ಸೆಪ್ಟೆಂಬರ್ 26, 2017 (ಮಂಗಳವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ಶರದೃತುಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಜ್ಯೇಷ್ಠ ನಕ್ಷತ್ರ,
ಮೇಷ
ವೈಯಕ್ತಿಕ ವಿಚಾರಗಳನ್ನು ಪರರ ಮುಂದೆ ಹೇಳಿ ನಗೆಪಾಟಲಿಗೆ ಒಳಗಾಗದಿರಿ. ನಿಮ್ಮ ಸಂಗಾತಿಗೆ ಈ ದಿನ ಆತ್ಮಸ್ಥೈರ್ಯವನ್ನು ತುಂಬುವಿರಿ. ಮಗಳ ವಿವಾಹ ಸಮಸ್ಯೆಗೆ ಒಂದು ಪರಿಹಾರ ದೊರೆಯುವುದು. ದೇವಿ ಆರಾಧನೆಯಿಂದ ಒಳಿತಾಗುವುದು.
ವೃಷಭ
ನಿಮ್ಮ ಮೇಲಿನ ಪ್ರೀತಿ ಅನುರಾಗಗಳನ್ನು ಈ ಹಿಂದಿನಂತೆ ನಿಮ್ಮ ಗೆಳೆಯರು ತೋರುತ್ತಿಲ್ಲ ಎಂಬ ಕೊರಗು ಈ ದಿನ ಕಾಡುವುದು. ನಂಬಿದ ಸ್ನೇಹಿತರು ನಿಮ್ಮಿಂದ ದೂರ ಸರಿಯುವರು. ಸಣ್ಣಪುಟ್ಟ ಅನಾರೋಗ್ಯದ ದೆಸೆಯಿಂದ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ.
ಮಿಥುನ
ಕಚೇರಿ ಕೆಲಸದ ಒತ್ತಡದಿಂದ ಹೈರಾಣಾಗುವಿರಿ. ಕಚೇರಿಯ ಒತ್ತಡವನ್ನು ಅಲ್ಲೆ ಬಿಟ್ಟು ಮನೆಯಲ್ಲಿ ಮನೆ ಮಂದಿಯ ಜೊತೆ ಬೆರೆಯಿರಿ. ಇದರಿಂದ ನಿಮ್ಮ ಸಂಗಾತಿ ಮತ್ತು ಮಕ್ಕಳ ಪ್ರೀತಿ ವಿಶ್ವಾಸವನ್ನು ಪಡೆಯುವಿರಿ.
ಕಟಕ
ನಿಮ್ಮ ಅದೃಷ್ಟಕ್ಕೆ ಇಂದು ಸುಗಮ ದಾರಿಗಳಿದ್ದು ಯಶಸ್ಸಿನ ಶಿಖರ ತಲುಪುವಿರಿ. ಪರಾಕ್ರಮ ಕೆಲಸಗಳಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ಯಶಸ್ಸಿನ ಹಿನ್ನಡೆಯಲ್ಲಿ ಅಹಂಕಾರದ ಮಾತುಗಳನ್ನು ಆಡದಿರಿ. ಇದರಿಂದ ಕೆಲವರ ವಿರೋಧವನ್ನು ಕಟ್ಟಿಕೊಳ್ಳುವಿರಿ.
ಸಿಂಹ
ಮನೆಯಲ್ಲಿನ ವಾತಾವರಣವು ನಿಮ್ಮ ಸೂಕ್ಷ ್ಮ ಮನಸ್ಸನ್ನು ಕಲುಕುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿದಲ್ಲಿ ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗುವುದು. ಮಗನ ಮದುವೆಯ ವಿಷಯವು ಈ ದಿನ ಹೆಚ್ಚು ಚಿಂತೆಯನ್ನುಂಟು ಮಾಡುವುದು.
ಕನ್ಯಾ
ಪತಿ-ಪತ್ನಿಯ ಮಧ್ಯೆ ಮನಸ್ತಾಪಗಳು ವಿರಸಗಳು ಉಂಟಾಗುವ ಸಾಧ್ಯತೆ. ಸಣ್ಣ ವಿಷಯವನ್ನು ದೊಡ್ಡದು ಮಾಡುವುದು ಒಳ್ಳೆಯದಲ್ಲ. ಆದಷ್ಟು ಮೌನವ್ರತ ಮಾಡಿರಿ. ಶಿವಸ್ತುತಿಯನ್ನು ಪಠಿಸುವುದು ಉತ್ತಮ.
ತುಲಾ
ಸ್ವಯಂಕೃತ ಅಪರಾಧಗಳಿಗೆ ಇತರೆಯವರನ್ನು ದೂರಿ ಪ್ರಯೋಜನವಿಲ್ಲ. ಅದಷ್ಟು ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿರಿ. ದೂರದ ಬಂಧುವಲಯದಿಂದ ನಿರೀಕ್ಷೆಗೂ ಮೀರಿ ಸಹಾಯ ಬರುವುದು. ಬರುವ ಸಹಾಯವನ್ನು ತಿರಸ್ಕರಿಸದಿರಿ.
ವೃಶ್ಚಿಕ
ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಂಭವವಿರುತ್ತದೆ. ಆದರೆ ಧೈರ್ಯಗುಂದುವ ಕಾರಣವಿಲ್ಲ. ಗುರುವಿನ ಶುಭ ಸಂಚಾರದಿಂದ ಒಳಿತಾಗುವುದು. ಪ್ರಯಾಣದಲ್ಲಿ ಎಚ್ಚರಿಕೆಯಿರಲಿ. ಸ್ನೇಹಿತರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡದಿರಿ.
ಧನು
ದುಡ್ಡಿದ್ದವನೇ ದೊಡ್ಡಪ್ಪ. ಆದರೆ ಈ ದಿನ ಹಣಕಾಸು ಬರುವ ವಿಚಾರದಲ್ಲಿ ವಿಳಂಬತೆ ತೋರುವುದು. ಧನಸ್ಥಾನದ ಶನಿಯು ವ್ಯಯಸ್ಥಾನದಲ್ಲಿ ಇರುವುದರಿಂದ ಅನಾವಶ್ಯಕ ಖರ್ಚುಗಳು ಉಂಟಾಗುವುದು. ಖರ್ಚಿನ ವಿಷಯದಲ್ಲಿ ಜಾಗರೂಕರಾಗಿರಿ.
ಮಕರ
ಬಹಳ ದಿನಗಳ ಯೋಜನೆಯು ಕಾರ್ಯ ರೂಪಕ್ಕೆ ಬರುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಆದರೆ ಕಾರ್ಯ ಯೋಜನೆಗೆ ತರಾತುರಿ ಬೇಡ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.
ಕುಂಭ
ನಿಮ್ಮ ಮೇಲೆ ನೀವು ನಂಬಿಕೆಯನ್ನು ಇಟ್ಟುಕೊಳ್ಳಿರಿ. ಆತ್ಮವಿಶ್ವಾಸವೇ ಆತ್ಮೋನ್ನತಿಗೆ ದಾರಿ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಹಸ್ತಕ್ಷೇಪ. ಕೆಲಸವನ್ನು ಅತಿಶ್ರದ್ಧೆಯಿಂದ ಮಾಡಿರಿ.
ಮೀನ
ಗುರುವಿನ ಆಶೀರ್ವಾದವಿದೆ. ಕೌಟುಂಬಿಕ ನೆಮ್ಮದಿಗಾಗಿ ಸಹೋದರಿಯರ ನೆರವು ಪಡೆಯುವಿರಿ. ಮಕ್ಕಳು ನಿಮ್ಮ ಇಚ್ಛೆಗೆ ತಕ್ಕಂತೆ ನಡೆಯುವರು. ಖಾಸಗಿ ನೌಕರದಾರರಿಗೆ ಉತ್ತಮ ದಿನ.