ನಿತ್ಯ ಭವಿಷ್ಯ ಸೆಪ್ಟೆಂಬರ್ 22, 2017 (ಶುಕ್ರವಾರ)

0
583

ಸೆಪ್ಟೆಂಬರ್ 22, 2017 (ಶುಕ್ರವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಬಿದಿಗೆ ತಿಥಿ,
ಚಿತ್ತೆ ನಕ್ಷತ್ರ,

ಮೇಷ

01-Mesha

ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ಉತ್ತಮ ಅವಕಾಶವಿದೆ. ಸಂದರ್ಭವನ್ನು ಸರಿಯಾಗಿ ಬಳಸಿಕೊಂಡಲ್ಲಿಯಶಸ್ಸಿನತ್ತ ಸಾಗುವಿರಿ. ನಿಮ್ಮ ಹಿತೈಷಿಗಳು ಬೆಂಗಾವಲಿಗೆ ನಿಲ್ಲುವರು.

ವೃಷಭ

02-Vrishabha

ಆಸ್ತಿಯ ವಿಚಾರದಲ್ಲಿಸಾಮ, ದಾನ, ಭೇದ, ದಂಡವನ್ನು ಉಪಯೋಗಿಸಬೇಕಾಗುವುದು. ಗುರುವಿನ ಶ್ರೀರûæ ಇರುವುದರಿಂದ ನಿಮ್ಮ ಮಾತಿಗೆ ಎಲ್ಲೆಡೆ ಗೌರವ ದೊರೆಯುವುದು.

ಮಿಥುನ

03-Mithuna

ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಇಂದು ನಿಮ್ಮ ಮೇಲೆ ಮಾಡುವ ಟೀಕೆಗಳಿಂದ ಉದ್ವಿಗ್ನರಾಗದೆ ಅದರ ಮೂಲ ಆಶಯವನ್ನು ಹುಡುಕಿರಿ. ಇದರಿಂದ ನೀವು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ.

ಕಟಕ

04-Kataka

ಬೆಳ್ಳಗಿರುವುದೆಲ್ಲಹಾಲಲ್ಲ. ಅಂತೆಯೇ ಈ ದಿನ ನಿಮ್ಮ ಜತೆ ಸ್ನೇಹಿತರಂತೆ ಆಪ್ತರಂತೆ ನಟಿಸುವ ಜನರು ನಿಮ್ಮ ವಿಚಾರಧಾರೆಗಳನ್ನು ತಿರುಚಿ ಅಪಪ್ರಚಾರ ಮಾಡುವರು. ಈ ಬಗ್ಗೆ ಎಚ್ಚರವಿರಲಿ.

ಸಿಂಹ

05-Simha

ನಿಮ್ಮ ಆಸ್ತಿ-ವಸ್ತು-ವಾಹನಗಳ ಬಗ್ಗೆ ನಿಖರವಾದ ಲೆಕ್ಕ ಪತ್ರಗಳನ್ನು ಒಂದೆಡೆ ಇಡಿ. ಸಿಂಹಸ್ಥ ರಾಹು ಕೆಲವೊಮ್ಮೆ ಭಯದ ವಾತಾವರಣವನ್ನು ಉಂಟು ಮಾಡುವನು. ಮತ್ತು ಕೆಲವರು ಕೋರ್ಟು-ಕಚೇರಿ ಎಂದು ಅಲೆಯಬೇಕಾಗುವುದು.

ಕನ್ಯಾ

06-Kanya

ಎಲ್ಲವೂ ಸುಗಮವಾಗಿ ಆಗುತ್ತಿದೆ ಎನ್ನುತ್ತಿರುವಾಗಲೇ ದೂರದ ಊರಿನಿಂದ ಬರುವ ಅಪ್ರಿಯ ವಾರ್ತೆಯು ನಿಮ್ಮ ಮನಸ್ಸನ್ನು ಕಲಕುವುದು. ಅಂತೆಯೇ ಹಿಂದಿನ ಹಳೆಯ ದಿನಗಳು ಮನಃಪಟಲದಲ್ಲಿಹಾದು ಹೋಗುವುದು.

ತುಲಾ

07-Tula

ನೀವು ಬಯಸಿದಷ್ಟು ವೇಗದಿಂದ ಕೆಲಸ ಪೂರೈಸಲು ಕಷ್ಟವಾಗುವುದು. ಏಕೆಂದರೆ ಸಮಾಜದಲ್ಲಿಆರ್ಥಿಕ ಪರಿಸ್ಥಿತಿಯು ನಿಮ್ಮ ಇಚ್ಛಿತ ಕಾರ್ಯಗಳಿಗೆ ತಡೆ ಒಡ್ಡುವುದು. ಕೂಡಿಟ್ಟ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ.

ವೃಶ್ಚಿಕ

08-Vrishika

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಈಗಿನ ವಾತಾವರಣದಲ್ಲಿಆಸ್ತಿ ಜಮೀನು ಕೊಳ್ಳಲು, ಷೇರು ಬಜಾರಿನಲ್ಲಿಹಣ ಹೂಡಲು ಇಲ್ಲವೇ ಬಂಗಾರ ಖರೀದಿ ಮಾಡಲು ಇಂದು ಸಕಾಲವಾಗಿದೆ. ಧೈರ್ಯದಿಂದ ಮುನ್ನುಗ್ಗಿ.

ಧನು

09-Dhanussu

ಕುಟುಂಬದ ಸಮಸ್ಯೆಗಳು ದಿನಕ್ಕೊಂದು ಹೊಸ ರೂಪ ಪಡೆಯುತ್ತಿರುವುದರಿಂದ ಅದರಿಂದ ಪಾರಾಗುವ ದಾರಿಯನ್ನು ಹುಡುಕುತ್ತಿರುವಿರಿ. ನಿಮ್ಮ ಮನೆಯ ಗುರುಗಳನ್ನ ಅಥವಾ ಹಿತೈಷಿಗಳ ಸಲಹೆ ಪಡೆಯಿರಿ.

ಮಕರ

10-Makara

ಹಣದ ಹರಿವು ಬಿಗಿಯಾಗಿರುವುದರಿಂದ ಯಾವ ಕೆಲಸವೂ ಸರಿಯಾಗಿ ಸಕಾಲದಲ್ಲಿಆಗುತ್ತಿಲ್ಲ. ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ ಮತ್ತು ಮಾತಾ ದುರ್ಗಾದೇವಿಯ ಮಂತ್ರವನ್ನು ಪಠಿಸಿ.

ಕುಂಭ

11-Kumbha

ಯಾರು ಸ್ನೇಹಿತರು, ಯಾರು ಕೇಡು ಬಗೆಯುವವರು ಎಂಬ ಗೊಂದಲದಲ್ಲಿಈ ದಿನ ಕಳೆದು ಹೋಗುವುದು. ಇದಕ್ಕಾಗಿ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಪ್ರಯತ್ನ ಮಾಡಿ.

ಮೀನ

12-Meena

ಶಿಸ್ತಿನ ಸಿಪಾಯಿ ಆಗಿರುವ ನಿಮಗೆ ಹತ್ತಿರದವರೂ ಸಹಾಯ ಕೇಳಲು ಹಿಂಜರಿಯುವ ಸಾಧ್ಯತೆ ಇದೆ. ಆದರೆ ಅವರೆಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಂಡು ಹೃದಯ ವೈಶಾಲ್ಯತೆಯನ್ನು ತೋರ್ಪಡಿಸಿ.