ನಿತ್ಯ ಭವಿಷ್ಯ ಅಕ್ಟೋಬರ್ 2, 2017 (ಸೋಮವಾರ)

0
500

ಮೇಷ

01-Mesha

ಕೆಲವು ಕೌಟುಂಬಿಕ ವಿಚಾರಗಳು ಮತ್ತು ಕಚೇರಿಯ ವಿಚಾರಗಳು ಆತಂಕ ನೀಡಲಿದೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಭಗವಂತನ ಮೊರೆ ಹೋಗುವುದೇ ಸದ್ಯದ ಉಪಾಯ.

ವೃಷಭ

02-Vrishabha

ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಈ ದಿನದ ಕಾರ್ಯಗಳೆಲ್ಲವೂ ನಿಮ್ಮ ಧೈರ್ಯವನ್ನೆ ಅವಲಂಬಿಸಿರುವುದು. ಬಂದ ಆಪಾದನೆಗಳನ್ನು ಎದುರಿಸುವಿರಿ. ಮಕ್ಕಳ ವಿಚಾರದಲ್ಲಿ ಪ್ರಗತಿ ಉಂಟಾಗುವುದು.

ಮಿಥುನ

03-Mithuna

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶಾಲಾ-ಕಾಲೇಜಿನ ಕಾರ್ಯ ಕ್ಷೇತ್ರಗಳಲ್ಲಿ ಅವರು ಪಾರಿತೋಷಕ ತರುವರು. ಇದರಿಂದ ಮಕ್ಕಳ ಮೇಲೆ ಮಮತೆ ಹೆಚ್ಚಾಗುವುದು. ಈ ದಿನದ ಖರ್ಚಿಗೆ ತಕ್ಕಷ್ಟು ಹಣ ಸಂದಾಯವಾಗುವುದು.

ಕಟಕ

04-Kataka

ಪ್ರಯಾಣಗಳಿಂದ ನಿರೀಕ್ಷಿತ ಯೋಜನೆಗಳು ಕೈಗೂಡುವುದು. ಅಪರಿಚಿತರೊಡನೆ ಸ್ನೇಹ, ಸಲುಗೆ ಬೇಡ. ತಾಳ್ಮೆ ಜೊತೆಗಿರಲಿ. ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

ಸಿಂಹ

05-Simha

ವಾಣಿಜ್ಯ ವ್ಯವಹಾರಗಳಲ್ಲಿ ಯಶಸ್ಸು. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಮೊಳಕೆಯಲ್ಲಿ ಚಿವುಟಿ ಹಾಕಿರಿ. ಅದು ಬೆಳೆಯದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ನಿಮ್ಮ ನಾಯಕತ್ವ ಗುಣವು ಎಲ್ಲರಿಂದ ಪ್ರಶಂಸೆಗೆ ಒಳಗಾಗುವುದು.

ಕನ್ಯಾ

06-Kanya

ಹೊಸ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ನಿಮ್ಮನ್ನು ವಿರೋಧಿಸುತ್ತಿದ್ದವರು ಈ ದಿನ ನಿಮ್ಮನ್ನು ಬೆಂಬಲಿಸುವರು. ವ್ಯಯಸ್ಥಾನದ ರಾಹು ಮನೆಯಲ್ಲಿ ಸಣ್ಣಪುಟ್ಟ ವಾದ ವಿವಾದಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ದುರ್ಗಾ ಜಪ ಮಾಡಿರಿ.

ತುಲಾ

07-Tula

ವೃತ್ತಿಯಲ್ಲಿ ಸಂಕಷ್ಟದಿಂದ ಪಾರಾಗುವಿರಿ. ಆಪ್ತರು, ಬಂಧುಜನರು ನಿಮಗೆ ಸಹಾಯಹಸ್ತ ನೀಡುವರು. ಸಂಜೆಯ ವೇಳೆಗೆ ಹಿರಿಯಯೊಬ್ಬರಿಂದ ಅಧಿಕ ಮೊತ್ತದ ಸಹಾಯ ದೊರೆಯುವುದು.

ವೃಶ್ಚಿಕ

08-Vrishika

ಕಲಾಕಾರರಿಗೆ, ಚಿತ್ರ ಕಲಾವಿದರಿಗೆ ಈ ದಿನ ಅತ್ಯಂತ ಹರ್ಷದ ದಿನ. ಅವರು ನಟಿಸಿದ ಸಿನಿಮಾಗಳು ಅತ್ಯಂತ ಜನಮೆಚ್ಚುಗೆ ಪಡೆಯುವುದು. ಎಲ್ಲವೂ ಗುರುವಿನ ಮಹಿಮೆ. ಗುರುವಿಗೊಂದು ಕೃತಜ್ಞತೆ ಅರ್ಪಿಸಿರಿ.

ಧನು

09-Dhanussu

ಎದುರಾಳಿಗಳಿಂದ ಕಿರಿಕಿರಿಯಿರಿ. ಅವಸರ ಬೇಡ. ಎದುರಾಳಿಗಳ ಬಲವನ್ನು ನಿಖರವಾಗಿ ತಿಳಿದು ಮುನ್ನುಗುವುದು ಒಳಿತು. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಿರುವುದಿಲ್ಲ. ಗುರುವಿನ ಸ್ತೋತ್ರ ಪಠಿಸಿರಿ. ಈ ದಿನ ಕಡಲೆಕಾಳನ್ನು ದಾನ ಮಾಡಿರಿ.

ಮಕರ

10-Makara

ಹಣಕಾಸಿನ ವಿಷಯದಲ್ಲಿ ದ್ವಂದ್ವತೆ ಕಾಡುವುದು. ಯಾರಿಗೂ ಸಾಲ ಕೊಡಬೇಡಿ. ಮತ್ತೊಬ್ಬರ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸದಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

ಕುಂಭ

11-Kumbha

ಹಲವು ನಿಂದನೆಗಳು ಅಪವಾದಗಳು ಈ ದಿನ ಬರುವ ಸಾಧ್ಯತೆ ಇರುವುದು. ಆದಷ್ಟು ಈ ದಿನ ತಾಳ್ಮೆಯಿಂದ ಇರಿ. ವೃತ್ತಿಯಲ್ಲಿ ತೊಂದರೆಯಿದೆ. ಆಹಾರ ವಿಹಾರದಲ್ಲಿ ಎಚ್ಚರಿಕೆ ಅಗತ್ಯ. ಕೌಟುಂಬಿಕ ಕಲಹದಿಂದ ಬೇಸರಗೊಳ್ಳುವಿರಿ.

ಮೀನ

12-Meena

ಮಕ್ಕಳ ವಿಚಾರವಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳುವಿರಿ. ಸಂಸಾರದಲ್ಲಿ ಸುಖ, ಸಂತೋಷ ನೆಮ್ಮದಿ ಕಾಣುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಹಣಕಾಸು ವಿವಿಧ ಮೂಲಗಳಿಂದ ಬರುವುದು.