ಸೆಪ್ಟೆಂಬರ್ 25, 2017 (ಸೋಮವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ಶರದೃತುಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಅನೂರಾಧ ನಕ್ಷತ್ರ,
ಮೇಷ
ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೀರಿ. ಆದರೆ ಗ್ರಹಗತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಒಂದು ರೀತಿಯ ಸಮಾಧಾನಕರ ಮನೋಭಾವ ಪಡೆದು ಹರ್ಷಿಸಲು ಕಾಲ ಸಾಧ್ಯ ಮಾಡಿಕೊಡುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾಯದೆ ವಿಧಿ ಇಲ್ಲ.
ವೃಷಭ
ಇಂದು ನೀವು ಇಚ್ಛಾಶಕ್ತಿಯನ್ನು ಕ್ರೋಡಿಕರಿಸಿಕೊಂಡು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಇದಕ್ಕೆ ಪೂರಕವಾಗಿ ಗ್ರಹಗಳು ಬೆಂಬಲ ಸೂಚಿಸುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಕಡಿಮೆ ಆಗುವುದು.
ಮಿಥುನ
ವ್ಯಾವಹಾರಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನ ಬೇರೆ ಬೇರೆ. ಎರಡರಲ್ಲೂ ಏಕಕಾಲಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಸದ್ಯದ ಹಣಕಾಸಿನ ಸ್ಥಿತಿಯು ಉತ್ತಮವಾಗಿಲ್ಲದ ಕಾರಣ ಹಣ ಗಳಿಕೆಯ ವ್ಯಾವಹಾರಿಕ ಜೀವನವೇ ಇಂದಿನ ಮುಖ್ಯ ಗುರಿ.
ಕಟಕ
ನಿಮ್ಮ ರಾಶಿಯ ಅಧಿಪತಿ ಚಂದ್ರ ನಿಮ್ಮ ರಾಶಿಯಲ್ಲಿಯೆ ಸಂಚರಿಸುತ್ತಾ ದ್ವಂದ್ವ ಮನಸ್ಸನ್ನು ನೀಡುತ್ತಿರುವನು. ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲು ಈ ದಿನ ಸೋಲುವಿರಿ. ಶಿವನ ಆರಾಧನೆಯಿಂದ ಒಳಿತಾಗುವುದು.
ಸಿಂಹ
ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರೂ ಸಾಮಾಜಿಕ ಕ್ಷೇತ್ರದಲ್ಲಿ ಟೀಕೆ ತಪ್ಪುವುದಿಲ್ಲ ಎಂಬ ನಿಮ್ಮ ಭಾವನೆ ಸರಿ. ನಡೆಯುವ ವ್ಯಕ್ತಿ ಎಡವುವನೇ ಹೊರತು ಕುಳಿತುಕೊಂಡ ವ್ಯಕ್ತಿ ಎಡವುದಿಲ್ಲ. ಆದ್ದರಿಂದ ಟೀಕೆಗಳಿಗೆ ಹೆದರದೆ ಮುನ್ನುಗ್ಗಿರಿ.
ಕನ್ಯಾ
ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಕೆಲವು ವಿಷಯಗಳಿಗೆ ನಿಷ್ಠುರವಾಗಿಯೇ ಮಾತನಾಡಬೇಕಿದೆ. ಯಾಕೆಂದರೆ ಹಲಸಿನ ಹಣ್ಣು ಹೆಚ್ಚಲು ಚೂಪಾದ ಸೂಜಿಯು ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹರಿತವಾದ ಕತ್ತಿಯೇ ಬೇಕು.
ತುಲಾ
ಸ್ವಂತ ದುಡಿಮೆಯು ಒಳ್ಳೆಯದೆ. ಆದರೆ ಅದಕ್ಕೆ ಪರಿಶ್ರಮ ಹೆಚ್ಚು ಬೇಕು. ಹೆಚ್ಚು ಪರಿಶ್ರಮ ಹಾಕಲು ನಿಮ್ಮಿಂದ ಆಗುತ್ತಿಲ್ಲ. ಅಂತೆಯೇ ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವುದು ಒಳ್ಳೆಯದು. ಮುಂಗೋಪತನವನ್ನು ಕಡಿಮೆ ಮಾಡಿಕೊಳ್ಳಿ.
ವೃಶ್ಚಿಕ
ಲಾಭಸ್ಥಾನದ ಗುರುವು ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಸದೃಢನನ್ನಾಗಿ ಮಾಡುವುದು. ಸಮಾಜದಲ್ಲಿ ಅಧಿಕಾರ ಕೀರ್ತಿ, ಗೌರವವನ್ನು ತಂದು ಕೊಡುವುದು. ಆದರೆ ನಿಮ್ಮ ನಡೆಯನ್ನು ಎಚ್ಚರಿಸುವ ಜನಗಳಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಧನು
ಎಷ್ಟೇ ಜಾಗರೂಕರಾಗಿದ್ದರೂ ಆಸ್ತಿಯ ವಿಷಯದಲ್ಲಿನ ತೀರ್ಪು ಅನ್ಯರ ಪಾಲಾಗುವುದು. ವ್ಯರ್ಥವಾಗಿ ಕೋರ್ಟು ಕಚೇರಿಗಳಲ್ಲಿ ಹಣ ವ್ಯಯವಾಗುವುದು. ಹಾಗಾಗಿ ನಿಮ್ಮ ವಕೀಲರನ್ನು ಕಂಡು ವ್ಯಾಜ್ಯಗಳನ್ನು ಮುಂದೂಡಿಸಿಕೊಳ್ಳಿರಿ.
ಮಕರ
ಸಮತೋಲನ ಮನಸ್ಥಿತಿಯಿಂದಾಗಿ ಸಮಯೋಚಿತ ನಿರ್ಧಾರ ತಳೆಯುವುದರಿಂದ ಈ ದಿನ ಮಹತ್ತರವಾದ ಗೆಲುವನ್ನು ಕಾಣುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಗುರುಹಿರಿಯರ ಆಶೀರ್ವಾದ ಪಡೆಯಿರಿ.
ಕುಂಭ
ನಿಮಗೆ ನಿಮ್ಮದೆ ಆದ ಸ್ನೇಹಿತರ ಬಳಗವಿದೆ. ಅವರೆಲ್ಲರು ನಿಮ್ಮನ್ನು ಅನುಮಾನಿಸದಂತೆ ನೋಡಿಕೊಳ್ಳಿರಿ. ಅವರಿಂದ ನಿಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಹಸ್ತ ಸಿಗುತ್ತದೆ. ನಿಮ್ಮ ಬದುಕಿನ ವಿಚಾರಗಳು ಯಾವಾಗಲೂ ಶಿಸ್ತನ್ನು ಬಯಸುತ್ತವೆ.
ಮೀನ
ಮನಸ್ಸಿನ ಪ್ರಶಾಂತತೆಯಿಂದ ಹಿಡಿದ ಕೆಲಸಗಳು ಪೂರ್ಣಗೊಳ್ಳುವವು. ನಿರಂತರವಾದ ಪ್ರಯೋಗಗಳು ಒಂದು ರೀತಿಯ ಜಡತ್ವವನ್ನು ತೊಡೆದು ಹಾಕುವುದು. ಇತರೆಯವರು ನಿಮ್ಮನ್ನು ಮಾದರಿ ವ್ಯಕ್ತಿ ಎಂದು ಗುರುತಿಸುವರು.