishika

ಸಂಕಷ್ಟದ ದಿನಗಳಿಂದ ಹೇಗೆ ಪಾರಾಗಬಹುದೆಂಬುದು ನಿಮ್ಮ ಅನುಭವ ತಿಳಿಸುತ್ತದೆ. ಈ ದಿನದ ಕ್ಲಿಷ್ಟಕರ ಸನ್ನಿವೇಶವನ್ನೂ ಸಹ ಭಗವಂತನ ದಯೆಯಿಂದ ಎದುರಿಸಿ ಯಶಸ್ಸನ್ನು ಹೊಂದುವಿರಿ.

ಧನು

09-Dhanussu

ಅತ್ಯಮೂಲ್ಯವಾದ ದಾಖಲೆ ಪತ್ರಗಳನ್ನು ಜತನದಿಂದ ಕಾಪಾಡುವುದು ಉತ್ತಮ. ಪ್ರವಾಸ ಸಮಯದಲ್ಲಿ ಅವುಗಳಿಗೆ ಸೂಕ್ತ ಭದ್ರತೆಯನ್ನು ಕಾಯ್ದುಕೊಳ್ಳಿರಿ. ಈ ದಿನ ಮಹತ್ತರ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ.

ಮಕರ

10-Makara

ಅಧ್ಯಾಪಕ ವೃತ್ತಿಯು ಗೌರವ ಘನತೆಯನ್ನು ತಂದುಕೊಡುವಂತಹದು. ಅಂತಹ ಮಹತ್ತರ ಹುದ್ದೆಯಲ್ಲಿರುವ ನೀವು ಕೆಲವು ಕೆಟ್ಟ ಸಂಗತಿಗಳಿಂದ ಆಪಾದನೆ ತೆಗೆದುಕೊಳ್ಳುವ ಸಂದರ್ಭ ಎದುರಾಗುವುದು. ಗುರುವಿನ ಕೃಪೆಯಿಂದ ಪಾರಾಗುವಿರಿ.

ಕುಂಭ

11-Kumbha

ನಿಮ್ಮ ಪೂರ್ವಿಕರ ಇತಿಹಾಸವನ್ನು ಬಲ್ಲ ಕೆಲವರು ನಿಮ್ಮನ್ನು ಆ ವಂಶಸ್ಥದವರು ಎಂದು ಗೌರವಿಸುವರು. ನಿಮ್ಮ ಮನೆತನಕ್ಕೆ ತಕ್ಕ ಘನತೆ, ಗಾಂಭೀರ್ಯವನ್ನು ಪ್ರದರ್ಶಿಸುವುದು ಇಂದಿನ ದೊಡ್ಡ ಸವಾಲಾಗಿರುವುದು.

ಮೀನ

12-Meena

ನಿಮ್ಮ ಹೃದಯಸ್ಪರ್ಶಿ ಮಾತುಗಳಿಂದಾಗಿ ಜನರು ನಿಮ್ಮತ್ತ ಆಕರ್ಷಿತರಾಗುವರು. ಮತ್ತು ನಿಮ್ಮ ಇಷ್ಟಾನಿಷ್ಟಗಳನ್ನು ಪೂರೈಸುವರು. ಸಮಾಜದಲ್ಲಿ ಮಾನಮನ್ನಣೆಗಳು ಆಗುವುದು. ಹಣವು ಕೂಡಾ ಸಾಕಷ್ಟು ದೊರೆಯುವುದು.