ನಿತ್ಯ ಭವಿಷ್ಯ ಸೆಪ್ಟೆಂಬರ್ 28, 2017 (ಗುರುವಾರ)

0
615

ಸೆಪ್ಟೆಂಬರ್ 28, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ಶರದೃತುಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಪೂರ್ವಾಷಾಢ ನಕ್ಷತ್ರ,

ಮೇಷ

01-Mesha

ಹಲವು ದಿನಗಳಿಂದ ಬಾಕಿಯಿರುವ ನಿಮ್ಮ ಕೆಲಸಗಳು ಇಂದು ಅಂತಿಮಗೊಳ್ಳಲಿದ್ದು, ಎಲ್ಲವೂ ಸುಖಾಂತ್ಯವಾಗಲಿದೆ. ಮನೆಯಲ್ಲಿನ ಹಿರಿಯರ ಕುರಿತು ಚಿಂತೆ ಉಂಟಾಗುವುದು. ಮಕ್ಕಳ ಅಭಿವೃದ್ಧಿಯಲ್ಲಿ ಪ್ರಗತಿ ಕಂಡುಬರುವುದು.

ವೃಷಭ

02-Vrishabha

ಶುಭ ಸುದ್ದಿಗಳ ಮಹಾಪೂರವೇ ಇಂದು ನಿಮ್ಮತ್ತ ಹರಿದು ಬರಲಿದೆ. ಹಳೆಯ ವಿಚಾರಗಳಿಗೆ ಜೋತು ಬೀಳದೆ ಹೊಸ ವಿಚಾರಗಳತ್ತ ಗಮನಹರಿಸಿ. ಬದಲಾದ ಕಾಲಘಟ್ಟದಲ್ಲಿ ನೀವು ಬದಲಾಗುವುದು ಅನಿವಾರ್ಯ.

ಮಿಥುನ

03-Mithuna

ವ್ಯಾಪಾರ, ವ್ಯವಹಾರದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ. ಆದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಸಂಜೆಯ ವೇಳೆಗೆ ಆಶಾದಾಯಕ ಎಂಬಂತೆ ವ್ಯಾಪಾರದಲ್ಲಿ ಚೇತರಿಕೆ ಕಂಡುಬರುವುದು. ಹಾಕಿದ್ದ ಬಂಡವಾಳಕ್ಕೆ ಹಾನಿ ಇಲ್ಲ.

ಕಟಕ

04-Kataka

ಸ್ನೇಹಿತನಿಂದ ಬಾಕಿ ಬರಬೇಕಾಗಿದ್ದ ಹಣವು ಕೈ ಸೇರುವುದು. ಉಪಾಧ್ಯಾಯ ವೃತ್ತಿಯಲ್ಲಿರುವವರಿಗೆ ಸನ್ಮಾನಗಳು ಏರ್ಪಡುವವು. ಮಕ್ಕಳ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡು ಬರುವುದು. ಮನೆದೇವರನ್ನು ಮನಸಾ ಸ್ಮರಿಸಿರಿ.

ಸಿಂಹ

05-Simha

ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದೆ ಇರುವುದು ಒಳಿತು. ಅಂತೆಯೆ ವಾಹನದಲ್ಲಿ ಸಂಚರಿಸುವಾಗ ಶಿರಸ್ತ್ರಾಣ ಧರಿಸದೆ ಇದ್ದುದಕ್ಕೆ ದಂಡ ತೆರಬೇಕಾಗುವುದು. ಈ ಬಗ್ಗೆ ಮುಂಚೆಯೆ ಆಲೋಚಿಸುವುದು ಒಳ್ಳೆಯದು.

ಕನ್ಯಾ

06-Kanya

ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಕ್ಷೇತ್ರದಲ್ಲಿರುವವರಿಗೆ ಅನುಕೂಲವಿದೆ. ಮರೆಗುಳಿತನದಿಂದ ಕೆಲವೊಮ್ಮೆ ದಂಡ ತೆರಬೇಕಾಗುವುದು. ವಾಹನದಲ್ಲಿ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಪ್ರಯಾಣ ಬೆಳೆಸಿರಿ.

ತುಲಾ

07-Tula

ನೂತನ ಒಪ್ಪಂದಗಳನ್ನು ಎಚ್ಚರಿಕೆಯಿಂದ ನಿಭಾಯಿಸುವುದು ಒಳ್ಳೆಯದು. ಇಷ್ಟಪಟ್ಟ ವ್ಯವಹಾರದಲ್ಲಿ ಕಷ್ಟವಿರಲಾರದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮನೆಯ ಕಡೆಯಿಂದಲೂ ಉತ್ತಮ ಪ್ರೋತ್ಸಾಹ ದೊರೆಯುವುದು.

ವೃಶ್ಚಿಕ

08-Vrishika

ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿವೆ. ಸಾಡೇಸಾತ್‌ ಶನಿಯು ಸ್ವಲ್ಪ ಅಧೈರ್ಯವನ್ನುಂಟು ಮಾಡಿದರೂ ಧೈರ್ಯದಿಂದ ಮುನ್ನುಗ್ಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿರಿ. ಸ್ಥಿರಾಸ್ಥಿ ಖರೀದಿಯಲ್ಲಿ ಉತ್ತಮ ಫಲ ದೊರೆಯುವುದು.

ಧನು

09-Dhanussu

ಸಂಬಂಧಿಕರ ಆಗಮನದಿಂದ ಮನಃಶಾಂತಿ ಲಭಿಸಲಿದೆ. ಕಚೇರಿ ಕೆಲಸಗಳಲ್ಲೂ ಅಚ್ಚುಕಟ್ಟುತನ ಮೂಡಿಬರಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತು ಕೇಳಿಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮಕರ

10-Makara

ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ. ಆನೆಯಾಗಿ ಕಬ್ಬನ್ನು ಅಗಿಯುವುದಕ್ಕಿಂತ ಇರುವೆ ಆಗಿ ಸಕ್ಕರೆ ಮೆಲ್ಲುವುದು ಮೇಲು ಎಂಬಂತೆ ಅಲ್ಪ ಪ್ರಮಾಣದ ಲಾಭ ನಿರಂತರವಾಗಿ ನಿಮಗೆ ಒದಗುವುದು. ದಿನದ ಅಂತ್ಯದಲ್ಲಿ ಅದೇ ದೊಡ್ಡ ಮೊತ್ತವಾಗುವುದು.

ಕುಂಭ

11-Kumbha

ವಿವಾಹ ಯೋಗ್ಯ ವಧು-ವರರಿಗೆ ಸಂತಸದ ದಿನವಿದು. ನಿಮ್ಮ ಮನೋಕಾಮನೆಗಳು ಕೈಗೂಡುವ ಶುಭ ದಿನ. ಇದರಿಂದ ಮನಸ್ಸು ಹಕ್ಕಿಯಂತೆ ಹಾರಾಡುವುದು. ಸ್ನೇಹಿತರು ಸಕಾಲದಲ್ಲಿ ಉತ್ತಮ ಸಲಹೆ ನೀಡುವರು.

ಮೀನ

12-Meena

ಈ ದಿನ ಪ್ರಯಾಣವನ್ನು ಮಾಡದಿರುವುದೇ ಒಳ್ಳೆಯದು. ದೂರವಾಣಿ ಮೂಲಕ ಸಂಭಾಷಿಸಿ ಈ ದಿನವನ್ನು ಮನೆಯಲ್ಲಿಯೇ ಕಳೆಯುವುದು ಒಳ್ಳೆಯದು. ಕಚೇರಿಯಲ್ಲಿನ ಒತ್ತಡ ಕೆಲಸಗಳಿಗೆ ವಿರಾಮ ಹಾಕಿರಿ.